ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಟಿ ಸಾರಾ ಅಲಿ ಖಾನ್; Video ವೈರಲ್, ಫ್ಯಾನ್ಸ್ ಆತಂಕ

ನಟಿ ಸಾರಾ ಅಲಿ ಖಾನ್ ಅವರು ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಭಾವುಕರಾಗಿದ್ದು, ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Actress Sara Ali Khan Breaks Down At Golden Temple in Amritsar
ನಟಿ ಸಾರಾ ಅಲಿ ಖಾನ್
Updated on: 

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಆಯುಷ್ಮಾನ್ ಖುರಾನಾ ಅವರು ತಮ್ಮ ಮುಂಬರುವ ಚಿತ್ರ 'ಉಡ್ತಾ ತೀರ್' ಬಿಡುಗಡೆಯಾಗುವ ಮುನ್ನ, ದಸರಾ ಹಬ್ಬದಂದು ಆಶೀರ್ವಾದ ಪಡೆಯಲು ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದರು.

ನಟಿ ಸಾರಾ ಅಲಿ ಖಾನ್ ಅವರು ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಭಾವುಕರಾಗಿದ್ದು, ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಸಾರಾ ತುಂಬಾ ಅಳುತ್ತಿರುವುದು ಕಂಡುಬಂದಿದೆ.

ಸಾರಾ ಮತ್ತು ಆಯುಷ್ಮಾನ್ ಅವರು, ದರ್ಬಾರ್ ಸಾಹಿಬ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಸಾರಾ ಅವರು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡುಬಂದಿದ್ದು, ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದಾರೆ.

Actress Sara Ali Khan Breaks Down At Golden Temple in Amritsar
'ಅಮ್ಮಾ, ಅಮ್ಮಾ': ದುರ್ಗಾ ಪೂಜೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ TMC ಸಂಸದ ಕಲ್ಯಾಣ್ ಬ್ಯಾನರ್ಜಿ; ವಿಡಿಯೋ ವೈರಲ್

ಸಾರಾ ಅಲಿ ಖಾನ್ ಅವರು ಮಂಗಳವಾರ ಗೋಲ್ಡನ್‌ ಟೆಂಪಲ್‌ ಗೆ ಭೇಟಿ ನೀಡಿದ ವೇಳೆ ಆಯುಷ್ಮಾನ್ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. .ನಟ-ನಟಿ, ಗೋಲ್ಡನ್ ಟೆಂಪಲ್ ಮುಂದೆ, ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ದಸರಾ ಹಬ್ಬದ ಸಂದರ್ಭದಲ್ಲಿ ಫ್ಯಾನ್ಸ್‌ಗೆ ಶುಭಾಶಯ ಕೋರಿದ ಸಾರಾ, ಆ ಛಾಯಾಚಿತ್ರಕ್ಕೆ, ‘ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಎಲ್ಲರಿಗೂ ಪ್ರೀತಿ, ಅದೃಷ್ಟ ಮತ್ತು ನಗು ಸಿಗಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com