ನಿಕಿಶಾ ಪtale

ಕನ್ನಡದಲ್ಲಿ 'ನರಸಿಂಹ' ಹಾಗೂ 'ವರದನಾಯಕ' ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ನಿಕಿಶಾ ಪಟೇಲ್,...
ನಿಕಿಶಾ ಪtale
Updated on: 

ಕನ್ನಡದಲ್ಲಿ 'ನರಸಿಂಹ' ಹಾಗೂ 'ವರದನಾಯಕ' ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ನಿಕಿಶಾ ಪಟೇಲ್, ಗುಜರಾತಿ ಮೂಲದ ಬಾಂಬೆ ನಟಿ.

ನಟನೆಗಿಂತ ದೇಹ ಸೌಂದರ್ಯವಿದ್ದರೆ ಇಲ್ಲಿ ಮಿಂಚಬಹುದು. ಕೈಯಲ್ಲಿ ಒಂದು ಮುಕ್ಕಾಲು ಚಿತ್ರ ಇಲ್ಲದಿದ್ದರೂ ಪ್ರತಿ ದಿನ ಸುದ್ದಿಯಾಗಬಹುದು. ಇದಕ್ಕಾಗಿ ವಿಪ್ ವಾಕ್ಕೋ, ಐಟಂ ಸಾಂಗೋ, ವಿವಾದವೋ ಯಾವುದೂ ಬೇಡ. ಸುಮ್ಮನೆ ಕೂರುವ ಬದಲು ಆಗಾಗ ಒಂದು ಫೋಟೋ ಶೂಟ್ ಮಾಡಿಕೊಂಡು ಯಾವುದಾದರು ವೆಬ್ ಸೈಟ್‌ನಲ್ಲಿ ಅದಕ್ಕೊಂದು ಜಾಗ ಮಾಡಿಕೊಂಡಿರಿ. ಆಗ ಪ್ರಚಾರ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.
ಕನ್ನಡದಲ್ಲಿ 'ನರಸಿಂಹ' ಹಾಗೂ 'ವರದನಾಯಕ' ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡವಳು ನಟಿ ನಿಕಿಶಾ ಪಟೇಲ್. ಆದರೂ ಹೆಚ್ಚು ಪ್ರಯೋಜನ ಪಡೆಯದ ಗುಜರಾತಿ ಮೂಲದ ಬಾಂಬೆ ನಟಿ ತೆಲುಗಿನ 'ಕೊವರಂ ಪುಲಿ' ಚಿತ್ರದಲ್ಲಿ ನಟ ಪವನ್ ಕಲ್ಯಾಣ್‌ರಿಗೆ ತಲೆ ಸುತ್ತುವಂತೆ ಸೊಂಟ ಬಳುಕಿಸಿದ್ದನ್ನು ಮರೆಯಲುಂಟೆ? ಅದರ ಪರಿಣಾಮವೋ ಏನೋ, ನಾಲ್ಕೈದು ಚಿತ್ರಗಳಿಗೆ ಬುಕ್ ಆದಳು. ಇನ್ನು ತಮಿಳು, ಮಲೆಯಾಳಂನಲ್ಲೂ ನಟಿಸಿರುವ ಈಕೆ ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ. ಆದರೂ ಸದಾ ಸುದ್ದಿ ಮಾಡುವ ವೈಟ್ ಬ್ಯೂಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗಷ್ಟೆ ತನ್ನದೊಂದು ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಫೋಟೋಗಳಲ್ಲಿ ನಿಕಿಶಾಳ ಭಾವ, ಭಂಗಿಗಳನ್ನು ನೋಡಿದರೆ ಭಂಗಿ ಹೊಡೆಯುವ ಮುನಿಗಳು ಎದ್ದು ನಿಲ್ಲುತ್ತಾರೆ. ಇನ್ನು ಪಡ್ಡೆ ಹುಡುಗರ ಮಾತು ಕೇಳಬೇಕೆ? ಇರುವೆ ಕೂತರೂ ಜಾರಿ ಬೀಳುವ ನೈಸ್ ರಸ್ತೆಯನ್ನೂ ಹಿಂದಿಕ್ಕುವ ನುಣ್ಣನೆಯ ಮೈ ಕಟ್ಟು. 'ಅಯ್ಯೋ ನಿನ್ನ ನಾನೇಕೆ ಕಚ್ಚಲಿ' ಎಂದು ಸೊಳ್ಳೆಯಿಂದಲೂ ಕರುಣೆ ಪಡೆಯುವ ಚತುರೆ. ಪಾತ್ರ, ಕಥೆ, ಬ್ಯಾನರ್, ನಾಯಕ... ಹೀಗೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಈಕೆಗೆ ಒಂದಿಷ್ಟು ಗ್ಲಾಮರ್ ಹಾಡುಗಳು, ಮುಚ್ಚಿದರೂ ಬಿಚ್ಚಿದಂತೆ ಕಾಣುವ ಬಟ್ಟೆಗಳು, ಅಭಿನಯಕ್ಕಿಂತ ಶೋ ಮಾಡುವ ಪಾತ್ರಗಳು ಇದ್ದರೆ ಚಿತ್ರಕ್ಕೆ ಪಕ್ಕಾ ನಿಕ್ಕಿಯಾಗುತ್ತಾಳೆ.

