ಬಾಲಿವುಡ್ ಹಿರಿಯ ನಟ ಸತೀಶ್ ಶಾ ನಿಧನ

ಹಿರಿಯ ನಟ ಸತೀಶ್ ಶಾ ಅವರು ಇಂದು ಮಧ್ಯಾಹ್ನ ಬಾಂದ್ರಾ ಪೂರ್ವದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
Veteran Bollywood actor Satish Shah dies at 74
ಹಿರಿಯ ನಟ ಸತೀಶ್ ಶಾ
Updated on

ಮುಂಬೈ: ಜಾನೆ ಭಿ ದೋ ಯಾರೋ, ಮೈ ಹೂ ನಾ ಮತ್ತು ಹಿಟ್ ಟಿವಿ ಶೋ ಸಾರಾಭಾಯಿ ವರ್ಸಸ್ ಸಾರಾಭಾಯಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಬಾಲಿವುಡ್ ಹಿರಿಯ ನಟ ಸತೀಶ್ ಶಾ ಅವರು ಶನಿವಾರ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಹಿರಿಯ ನಟ ಸತೀಶ್ ಶಾ ಅವರು ಇಂದು ಮಧ್ಯಾಹ್ನ ಬಾಂದ್ರಾ ಪೂರ್ವದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು 30 ವರ್ಷಗಳಿಗೂ ಹೆಚ್ಚು ಕಾಲ ಅವರ ಆಪ್ತ ಸಹಾಯಕರಾಗಿರುವ ರಮೇಶ್ ಕಡತಲ ಅವರು ತಿಳಿಸಿದ್ದಾರೆ.

"ಸತೀಶ್ ಶಾ ಅವರು ಹೃದಯಾಘಾತದಿಂದ ನಿಧನರಾದಂತೆ ತೋರುತ್ತಿದೆ. ಆದರೆ ಅವರ ಸಾವಿನ ಹಿಂದಿನ ಕಾರಣ ತಿಳಿಯಲು ವೈದ್ಯರಿಂದ ಅಂತಿಮ ವರದಿಗಳಿಗಾಗಿ ನಾವು ಕಾಯುತ್ತಿದ್ದೇವೆ" ಎಂದು ಕಡತಲ ಪಿಟಿಐಗೆ ತಿಳಿಸಿದ್ದಾರೆ.

Veteran Bollywood actor Satish Shah dies at 74
ಹೃದಯಾಘಾತವಾಗಿ 35ನೇ ವಯಸ್ಸಿಗೆ ಗಾಯಕ ನಿಧನ: ಪತ್ನಿ ಜೊತೆ ಕರ್ವಾ ಚೌತ್ ಆಚರಿಸಿದ್ದೇ ಅವರ ಕೊನೆಯ ಪೋಸ್ಟ್!

ತಮ್ಮ ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ವಿಶಿಷ್ಟ ನಟನಾ ಶೈಲಿಗೆ ಹೆಸರುವಾಸಿಯಾಗಿದ್ದ ಸತೀಶ್ ಶಾ ಅವರು, ಕಳೆದ ಕೆಲ ದಿನಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಸತೀಶ್ ಶಾ ಅವರ ನಿಧನಕ್ಕೆ ಹಿಂದಿ ಕಿರುತೆರೆ ವಲಯ ಮತ್ತು ಬಾಲಿವುಡ್‌ ಕಂಬನಿ ಮಿಡಿದಿದ್ದು ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com