ಜೂಹಿಗೆ ಜೈ

ಮಧ್ಯರಾತ್ತೀಲಿ ಹೈವೇ ರಸ್ತೇಲಿ ಬಂದ ಲಿಂಬೆಹಣ್ಣಿನಂಥ ಹುಡುಗಿ ಜೂಹಿ ಚಾವ್ಲಾ...
ಜೂಹಿ ಚಾವ್ಲಾ
ಜೂಹಿ ಚಾವ್ಲಾ

ಮಧ್ಯರಾತ್ತೀಲಿ ಹೈವೇ ರಸ್ತೇಲಿ ಬಂದ ಲಿಂಬೆಹಣ್ಣಿನಂಥ ಹುಡುಗಿ ಜೂಹಿ ಚಾವ್ಲಾ ಕನ್ನಡ ಸಿನಿಮಾದಲ್ಲೂ ಶಾಂತವಾಗಿ ಕ್ರಾಂತಿ ಮಾಡಿದವಳು. ಬಾಲಿವುಡ್‌ನಲ್ಲಿ ಮೆರೆದು, ತಮಿಳು, ತೆಲುಗು, ಮಲೆಯಾಳಂ, ಬೆಂಗಾಲಿ, ಪಂಜಾಬಿ ಸಿನಿಮಾದಲ್ಲಿಯೂ ಹೆಜ್ಜೆ ಹಾಕಿರುವ ಬಹುಭಾಷಾ ನಟಿ.

ಮಿಸ್ ಯೂನಿವರ್ಸ್ ಕಿರೀಟ ಧರಿಸಿ ಮಾಡೆಲ್ ಜಗತ್ತಿಗೆ ಮುಖ ಮಾಡಿದ ಜೂಹಿ ಟಿವಿ ಜಗತ್ತು, ಸಿನಿಮಾ ನಿರ್ಮಾಣ, ಐಪಿಎಲ್ ಕ್ರಿಕೆಟ್ ಮಾಲೀಕತ್ವದೊಂದಿಗೆ ಪರಿಸರದ ಮೇಲೆ ರೇಡಿಯೇಷನ್ ಬೀರುವ ಪ್ರಭಾವ ಹಾಗೂ ಮಾರಾಣಾಂತಿಕ ರೋಗ ತೆಸ್ಲಿಮೀಯಾ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾಳೆ.

ಇತ್ತೀಚೆಗೆ ಹುಟ್ಟು ಹಬ್ಬ ಆಚರಿಸಿಕೊಂಡ ಜೂಹಿಗೆ 2014 ಲಕ್ ತಂದ ವರ್ಷ. 'ಗುಲಾಬ್ ಗ್ಯಾಂಗ್‌' ನ ಅಭಿನಯಕ್ಕಾಗಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದುದ್ದಲ್ಲದೇ, ಜೂಹಿ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಬಾರಿ ಐಪಿಎಲ್ ಚಾಂಪಿಯನ್‌ಶಿಪ್ ಗೆದ್ದಿದೆ. ಎಲ್ಲಕ್ಕಿಂತ ಜೂಹಿ ಮೊಬೈಲ್ ರೇಡಿಯೇಷನ್ ಬಗ್ಗೆ ಅರಿವು ಮೂಡಿಸುತ್ತಿರುವ ಕಾರ್ಯ ಎಲ್ಲ ಪ್ರಶಂಸೆಗೂ ಪಾತ್ರವಾಗಿದೆ. ಮುದ್ದು ಮುದ್ದಾಗಿ, ಸಾಫ್ಟ್ ಎನಿಸುವ ಜೂಹಿ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಟಿಸಲು ಒಲ್ಲೆ ಎನ್ನುತ್ತಾಳೆ. ಮೊದಲ ಬಾರಿಗೆ ಮಹಿಳಾ ಕೇಂದ್ರಿತ ಚಿತ್ರ ಗುಲಾಬಿ ಗ್ಯಾಂಗ್‌ನಲ್ಲಿ ಸುಮಿತ್ರಾ ದೇವಿ ಎಂಬ ಭ್ರಷ್ಟ ರಾಜಕಾರಣಿ ಪಾತ್ರದ ಮನೋಜ್ಞ ಅಭಿನಯಕ್ಕಾಗಿ ಫಾಲ್ಕೆ ಪುರಸ್ಕಾರ ಕೈ ಹಿಡಿಯಿತು.

ಎಲ್ಲವುಕ್ಕಿಂತ ಹೆಚ್ಚಾಗಿ ಪರಿಸರ ಹಾಗೂ ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ ಕಿರಣಗಳನ್ನು ಹೊರ ಸೂಸುವ ಮೊಬೈಲ್ ಬಳಕೆಯ ವಿರುದ್ಧ ಜೂಹಿ ಶಾಲಾ, ಕಾಲೇಜು, ಕಮ್ಮಟಗಳಲ್ಲಿ ಅರಿವು ಮೂಡಿಸುತ್ತಿದ್ದಾಳೆ, ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲೂ ಮೊಬೈಲ್ ಬಳಸುವ ಬಗ್ಗೆ ಬರೆಯುತ್ತಲೇ ಇರುತ್ತಾಳೆ. ಸಂಬಂಧಪಟ್ಟ ಸಂಘಟನೆಗಳು, ನಾಗರಿಕರು ಹಾಗೂ ಸಂಬಂಧಿಸಿದ ಪ್ರಾಧಿಕಾರದೊಂದಿಗೆ ರೇಡಿಯೋ ವಿಕಿರಣಗಳ ಅಪಾಯದ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದ್ದಾಳೆ. ಸದಾ ಒಂದಲ್ಲ ಒಂದು ಹೊಸ ಕೆಲಸಗಳನ್ನು ಹುಡಿಕೊಳ್ಳುವ ಜೂಹಿಗೆ ಸುಮ್ಮನಿರೋದು ಆಗೋಲ್ಲ.

ಉದ್ಯಮಿ ಜೈ ಮೆಹ್ತಾರನ್ನು ವರಿಸಿರುವ ಜೂಹಿ ಎರಡೂ ಮಕ್ಕಳತಾಯಿ. ಅಮೀರ್ ಖಾನ್, ಶಾರುಖ್ ಖಾನ್‌ರೊಂದಿಗೆ ಅನೇಕ ಸಿನಿಮಾಗಳಲ್ಲಿ ತನ್ನ ಅಭಿನಯ ಕೌಶಲ್ಯ ಪ್ರದರ್ಶಿಸಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಜೂಹಿಗೆ ಯಾಕೋ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ನೊಂದಿಗೆ ಮಾತ್ರ ನಟಿಸುವ ಅವಕಾಶದಕ್ಕಲೇ ಇಲ್ಲ. ಇಂಥದ್ದೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾಳೆ ರಂಭೆ ಮೇನಕೆ ವಂಶದ ಬೆಡಗಿ ಜೂಹಿ. ನಟನೆ, ಸಾಮಾಜಿಕ ಅರಿವಿನೊಂದಿಗೆ ಸದಾ ಬ್ಯುಸಿಯಾಗಿರುವ, ಎಲ್ಲೆಡೆ ಮಿಂಚುವ ಲವ್ಲಿ ಲೇಡಿ ಜೂಹಿಗೆ ಜಯವಾಗಲಿ.


-ಪೂರ್ವಿ ಕಲ್ಯಾಣಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com