
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಕುಟುಂಬಕ್ಕೆ ಭಾನುವಾರ ಹೊಸ ಅತಿಥಿಯ ಆಗಮನವಾಗಿದೆ. ಪರಿಣಿತಿ ಚೋಪ್ರಾ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾರೆ. ದಂಪತಿ ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಕೊನೆಗೂ ಆತ ಬಂದಿದ್ದಾನೆ. ನಮಗೆ ಗಂಡು ಮಗು ಆಗಿದೆ. ತೋಳುಗಳು ತುಂಬಿವೆ, ನಮ್ಮ ಹೃದಯಗಳು ತುಂಬಿವೆ. ಮೊದಲು ನಾವಿಬ್ಬರು ಇದ್ದೇವು. ಈಗ ನಾವು ಎಲ್ಲವನ್ನೂ ಪಡೆದುಕೊಂಡಿವೆ ಎಂದು ಪರಿಣಿತಿ ಹಾಗೂ ರಾಘವ್ ಎಂದು ಬರೆದುಕೊಂಡಿದ್ದಾರೆ.
ಚೋಪ್ರಾ ಮತ್ತು ಚಡ್ಡಾ ಅವರು ಸೆಪ್ಟೆಂಬರ್ 24, 2023 ರಂದು ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹವಾಗಿದ್ದರು. ಆಗಸ್ಟ್ ನಲ್ಲಿ ತಾಯಿಯಾಗುತ್ತಿರುವ ವಿಷಯವನ್ನು ಪರಿಣಿತಿ ಹಂಚಿಕೊಂಡಿದ್ದರು.
ಇಮ್ತಿಯಾಜ್ ಅಲಿ ಅವರ ಎಮ್ಮಿ-ನಾಮನಿರ್ದೇಶಿತ ಬಯೋಪಿಕ್ ಅಮರ್ ಸಿಂಗ್ ಚಮ್ಕಿಲಾದಲ್ಲಿ ಚೋಪ್ರಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ಸದಸ್ಯರಾಗಿದ್ದು, ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement