

ಇತ್ತೀಚಿಗಷ್ಟೇ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರ ಮೈಬಣ್ಣದ ಕುರಿತು ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು, ಈಗ ತಾವು ದೇವರನ್ನು ನಂಬುವುದಿಲ್ಲ ಮತ್ತು ತಮಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
'ಫಿಲ್ಮಿ ಜ್ಞಾನ್' (Filmy Gyaan) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ನಟಿ ರಾಧಿಕಾ, "ನಾನು ದೇವರಲ್ಲಿ ನಂಬಿಕೆ ಇಡುವುದಿಲ್ಲ. ಪ್ರಕೃತಿಯೇ ದೇವರು ಎಂದು ನಾನು ನಂಬುತ್ತೇನೆ ಮತ್ತು ಜನರು ಪ್ರಕೃತಿಯನ್ನೇ ಆರಾಧಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಎಲ್ಲದಕ್ಕಿಂತ ಹೆಚ್ಚು ಶಕ್ತಿಯುತವಾಗಿ ಇರುವುದು ಪರಿಸರ ಎಂದು ನಾನು ನಂಬುತ್ತೇನೆ. ಜನರು ಸಹ ಮೂರ್ತಿಗಳ ಬದಲಾಗಿ ಪ್ರಕೃತಿಯನ್ನು ಆರಾಧಿಸಬೇಕು ಎನ್ನುವುದು ನನ್ನ ಆಶಯ ಎಂದು ನಟಿ ಹೇಳಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಈ ಸಂದರ್ಶನದಲ್ಲಿ ನಟಿ ಕೀರ್ತಿ ಸುರೇಶ್ ಕೂಡ ಭಾಗವಹಿಸಿದ್ದರು. ಕೀರ್ತಿ ಅವರು ನೆಟ್‌ಫ್ಲಿಕ್ಸ್‌ನ ಮುಂಬರುವ ಅಕ್ಕ ವೆಬ್ ಸರಣಿಯಲ್ಲಿ ರಾಧಿಕಾ ಅವರೊಂದಿಗೆ ನಟಿಸುತ್ತಿದ್ದಾರೆ.
"ನಾನು ದೇವರಲ್ಲಿ ನಂಬಿಕೆ ಇಡುತ್ತೇನೆ; ಯಾವುದೋ ಒಂದು ಶಕ್ತಿ ಇದೆ ಎಂದು ನಾನು ನಂಬುತ್ತೇನೆ. ಆದರೆ, ನಾನು ಧಾರ್ಮಿಕ ವ್ಯಕ್ತಿಯಲ್ಲ" ಎಂದು ಕೀರ್ತಿ ಹೇಳಿದ್ದಾರೆ.