ಎ ಆರ್ ರೆಹಮಾನ್
ಮುಂಬೈ: ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಗೋಲ್ಡನ್ ಸ್ಟಾಚ್ಯು ಪ್ರಶಸ್ತಿ ಗೆದ್ದ ನಾಲ್ಕು ವರ್ಷದ ನಂತರ ಎ ಆರ್ ರೆಹಮಾನ್ ಮತ್ತೆ ಆಸ್ಕರ್ ರೇಸ್ ನಲ್ಲಿದ್ದಾರೆ.
ಶುಕ್ರವಾರ ರೇಸ್ ನಲ್ಲಿರುವ ೧೧೪ ಟ್ರ್ಯಾಕ್ ಗಳನ್ನು ಅಕಾಡೆಮಿ ಪಟ್ಟಿ ಮಾಡಿದೆ. ಇದರಲ್ಲಿ ರೆಹಮಾನ್ ಸಂಗೀತ ನೀಡಿರುವ ಮೂರು ಟ್ರ್ಯಾಕ್ ಗಳಿವೆ. ಮಿಲಿಯನ್ ಡಾಲರ್ ಆರ್ಮ್, ದ ಹಂಡ್ರೆಡ್ ಫುಟ್ ಜರ್ನಿ ಮತ್ತು ರಜನಿಕಾಂತ್ ಅಭಿನಯದ ಕೊಚಾಡಿಯಾನ್ ಚಿತ್ರದ ಟ್ರ್ಯಾಕ್ ಗಳು ಸ್ಪರ್ಧೆಯಲ್ಲಿವೆ.
ಸೋನು ನಿಗಮ್ ಮತ್ತು ಬಿಕ್ರಂ ಘೋಷ್ ಕೂಡ ಜಲ್ ಚಿತ್ರದ ಸಂಗೀತಕ್ಕೆ ಸ್ಪರ್ಧೆಯಲ್ಲಿದ್ದಾರೆ. ಫೆಬ್ರವರಿ ೨೨ ೨೦೧೫ ರಂದು ಆಸ್ಕರ್ ವಿಜೇತರ ಪಟ್ಟಿ ಹೊರಬೀಳಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