

ಬಾಲಿವುಡ್ ನಟಿ ಕತ್ರಿನಾ ಕೈಫ್ ಖಾಸಗಿ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ಗರ್ಭಿಣಿಯಾಗಿರುವ ಕತ್ರಿನಾ ಕೈಫ್ ತಮ್ಮ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತಿದ್ದಾಗ ಅನುಮತಿಯಿಲ್ಲದೆ ತೆಗೆದ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗರ್ಭಿಣಿಯಾಗಿರುವ ಕತ್ರಿನಾ ಕೈಫ್ ಮುಂಬೈ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನಿಂತಿರುವಾಗ ಫೋಟೋ ತೆಗೆಯಲಾಗಿದೆ. ಈ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಅನುಮತಿಯಿಲ್ಲದೆ ತೆಗೆದ ಈ ಫೋಟೋಗಳಲ್ಲಿ ಗರ್ಭವತಿಯಾಗಿರುವ ಕತ್ರಿನಾ ಕೈಫ್ ಅವರ ಹೊಟ್ಟೆ ಸ್ಪಷ್ಟವಾಗಿ ಕಂಡಿದ್ದು, ನಟಿಯ ಗೌಪ್ಯತೆಗೆ ಧಕ್ಕೆ ಉಂಟಾಗಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗತೊಡಗಿದೆ.
ಮಾಧ್ಯಮ ಪೋರ್ಟಲ್ ಜೂಮ್, ಕತ್ರಿನಾ ಕೈಫ್ ತಮ್ಮ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆ ಜೂಮ್ ತನ್ನ ಇನ್ಸ್‌ಟಾಗ್ರಾಮ್ ಖಾತೆಯಿಂದ ಫೋಟೋವನ್ನು ಡಿಲೀಟ್ ಮಾಡಿದೆ.
ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿದ್ದಕ್ಕಾಗಿ ಮಾಧ್ಯಮಗಳು ಮತ್ತು ಛಾಯಾಗ್ರಾಹಕರ ಮೇಲೆ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸೋನಾಕ್ಷಿ ಸಿನ್ಹಾ ಸಿಟ್ಟು
ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿ ಕತ್ರಿನಾ ಕೈಫ್ ಗೌಪ್ಯತೆಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮೀಡಿಯಾ ಪೋರ್ಟಲ್‌ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಸಿನ್ಹಾ, "ನಿಮಗೆಲ್ಲಾ ಏನಾಗಿದೆ? ಒಬ್ಬ ಮಹಿಳೆಯ ಅನುಮತಿಯಿಲ್ಲದೆ ಆಕೆಯ ಮನೆಯಲ್ಲಿದ್ದಾಗ ಅವರ ಫೋಟೋಗಳನ್ನು ತೆಗೆದು ಸಾರ್ವಜನಿಕಗೊಳಿಸುವುದು ಸರಿಯೇ? ನೀವು ಯಾವುದೇ ಅಪರಾಧಿಗಳಿಗಿಂತ ಕಡಿಮೆಯಿಲ್ಲ. ಇದು ನಾಚಿಕೆಗೇಡಿನ ಸಂಗತಿ!" ಎಂದು ಟೀಕಿಸಿದ್ದಾರೆ. ಸೋನಾಕ್ಷಿ ಅವರ ಪೋಸ್ಟ್ ಗೆ ಸಾವಿರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ಆಲಿಯಾ ಭಟ್ ಅವರ ಖಾಸಗಿ ಫೋಟೋಗಳನ್ನು ಅವರ ಮನೆಯ ಹೊರಗೆ ತೆಗೆದು ಇದೇ ರೀತಿ ಪ್ರಸಾರ ಮಾಡಲಾಗಿತ್ತು. ನಂತರ ಆಲಿಯಾ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದರು.
Advertisement