
ಕೋಲ್ಕತ್ತಾ: 2026 ರ ಅಕಾಡೆಮಿ ಪ್ರಶಸ್ತಿಗಳಿಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಹಿಂದಿ ಸಿನಿಮಾ ಹೋಮ್‌ಬೌಂಡ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಎನ್ ಚಂದ್ರ ಅವರು ಶುಕ್ರವಾರ ತಿಳಿಸಿದ್ದಾರೆ.
ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಂದ್ರ, ಆಸ್ಕರ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ವಿವಿಧ ಭಾಷೆಗಳಲ್ಲಿ ಒಟ್ಟು 24 ಸಿನಿಮಾಗಳು ಸ್ಪರ್ಧೆಯಲ್ಲಿವೆ ಎಂದು ಹೇಳಿದರು.
"ಇದು ತುಂಬಾ ಕಷ್ಟಕರವಾದ ಆಯ್ಕೆಯಾಗಿತ್ತು. ಇವು ಜನರ ಜೀವನವನ್ನು ಮುಟ್ಟಿದ ಚಿತ್ರಗಳಾಗಿವೆ" ಎಂದು ಅವರು ಹೇಳಿದರು.
"ನಾವು ನ್ಯಾಯಾಧೀಶರಲ್ಲ. ಆದರೆ ತರಬೇತುದಾರರು. ನಾವು ತಮ್ಮ ಛಾಪು ಮೂಡಿಸಿದ ಸಿನಿಮಾಗಳನ್ನು ಹುಡುಕುತ್ತಿದ್ದೆವು" ಎಂದು ಅವರು ಹೇಳಿದರು.
12 ಸದಸ್ಯರ ಆಯ್ಕೆ ಸಮಿತಿಯು ನಿರ್ಮಾಪಕರು, ನಿರ್ದೇಶಕರು, ಬರಹಗಾರರು, ಸಂಪಾದಕರು ಮತ್ತು ಪತ್ರಕರ್ತರನ್ನು ಒಳಗೊಂಡಿದೆ.
ಕರಣ್ ಜೋಹರ್ ಮತ್ತು ಆದರ್ ಪೂನವಲಾ ನಿರ್ಮಿಸಿದ "ಹೋಮ್‌ಬೌಂಡ್" ಚಿತ್ರದಲ್ಲಿ ಇಶಾನ್ ಖಟ್ಟರ್, ಬಾಲಿವುಡ್ ನಟಿ ಜಾನ್ವಿ ಕಪೂರ್, ವಿಶಾಲ್ ಜೇಥ್ವಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದು ಉತ್ತರ ಭಾರತದ ಒಂದು ಸಣ್ಣ ಹಳ್ಳಿಯ ಇಬ್ಬರು ಬಾಲ್ಯ ಸ್ನೇಹಿತರ ಕಥೆಯನ್ನು ಹೊಂದಿದೆ.
Advertisement