
ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಅಭಿಮಾನಿಗಳಿಗೆ ಹುಟ್ಟುಹಬ್ಬದಂದು ವಿಶೇಷ ಘೋಷಣೆ ಮಾಡಿದ್ದಾರೆ. ಅವರು ತಮ್ಮ ಮುಂದಿನ ಸಿನಿಮಾ 'ಗಬ್ರು' ಚಿತ್ರದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸಿಮ್ರಾನ್ ಬಗ್ಗಾ ಮತ್ತು ಪ್ರಿತ್ ಕಮಾನಿ ಕೂಡ ನಟಿಸಿದ್ದಾರೆ.
"ಧೈರ್ಯ, ಆತ್ಮಸಾಕ್ಷಿ ಮತ್ತು ಕರುಣೆಯ ಕಥಾ ಹಂದರ ಇರುವ ಸಿನಿಮಾ ಇದಾಗಿದೆ. ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ. ತಮ್ಮ ಅಭಿಮಾನಿಗಳ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ನಟ, ತಮ್ಮ ಮುಂಬರುವ ಸಿನಿಮಾದ ಫಸ್ಟ್ ಲುಕ್ ನ್ನು ಹಂಚಿಕೊಂಡರು, "ಶಕ್ತಿ ಎಂದರೆ ನೀವು ತೋರಿಸುವುದಲ್ಲ, ಅದು ನೀವು ಏನನ್ನು ಮಾಡುತ್ತೀರೋ ಅದು ಶಕ್ತಿಯಾಗಿದೆ! ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಕಾಯುತ್ತಿರುವ ನಿಮ್ಮೆಲ್ಲರಿಗೂ ಫಸ್ಟ್ ಲುಕ್ ಇಲ್ಲಿದೆ. ಗಬ್ರು ಸಿನಿಮಾ 2026 ರ 13 ಮಾರ್ಚ್ ರಂದು ಬಿಡುಗಡೆಯಾಗಲಿದೆ. ಧೈರ್ಯ, ಆತ್ಮಸಾಕ್ಷಿ ಮತ್ತು ಕರುಣೆಯ ಕಥೆ ಇದಾಗಿದೆ. ಎಂದು ಸನ್ನಿ ಡಿಯೋಲ್ ಎಕ್ಸ್ ನಲ್ಲಿ ಬರೆದಿದ್ದಾರೆ.
ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಅನೇಕ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಓಂ ಛಂಗನಿ ಮತ್ತು ಎಚೆಲಾನ್ ನಿರ್ಮಾಣ ಮತ್ತು ಶಶಾಂಕ್ ಉದಾಪುರ್ಕರ್ ಬರೆದು ನಿರ್ದೇಶಿಸಿದ ಗಬ್ರು, ಮಿಥೂನ್, ಸತೀಂದರ್ ಸರ್ತಾಜ್ ಮತ್ತು ಅನುರಾಗ್ ಸೈಕಿಯಾ ಅವರ ಧ್ವನಿಪಥವನ್ನು ಹೊಂದಿದೆ. ಸಯೀದ್ ಕ್ವಾದ್ರಿ ಸಾಹಿತ್ಯವನ್ನು ಹೊಂದಿದೆ. ಈ ಚಿತ್ರವು ಮಾರ್ಚ್ 13, 2026 ರಂದು ಬಿಡುಗಡೆಯಾಗಲಿದೆ.
ಸನ್ನಿ ಡಿಯೋಲ್ ಬಾರ್ಡರ್ 2 ಸಿನಿಮಾಗಾಗಿಯೂ ಸಜ್ಜಾಗುತ್ತಿದ್ದಾರೆ. ಅನುರಾಗ್ ಸಿಂಗ್ ನಿರ್ದೇಶಿಸಿದ ಈ ಚಿತ್ರದಲ್ಲಿ ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಂಜಾಬಿ ನಟ ಸೋನಮ್ ಬಜ್ವಾ ಇತ್ತೀಚೆಗೆ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈ ಚಿತ್ರವು ಜನವರಿ 22, 2026 ರಂದು ಬಿಡುಗಡೆಯಾಗಲಿದೆ.
Advertisement