ಮೈ ಹಸ್ಬೆಂಡ್ ಮೇಡ್ ಮಿ ಎ ಪ್ರಾಸ್ಟಿಟ್ಯೂಟ್: ವೈರಲ್ ಆದ ಕಿರು ಸಿನೆಮಾ

ಮದ್ಯಪಾನ ಮಾಡಿ ವಾಹನ ಚಾಲನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ವಿಷಯದ ಮೇಲೆ ಮಾಡಿರುವ "ಮೈ ಹಸ್ಬೆಂಡ್ ಮೇಡ್ ಮಿ ಎ ಪ್ರಾಸ್ಟಿಟ್ಯೂಟ್" (ನನ್ನ ಗಂಡ ನನ್ನನ್ನು ವೇಶ್ಯೆಯನ್ನಾಗಿಸಿದ) ಕಿರುಸಿನೆಮಾ, ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಯೂ ಟ್ಯೂಬ್ ನಲ್ಲಿ ಈಗಾಗಲೇ ೧೫ ಲಕ್ಷ ಜನ ಇದನ್ನು ನೋಡಿದ್ದಾರೆ.

ಜಾಯ್ಬರ್ತೋ ದತ್ತಾ ಅವರ ಸ್ಕ್ರಿಪ್ಟ್ ಇರುವ ಈ ಸಿನೆಮಾದ ನಿರ್ದೇಶಕ ಪಂಕಜ್ ಠಾಕೂರ್. ಮದ್ಯಪಾನ ಮಾಡಿ ಅಪಘಾತಕ್ಕೆ ಒಳಗಾಗಿ ಕೋಮಾಗೆ ಹೋಗುವ ತನ್ನ ಗಂಡನನ್ನು ಜೀವಂತವಾಗಿರಿಸಲು ವೇಶ್ಯಾವಟಿಕೆಗೆ ಇಳಿಯುವ ಯುವತಿಯ ಕಥೆ ಇದು.

"ಪ್ರತಿ ವರ್ಷ ಸುಮಾರು ೧.೩೪ ಲಕ್ಷ ಜನ ರಸ್ತೆಗಳ ಅಪಘಾತಗಳಲ್ಲಿ ಮರಣ ಹೊಂದುತ್ತಾರೆ. ಇದರಲ್ಲಿ ೭೦% ಜನ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದಲೇ ಸಾವನ್ನಪ್ಪುವುದು.  ಮದ್ಯಪಾನ ಮಾಡಿಯೂ ತಾನು ಉತ್ತಮವಾಗಿ ವಾಹನ ಚಾಲನೆ ಮಾಡಬಲ್ಲೆ ಎಂದು ಬೊಗಳೆ ಕೊಚ್ಚುವವರಿಗೆ ಈ ಸಿನೆಮಾ" ಎನ್ನುತ್ತಾರೆ ರೋಹಿತ್ ಸಕುನಿಯಾ, ಮಿಶನ್ ಶೇರಿಂಗ್ ನಾಲೆಜ್ ನ ಸಂಸ್ಥಾಪಕ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com