ನಿಕಿಶಾಳ ಆಕರ್ಷಣೆ:
ಕಣ್ಣು, ಬಳಕು ಸೊಂಟ
ಎತ್ತರ : 5.7 ಅಡಿ
ಕೆಟ್ಟ ಅಬ್ಯಾಸ: ಸೋಮಾರಿಯಂತೆ ನಿದ್ದೆ ಮಾಡುವುದು.
ಮೊದಲು ಇಷ್ಟಪಟ್ಟ ಸಿನಿಮಾ : ತಮಿಳಿನ ವಿಜಯ್ ಅಭಿನಯದ ವಿಲ್ಲು

ಹುಟ್ಟಿನ ಮೂಲ
ನಿಕಿಶಾ ಪಟೇಲ್ ಮೂಲ ಗುಜರಾತ್ ರಾಜ್ಯವಾದರೂ ಈಕೆ ಹುಟ್ಟಿ, ಬೆಳೆದಿದ್ದು ಮಾತ್ರ ಇಂಗ್ಲೆಡ್‌ನಲ್ಲಿ.

ಪರದೆಗೆ ಬರುವ ಮುನ್ನ
ನಿಕಿಶಾಳಿಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ಬಾಲ್ಯದಿಂದಲೇ ಹುಟ್ಟಿಕೊಂಡ ಕನಸು. ಆದರೂ ಓದು ಮುಗಿಸಿ ಈಕೆ ಮಾಡೆಲಿಂಗ್‌ಗೆ ಸೇರಿಕೊಂಡಳು. ಸಾಕಷ್ಟು ಜಾಹೀರಾತುಗಳಲ್ಲಿ ನಗೆ ಚೆಲ್ಲಿ, ರ್ಯಾಂಪ್ ಶೋಗಳಲ್ಲಿ ವಾಕ್ ಮಾಡಿದ ಹುಡುಗಿ.

ನೃತ್ಯ ಪ್ರವೀಣೆ
ನಿಕಿಶಾ ಮಾಡೆಲಿಂಗ್ ಲೋಕದ ಬಳ್ಳಿಯಾದರೂ ಈಕೆಗೆ ನೃತ್ಯ ಅಂದರೆ ಪಂಚ ಪ್ರಾಣ. ಕಥಕ್ ಹಾಗೂ ಹಿಪಾಪ್ ನೃತ್ಯದಲ್ಲಿ ಈಕೆಯನ್ನು ಮೀರಿಸಲು ಸಾಧ್ಯವಿಲ್ಲವಂತೆ.

ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್
ನೃತ್ಯ ಮತ್ತು ಅಭಿನಯದ ವಿಚಾರಕ್ಕೆ ಬಂದರೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ನಿಕಿಶಾಗೆ ಪ್ರೇರಣೆ. ಆದರೆ, ತ್ರಿಪುರ ಸುಂದರಿ ಶ್ರೀದೇವಿ ಈಕೆಯ ರೋಲ್ ಮಾಡೆಲ್.

ಮೆಚ್ಚಿಕೊಂಡವು
ಹೈದರಾಬಾದ್ ಬಿರಿಯಾನಿ, ಲಕ್ಸುರಿ ಕಾರ್, ಜೀನ್ಸ್-ಟೀ ಶರ್ಟ್, ಎ.ಆರ್. ರೆಹಮಾನ್ ಸಂಗೀತ

ಬರಲಿರುವ ಚಿತ್ರಗಳು
ತಮಿಳು- ಎನ್ನಮ್ಮೋ ಎದೋ, ಅಮಲಿ ತುಮಲಿ. ತೆಲುಗು- ರಮ್ಯಾ, ಊರ್ವಶಿ, ಮೇನಕಾ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com