

ಬಾಲಿವುಡ್‌ನ "ನಂಬರ್ ಒನ್" ಹೀರೋ ಗೋವಿಂದಾ ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿದೆ. ನಟ ಗೋವಿಂದ ನಿನ್ನೆ ಮಂಗಳವಾರ ರಾತ್ರಿ ತಮ್ಮ ಜುಹು ಮನೆಯಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ತಕ್ಷಣ ಜುಹು ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಪ್ರಸ್ತುತ ನಟ ಗೋವಿಂದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ತಂಡ ನಿಕಟ ಮೇಲ್ವಿಚಾರಣೆಯಲ್ಲಿದ್ದು, ಸೂಕ್ಷವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ರಾತ್ರಿ 8:30ಕ್ಕೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಮನೆಯಲ್ಲೇ ವೈದ್ಯರನ್ನು ಕರೆಸಿ ಔಷಧಿ ನೀಡಿದರು. ಸ್ಥಿತಿ ಸ್ವಲ್ಪ ಸುಧಾರಿಸಿತು. ಆದರೆ ಮತ್ತೆ 12:30 ಸುಮಾರಿಗೆ ಮತ್ತೆ ಅಸ್ವಸ್ಥತೆ ಶುರುವಾಯಿತು. ಹೀಗಾಗಿ 1 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದೇವೆ. ಹಲವು ಪರೀಕ್ಷೆಗಳು ನಡೆದಿವೆ. ಫಲಿತಾಂಶಕ್ಕೆ ಕಾಯುತ್ತಿದ್ದೇವೆ. ಈಗ ಚೆನ್ನಾಗಿದ್ದಾರೆ ಎಂದು ಗೋವಿಂದಾ ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ಗೋವಿಂದ ಕಾಲಿಗೆ ಗುಂಡು ತಗುಲಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಲೈಸೆನ್ಸ್ ರಿವಾಲ್ವರ್‌ನಿಂದ ಅಚಾನಕ್ ಹಾರಿದ ಗುಂಡು ಅವರ ಕಾಲಿಗೆ ತಗುಲಿತ್ತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆ ಬಳಿಕ ಚೇತರಿಸಿಕೊಂಡಿದ್ದರು.
Advertisement