
ಕೊಲ್ಕತ್ತಾ: ಸುಜಿತ್ ಸರ್ಕಾರ್ ಅವರ "ಪೀಕು" ಚಲನಚಿತ್ರಕ್ಕೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ದೀಪಿಕಾ ಪಡುಕೋಣೆ, ಸಿನೆಮಾ ಸೆಟ್ ನಲ್ಲಿ ಬ್ಯಾಡ್ಮಿಂಟನ್ ಆಡುತ್ತಾ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಆಡಿರುವ ದೀಪಿಕಾ, ನಂತರ ಸಿನೆಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಈಗ "ಪೀಕು" ಸಿನೆಮಾ ತಂಡಕ್ಕೆ ತಮ್ಮ ಆಟದ ಸಾಮರ್ಥ್ಯವನ್ನು ತೋರಿಸಲು ಮುಂದಾಗಿದ್ದಾರೆ.
ತನ್ನ ದಿನ ಪೂರ್ತಿಯ ಚಿತ್ರೀಕರಣದ ಕೆಲಸದ ಹೊರತಾಗಿಯೂ ದೀಪಿಕಾ ಅದ್ಭುತವಾಗಿ ಬ್ಯಾಡ್ಮಿಂಟನ್ ಆಡಿದಾಗ, ಚಿತ್ರ ತಂಡ ದೀಪಿಗಾಗೆ ಚೀರ್ ಮಾಡಿರುವುದಾಗಿ ತಿಳಿದು ಬಂದಿದೆ.
ತಿಕ್ಕಲು ತಂದೆ ಮತ್ತು ಮಗಳ ಸಂಬಂಧದ ಕಥೆ ಇರುವ "ಪೀಕು" ಚಲನಚಿತ್ರದಲ್ಲಿ ದೀಪಿಕಾ ತಂದೆಯಾಗಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಖಾನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಏಪ್ರಿಲ್ ೩೦, ೨೦೧೫ ರಂದು ಚಿತ್ರ ಬಿಡುಗಡೆಯಾಗಲಿದೆ.
Advertisement