
L2 ಎಂಪುರಾನ್ ಚಿತ್ರವು ವಿಶ್ವಾದ್ಯಂತ ಭಾರಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದಾಖಲೆಗಳನ್ನು ಬರೆಯುತ್ತಿದ್ದರೇ ಇತ್ತ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರನ್ನು ಗುರಿಯಾಗಿಸಿಕೊಂಡು RSS ಮುಖವಾಣಿ ಆರ್ಗನೈಸರ್ ದಾಳಿ ಮುಂದುವರಿಸಿದೆ.
ನಟ-ಚಲನಚಿತ್ರ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಎಂಪುರಾನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಿಂದ ಉಂಟಾದ ತೊಂದರೆಗೆ ವಿಷಾದ ವ್ಯಕ್ತಪಡಿಸಿ ನಟ-ನಿರ್ದೇಶಕ ಮೋಹನ್ ಲಾಲ್ ಫೇಸ್‌ಬುಕ್ ಪೋಸ್ಟ್ ನಲ್ಲಿ ಬಹಿರಂಗವಾಗಿ ಕ್ಷಣೆಯಾಚಿಸಿದ್ದು ಆರ್ಗನೈಸರ್ ಒಪ್ಪಿಕೊಂಡಿದೆ. ವಿವಾದಕ್ಕೆ ಪ್ರತಿಕ್ರಿಯೆಯಾಗಿ 'ಎಂಪುರಾನ್' ಚಿತ್ರದ 17 ದೃಶ್ಯಗಳಿಗೆ ಕತ್ತರಿ ಪ್ರಯೋಗಕ್ಕೂ ಚಿತ್ರತಂಡ ಒಪ್ಪಿಕೊಂಡಿದೆ ಎಂದು ಕೂಡ ಆರ್ಗನೈಸರ್ ಹೇಳಿದೆ.
ಅಲ್ಲದೆ ಪೃಥ್ವಿರಾಜ್ ರಾಷ್ಟ್ರವಿರೋಧಿಗಳ ಧ್ವನಿಯಾಗಿದ್ದಾರೆ. ಇದು ಅವರು ಲಕ್ಷದ್ವೀಪವನ್ನು ಉಳಿಸಿ ಅಭಿಯಾನದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಅಂಶದಿಂದ ಸ್ಪಷ್ಟವಾಗುತ್ತದೆ. ಈ ಅಭಿಯಾನವು ಕೇಂದ್ರ ಸರ್ಕಾರವು ದ್ವೀಪಗಳನ್ನು ಆಧುನೀಕರಿಸಲು ಪರಿಚಯಿಸಿದ ಪ್ರಗತಿಪರ ಕ್ರಮಗಳನ್ನು ವಿರೋಧಿಸುವ ಪ್ರಯತ್ನವಾಗಿದ್ದು, ಅವುಗಳನ್ನು ಕೋಮು ದೃಷ್ಟಿಕೋನದಿಂದ ಚಿತ್ರಿಸಲಾಗಿದೆ. ಪೃಥ್ವಿರಾಜ್ CAA ಆಂದೋಲನದ ಸಮಯದಲ್ಲಿಯೂ ಸಹ ಬಹಳ ಧ್ವನಿ ಎತ್ತಿದರು. CAA ಪ್ರತಿಭಟನೆಯ ಸಮಯದಲ್ಲಿ ಜಾಮಿಯಾ ವಿದ್ಯಾರ್ಥಿಗಳನ್ನು ಬೆಂಬಲಿಸಿದವರು ಎಂದು ಆರ್ಗನೈಸರ್ ದಾಳಿ ಮುಂದುವರಿಸಿದರು.
ಎಂಪುರಾನ್ ಚಿತ್ರವನ್ನು ಬಲಪಂಥೀಯರು "ಹಿಂದೂ ವಿರೋಧಿ" ಎಂದು ಗುರಿಯಾಗಿಸಿಕೊಂಡರು. ಆದರೆ ಎಡಪಂಥೀಯರ ಒಂದು ವರ್ಗವು ಸಂಘ ಪರಿವಾರದ ಒತ್ತಡದಿಂದಾಗಿ ಮೋಹನ್ ಲಾಲ್ ಕ್ಷಮೆಯಾಚಿಸಿದ್ದಾರೆ. ಇದು ಸರಿಯಲ್ಲ ಎಂದು ವಾದಿಸಿದರು.
Advertisement