ಶೋಗೆ ತಡವಾಗಿ ಬಂದಿದ್ದಕ್ಕೆ ಪ್ರೇಕ್ಷಕರ ಆಕ್ರೋಶ; ವೇದಿಕೆಯಲ್ಲೇ 'ಗಳಗಳನೆ' ಕಣ್ಣೀರಿಟ್ಟ ನೇಹಾ ಕಕ್ಕರ್! ವಿಡಿಯೋ

ರಾತ್ರಿ 7-30ಗೆ ಆಯೋಜಿಸಿದ್ದ ಶೋಗೆ ರಾತ್ರಿ 10 ಗಂಟೆಗೆ ಬಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು 'ಗೋ ಬ್ಯಾಕ್ ಗೋ ಬ್ಯಾಕ್ '' ಅಂತಾ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Neha Kakkar
ವೇದಿಕೆಯಲ್ಲೇ ಕಣ್ಣೀರಿಟ್ಟ ನೇಹಾ ಕಕ್ಕರ್
Updated on

ನವದೆಹಲಿ: ಬಾಲಿವುಡ್‌ನ ಜನಪ್ರಿಯ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಸಂಗೀತದ ಕಾರಣದಿಂದ ಅಲ್ಲ, ಕಾರ್ಯಕ್ರಮಕ್ಕೆ ತಡವಾಗಿ ಬಂದು ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆಯ

ಹೌದು. ಬಾಲಿವುಡ್‌ನ ಟಾಪ್ ಗಾಯಕರಲ್ಲಿ ಒಬ್ಬರಾಗುವ ನೇಹಾ ಇತ್ತೀಚಿಗೆ ಮೆಲ್ಬೋರ್ನ್‌ನಲ್ಲಿ ಆಯೋಜಿಸಿದ್ದ ಶೋವೊಂದಕ್ಕೆ ಮೂರು ಗಂಟೆಗಳ ತಡವಾಗಿ ಬಂದಿದ್ದು, ತದನಂತರ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.

ರಾತ್ರಿ 7-30ಗೆ ಆಯೋಜಿಸಿದ್ದ ಶೋಗೆ ರಾತ್ರಿ 10 ಗಂಟೆಗೆ ಬಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು 'ಗೋ ಬ್ಯಾಕ್ ಗೋ ಬ್ಯಾಕ್'' ಅಂತಾ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ವೀಡಿಯೊದಲ್ಲಿ ನೇಹಾ ಕಕ್ಕರ್ ವೇದಿಕೆಯಲ್ಲಿಯೇ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು.

Neha Kakkar
ರಿಯಾಲಿಟಿ ಶೋ ತೀರ್ಪುಗಾರ್ತಿಗೆ ಬಲವಂತವಾಗಿ ಕಿಸ್ ಕೊಟ್ಟ ಸ್ಪರ್ಧಿ, ಕಣ್ಣೀರಿಟ್ಟ ನೇಹಾ ಕಕ್ಕರ್, ವಿಡಿಯೋ ವೈರಲ್!

ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತಾ ಮಾತನಾಡಿದ ನೇಹಾ ಕಕ್ಕರ್, ನೀವುಗಳು ನಿಜವಾಗಿಯೂ so sweet. ಸುಮಾರು ಹೊತ್ತಿನಿಂದ ಕಾಯುತ್ತಿದ್ದ ಕುಳಿತಿದ್ದೀರಾ. ಅದನ್ನು ನಾನು ದ್ವೇಷಿಸುತ್ತೇನೆ. ನನ್ನ ಜೀವನದಲ್ಲಿ ಯಾರನ್ನೂ ಕಾಯಿಸಲ್ಲ. ಇದು ನನಗೆ ಬಹಳಷ್ಟು ಅರ್ಥವಾಗಿದೆ. ಇಂದು ರಾತ್ರಿಯಲ್ಲೆಲ್ಲಾ ನಿಮ್ಮೆಲ್ಲರ ಮನರಂಜಿಸುತ್ತೇನೆ ಎಂದು ಭಾವಾನಾತ್ಮಕವಾಗಿ ಅಭಿಮಾನಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಆದರೆ, ನೇಹಾ ಕಕ್ಕರ್ ಅವರ ಭಾವನಾತ್ಮಕ ಮಾತುಗಳ ಹೊರತಾಗಿಯೂ ವಿಡಿಯೋಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದರೆ ಮತ್ತೆ ಕೆಲವರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇದು ಭಾರತ ಅಲ್ಲ. ಆಸ್ಟ್ರೇಲಿಯಾ, ಇದು ಭಾರತದ ಐಡಿಯಲ್ ಅಲ್ಲ ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಮೂಲಕ ಟೀಕೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com