Met Gala ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ ಸೂಪರ್ ಸ್ಟಾರ್, ಸ್ಟೈಲ್ ಐಕಾನ್ ಶಾರೂಕ್ ಖಾನ್; Photos

'ಕಿಂಗ್ ಖಾನ್' ಎಂದು ಜನಪ್ರಿಯವಾಗಿರುವ ಶಾರೂಕ್ ಕುತ್ತಿಗೆಯಲ್ಲಿರುವ 'ಕೆ' ಅಕ್ಷರದ ಆಕಾರದ ಸ್ಫಟಿಕದಿಂದ ಕೂಡಿದ ಪೆಂಡೆಂಟ್ ಮತ್ತು ಡ್ಯಾಂಡಿ ಕೋಲನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿ ತೋಳುಗಳ ಅಗಲವಾಗಿ ತೆರೆದ ಭಂಗಿಯಲ್ಲಿ ಪ್ರದರ್ಶಿಸಿದರು.
Sharukh Khan
ಶಾರೂಕ್ ಖಾನ್
Updated on

ನವದೆಹಲಿ: ಮೆಟ್ ಗಾಲಾ ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಆಕರ್ಷಕ ಫ್ಯಾಷನ್ ಕಾರ್ಯಕ್ರಮವೆಂದು ಜನಪ್ರಿಯವಾಗಿದೆ. ಇದರಲ್ಲಿ ಪ್ರತಿವರ್ಷ ಬಾಲಿವುಡ್ ಸ್ಟಾರ್ ಗಳು ಭಾಗವಹಿಸಿ ಅವರು ತೊಡುವ ವೇಷ-ಭೂಷಣಗಳು ಸುದ್ದಿಯಾಗುತ್ತವೆ.

ಈ ವರ್ಷ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮೆಟ್ ಗಾಲಾ 2025 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಪ್ರಸಿದ್ಧ ವಿನ್ಯಾಸಕ ಸಬ್ಯಸಾಚಿ ಅವರು ವಿನ್ಯಾಸಗೊಳಿಸಿದ ಸಂಪೂರ್ಣ ಕಪ್ಪು ಬಣ್ಣದ ಬೆಸ್ಪೋಕ್ ಪುರುಷರ ಉಡುಪು ಧರಿಸಿ, ಫ್ಯಾಷನ್ ನಿಧಿಸಂಗ್ರಹಣೆ ಸಮಾರಂಭದಲ್ಲಿ ಕೂಡ ಕಾಣಿಸಿಕೊಂಡರು.

'ಕಿಂಗ್ ಖಾನ್' ಎಂದು ಜನಪ್ರಿಯವಾಗಿರುವ ಶಾರೂಕ್ ಕುತ್ತಿಗೆಯಲ್ಲಿರುವ 'ಕೆ' ಅಕ್ಷರದ ಆಕಾರದ ಸ್ಫಟಿಕದಿಂದ ಕೂಡಿದ ಪೆಂಡೆಂಟ್ ಮತ್ತು ಡ್ಯಾಂಡಿ ಕೋಲನ್ನು ಧರಿಸಿ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿ ತೋಳುಗಳನ್ನು ಅಗಲವಾಗಿ ತೆರೆದ ಭಂಗಿಯಲ್ಲಿ ಪ್ರದರ್ಶಿಸಿದರು.

ಮೆಟ್ ಗಾಲಾದಲ್ಲಿ ಶಾರೂಕ್ ಖಾನ್
ಮೆಟ್ ಗಾಲಾದಲ್ಲಿ ಶಾರೂಕ್ ಖಾನ್

ಈ ವರ್ಷದ ಮೆಟ್ ಗಾಲಾದ ಥೀಮ್ "ಸೂಪರ್‌ಫೈನ್: ಟೈಲರಿಂಗ್ ಬ್ಲ್ಯಾಕ್ ಸ್ಟೈಲ್" ಮತ್ತು ಸಬ್ಯಸಾಚಿ ಅವರು "ಬ್ಲ್ಯಾಕ್ ಡ್ಯಾಂಡಿಸಂ ನ್ನು ಸಾಮಾಜಿಕ, ಜನಾಂಗೀಯ ಮತ್ತು ಲಿಂಗ ಮಾನದಂಡಗಳನ್ನು ಧಿಕ್ಕರಿಸುವ ಸ್ವ-ಅಭಿವ್ಯಕ್ತಿಯಾಗಿ ಉಲ್ಲೇಖಿಸುವ ಮೂಲಕ ವ್ಯಾಖ್ಯಾನಿಸಿದ್ದಾರೆ.

