ನೆನಪಿರಲಿ ಈತ ಪ್ರೇಮ್ ಪುತ್ರ

ಕಾಲು ಇದೆ, ಕೈ ಇದೆ ಸುಮ್ಮನೆ ಡ್ಯಾನ್ಸು ಮಾಡಿ...ಎನ್ನುವ ಹಾಡಿನ ಸಾಲು ನೆನ..
ನಟ ಪ್ರೇಮ್ ಪುತ್ರ ಏಕಾಂತ್
ನಟ ಪ್ರೇಮ್ ಪುತ್ರ ಏಕಾಂತ್
Updated on

ಕಾಲು ಇದೆ, ಕೈ ಇದೆ ಸುಮ್ಮನೆ ಡ್ಯಾನ್ಸು ಮಾಡಿ...ಎನ್ನುವ ಹಾಡಿನ ಸಾಲು ನೆನಪುಸುಂತೆ ಕುಣಿಯುತ್ತಿರುವ ಈ ಹುಡುಗನ ಹೆಸರು ಏಕಾಂತ್, ಮೊಣಕಾಲು ಉದ್ದದ ಈ ಪೋರ ರಬ್ಬರ್‌ನಂತೆ ಮೈ ಬಗ್ಗಿಸಿ ಕುಣಿಯುತ್ತಾನೆ.

ಡ್ಯಾನ್ಸ್ ಮಾತ್ರವಲ್ಲ, ಸೂಪರ್ ಸ್ಟಂಟ್ ಮಾಡುತ್ತಾನೆ. ಅಂದ ಹಾಗೆ ಈತ ನಟ ಪ್ರೇಮ್ ಪುತ್ರ. ಸದ್ಯ ಕನ್ನಡದಲ್ಲಿ 'ಫೇರ್ ಅಂಡ್ ಲವ್ಲಿ' ನಟನಾಗಿ ಹೆಂಗಳೆಯರ ಮನ ಗೆದ್ದ ಪ್ರೇಮ್, ಪುತ್ರ ಏಕಾಂತ್ ಅಪ್ಪನ ಹಾದಿ ಹಿಡಿಯಲಿದ್ದಾನೆಯೇ? ಗೊತ್ತಿಲ್ಲ. ಆದರೆ, ಇದೇ ಮೊದಲ ಬಾರಿಗೆ ಏಕಾಂತ್ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿನ ಕ್ಯಾಮೆರಾ ಎದುರಿಸಿದ್ದಾನೆ. ಪರಮೇಶ್ ನಿರ್ದೇಶಿಸಿ, ಅಭಿಷೇಕ್, ಅರ್ಚನಾ ಸಿಂಗ್, ಸಂಗೀತಾ ಭಟ್, ಮಹೇಶ್ ರಾಜ್, ರಿತೇಶ್ ನಟಿಸುತ್ತಿರುವ ಈ ಚಿತ್ರದಲ್ಲಿ ಏಕಾಂತ್ ಅದ್ಬುತ ಸ್ಟಂಟ್ ಮಾಡಿದ್ದಾನಂತೆ.

'ಏಕಾಂತ್‌ನಲ್ಲಿ ವಿಶೇಷ ಪ್ರತಿಭೆ ಇದೆ. ಅದನ್ನು ಗುರುತಿಸುವ ಪ್ರಯತ್ನ ಮಾಡಿದ್ದೇನೆ. ನಟ ಪ್ರೇಮ್ ಮತ್ತು ನಾನು ಗೆಳೆಯರು. ಆ ಸಲುಗೆಯಿಂದಲೇ ಅವರ ಮಗನನ್ನು ನನ್ನ ಚಿತ್ರದಲ್ಲಿ ಪಾತ್ರ ಮಾಡಿಸುವುದಕ್ಕೆ ಒಪ್ಪಿಕೊಂಡರು.

ಚಿತ್ರ ನೋಡಿದಾಗ ಏಕಾಂತ್ ಅದ್ಭುತ ನಟ ಆಗುತ್ತಾನೆ ಎಂಬುದರ ಸುಳಿವು ಸಿಗುತ್ತದೆ' ಎನ್ನುತ್ತಾರೆ ನಿರ್ದೇಶಕ ಪರಮೇಶ್, ಒಟ್ಟಿನಲ್ಲಿ ಸ್ಕೂಲ್‌ಗೆ ಹೋಗುವ ವಯಸ್ಸಿನಲ್ಲೇ ಬಣ್ಣ ಹೆಚ್ಚುವ ಅವಕಾಶ ಏಕಾಂತ್‌ಗೆ ಸಿಕ್ಕಿದೆ. ಇನ್ನು ಪಾತ್ರ ಹೇಗಿರುತ್ತದೆ ಎಂಬುದು 'ಮಾಮು ಟೀ ಅಂಗಡಿ' ಚಿತ್ರ ನೋಡಿದ ಮೇಲೆಯೇ ಗೊತ್ತಾಗುತ್ತದೆ.

ನಿರ್ದೇಶಕ ಪರಮೇಶ್ ನನ್ನ ಗೆಳೆಯ, ಅವನ ಸಿನಿಮಾ ಜತೆ ನಾನು ಇದ್ದೇನೆ. 'ಮಾಮು ಟೀ ಅಂಗಡಿ' ಯಲ್ಲಿ ಏಕಾಂತ್‌ನಿಂದ ಪಾತ್ರ ಮಾಡಿಸುತ್ತೇನೆ ಅಂದಾಗ ಇಲ್ಲ ಎನ್ನದೆ ಕಳುಹಿಸಿಕೊಟ್ಟೆ. ನನ್ನ ಮಗ ಮುಂದೆ ನಾಯಕ ನಟ ಆಗುವುದು ಬಿಡುವುದು ಅವನಿಗೆ ಬಿಟ್ಟಿದ್ದೇವೆ.
-ನಟ ಪ್ರೇಮ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com