ಸೆಲ್ಫಿ ಕೇಳಿ ಬಂದ ಮಹಿಳಾ ಅಭಿಯಾನಿಯಿಂದ 'ಲಿಪ್ ಲಾಕ್': ಬಾಲಿವುಡ್ ನಟಿ ನಿಕಿತಾ ರಾವಲ್ ತಬ್ಬಿಬ್ಬು; Video ವೈರಲ್

ಕಾರ್ಯಕ್ರಮವೊಂದರಲ್ಲಿ ಪಾಪರಾಜಿಗಳಿಗಾಗಿ ನಿಕಿತಾ ಪೋಸ್ ನೀಡುತ್ತಿರುವಾಗ, ಮಹಿಳಾ ಅಭಿಮಾನಿಯೊಬ್ಬರು ಅವರ ಬಳಿ ಬಂದು ಸೆಲ್ಫಿ ಕೇಳಿದ್ದಾರೆ. ನಟಿ ಸಂತೋಷದಿಂದಲೇ ಅಭಿಮಾನಿಯೊಂದಿಗೆ ಪೋಸ್ ನೀಡುತ್ತಾರೆ.
 Woman Kisses Nikita Rawal On Red Carpet
ಬಾಲಿವುಡ್ ನಟಿ ನಿಕಿತಾ ರಾವಲ್
Updated on

ಇತ್ತೀಚಿಗೆ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡ ಗರಂ ಮಸಾಲಾ ನಟಿ ನಿಖಿಲ್ ರಾವಲ್ ಗೆ ಮಹಿಳಾ ಅಭಿಮಾನಿಯೊಬ್ಬರು ಲಿಪ್ ಲಾಕ್ ಮಾಡುವ ಶಾಕ್ ನೀಡಿರುವ ಘಟನೆ ನಡೆದಿದೆ. ಇದರಿಂದ ನಟಿ ಸ್ವಲ್ಪ ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಪಾಪರಾಜಿಗಳಿಗಾಗಿ ನಿಕಿತಾ ಪೋಸ್ ನೀಡುತ್ತಿರುವಾಗ, ಮಹಿಳಾ ಅಭಿಮಾನಿಯೊಬ್ಬರು ಅವರ ಬಳಿ ಬಂದು ಸೆಲ್ಫಿ ಕೇಳಿದ್ದಾರೆ. ನಟಿ ಸಂತೋಷದಿಂದಲೇ ಅಭಿಮಾನಿಯೊಂದಿಗೆ ಪೋಸ್ ನೀಡುತ್ತಾರೆ.

ಆದರೆ, ಆ ಮಹಿಳಾ ಅಭಿಮಾನಿ ನಿಕಿತಾ ಅವರ ಕೆನ್ನೆಗೆ ಮುತ್ತಿಟ್ಟು, ನಂತರ ಅವರನ್ನು ಹತ್ತಿರಕ್ಕೆ ಎಳೆದುಕೊಂಡು ತುಟಿಗಳಿಗೆ ಮುತ್ತಿಟ್ಟಿದ್ದಾರೆ. ಈ ಹಠಾತ್ ನಡೆಯಿಂದ ದಿಗಿಲುಗೊಂಡ ನಟಿ, ಅಭಿಮಾನಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ಬಿಡದ ಅಭಿಮಾನಿ ಲಿಪ್ ಲಾಕ್ ಮಾಡಿದ್ದಾರೆ.

ಇಷ್ಟದಾರೂ ಯುವತಿ, ನಿಕಿತಾ ಅವರನ್ನು ಬಿಡದೆ ಹಿಡಿದುಕೊಂಡಿದ್ದರು. ನಿಖಿತಾ ಅಲ್ಲಿಂದ ಹೊರಡುವ ಮೊದಲು, ಆ ಅಭಿಮಾನಿ ಮತ್ತೆ ಅವರ ಕೆನ್ನೆಗೆ ಮುತ್ತಿಟ್ಟಿದ್ದಾರೆ. ನಿಕಿತಾ ರಾವಲ್ ಹಿಂದಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದು, ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಅವರು 'ಬ್ಲ್ಯಾಕ್ ಅಂಡ್ ವೈಟ್', 'ಮಿಸ್ಟರ್ ಹಾಟ್ ಮಿಸ್ಟರ್ ಕೂಲ್', 'ದಿ ಹೀರೋ - ಅಭಿಮನ್ಯು', 'ಅಮ್ಮಾ ಕಿ ಬೋಲಿ', 'ಗರಂ ಮಸಾಲಾ' ಮತ್ತು 'ಕ್ಯೂಟ್ ಕಮೀನಾ' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

2012 ರಲ್ಲಿ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದ ನಿಖಿತಾ, 'ಟಿಂಪಾ' ಎಂಬ ಚಿತ್ರದಲ್ಲಿ ನಟಿಸಿದ್ದರು. ಇದರಲ್ಲಿ ಅವರು ವಿಕ್ರಮ್ ರಾಯ್ ಅವರೊಂದಿಗೆ 'ಇಚ್ಛಾಧಾರಿ ನಾಗಿನಿ'ಯ ಪಾತ್ರದಲ್ಲಿ ಅಭಿನಯಿಸಿದ್ದರು. ಬಳಿಕ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

 Woman Kisses Nikita Rawal On Red Carpet
ಲಿಪ್ ಲಾಕ್ ದೃಶ್ಯದ ವೇಳೆ ನಟನಿಗೆ ರಕ್ತಬರುವಂತೆ ಕಚ್ಚಿದ್ರಾ ನಟಿ ಕಂಗನಾ ರಣಾವತ್? Video Viral

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com