ಶಾರುಖ್ ಖಾನ್ ವಿಶ್ವದ ಶ್ರೇಷ್ಠ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಹಲವು ಸೂಪರ್ ಹಿಟ್ ಚಿತ್ರಗಳ ನಾಯಕನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ.

ಬಾಲಿವುಡ್ ನಲ್ಲಿ ಸಬ್ಯಸಾಚಿ ವಸ್ತ್ರವಿನ್ಯಾಸ ಎಂದರೆ ಸ್ಟಾರ್ ಗಳಿಗೆ ಅಚ್ಚುಮೆಚ್ಚು. ಮೆಟ್ ಬಾಲ್‌ನಲ್ಲಿ ಮೊದಲ ಬಾರಿಗೆ ಶಾರುಖ್ ಖಾನ್ ಟ್ಯಾಸ್ಮೇನಿಯನ್ ಸೂಪರ್‌ಫೈನ್ ಉದ್ದನೆಯ ಕೋಟ್ ನ್ನು ಮೊನೊಗ್ರಾಮ್ ಮಾಡಲಾದ, ಜಪಾನೀಸ್ ಹಾರ್ನ್ ಬಟನ್‌ಗಳನ್ನು ಧರಿಸಿದ್ದರು.

ಈ ಕೋಟ್ ನ್ನು ಕೈಯಿಂದ ಕ್ಯಾನ್ವಾಸ್ ಮಾಡಲಾಗಿದೆ, ಪೀಕ್ ಕಾಲರ್ ಮತ್ತು ಅಗಲವಾದ ಲ್ಯಾಪಲ್‌ಗಳೊಂದಿಗೆ ಕ್ರೆಪ್ ಡಿ ಚೈನ್ ರೇಷ್ಮೆ ಶರ್ಟ್ ಮತ್ತು ಟೈಲರ್ಡ್ ಸೂಪರ್‌ಫೈನ್ ಉಣ್ಣೆ ಪ್ಯಾಂಟ್‌ನೊಂದಿಗೆ ಜೋಡಿಯಾಗಿದೆ. ಪ್ಲೆಟೆಡ್ ಸ್ಯಾಟಿನ್ ಕಮರ್‌ಬಂಧ್ ಈ ಬೆಸ್ಪೋಕ್ ಲುಕ್ ನ್ನು ಪೂರ್ಣಗೊಳಿಸುತ್ತದೆ ಎಂದು ಡಿಸೈನರ್ ಸಬ್ಯಸಾಚಿ ಹೇಳುತ್ತಾರೆ.

ಬಟ್ಟೆಗಳಲ್ಲದೆ, ಶಾರುಖ್ ಸಬ್ಯಸಾಚಿ ವಿನ್ಯಾಸಗೊಳಿಸಿದ ಕಸ್ಟಮ್ ಸ್ಟ್ಯಾಕ್ ನ್ನು ಸಹ ಪ್ರದರ್ಶಿಸಿದರು. ಟೂರ್‌ಮ್ಯಾಲಿನ್‌ಗಳು, ನೀಲಮಣಿಗಳು, ಹಳೆಯ ಮೈನ್ ಕಟ್ ಮತ್ತು ಅದ್ಭುತ ಕಟ್ ವಜ್ರಗಳೊಂದಿಗೆ 18ಕೆ ಚಿನ್ನದಲ್ಲಿ ರಚಿಸಲಾದ ದಿ ಬೆಂಗಾಲ್ ಟೈಗರ್ ಹೆಡ್ ಕೇನ್ ಪೂರಕವಾಗಿದೆ.

ಶಾರೂಕ್ ಖಾನ್
ಶಾರೂಕ್ ಖಾನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com