ಕೆಂಡ ಸಂಪಿಗೆಯ ಗುಟ್ಟು ಬಿಟ್ಟುಕೊಡದ ಸೂರಿ

ರ್ದೇಶಕ ಸೂರಿ ತಮ್ಮ ಹೊಸ ಸಿನೆಮಾ ಕೆಂಡಸಂಪಿಗೆಯ ಬಗೆಗಿನ ಕುತೂಹಲ ತಣಿಸುವ ಯಾವುದೇ ಗುಟ್ಟು ಬಿಚ್ಚಿಡುತ್ತಿಲ್ಲ....
ದುನಿಯಾ ಸೂರಿ (ಸಂಗ್ರಹ ಚಿತ್ರ)
ದುನಿಯಾ ಸೂರಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಿರ್ದೇಶಕ ಸೂರಿ ತಮ್ಮ ಹೊಸ ಸಿನೆಮಾ ಕೆಂಡಸಂಪಿಗೆಯ ಬಗೆಗಿನ ಕುತೂಹಲ ತಣಿಸುವ ಯಾವುದೇ ಗುಟ್ಟು ಬಿಚ್ಚಿಡುತ್ತಿಲ್ಲ. ಹೊಸಬರೇ ದಂಡೆ ನಟಿಸುತ್ತಿರುವ ಈ ಸಿನೆಮಾದ ಸುತ್ತ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. "ಸಿನೆಮಾ ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ಹಂತದಲ್ಲಿದೆ. ನಾನು ಮೊದಲು ಟ್ರೇಲರ್ ಬಿಡುಗಡೆ ಮಾಡಲಿದ್ದೇನೆ. ಅದು ಕುತೂಹಲವನ್ನು ಇನ್ನೂ ಹೆಚ್ಚಿಸಲಿದೆ. ಇನ್ನು ಮೂರು ದಿನದ ಕೆಲಸವಿದ್ದು, ೨೦೧೫ರ ಮೊದಲ ಭಾಗದಲ್ಲಿ ಬಿಡುಗಡೆ ಕಾಣಲಿದೆ" ಎನ್ನುತ್ತಾರೆ ಸೂರಿ.

"ಕೆಂಡಸಂಪಿಗೆ ಥ್ರಿಲ್ಲರ್ ಸಿನೆಮಾ. ೧೮-೧೯ ವರ್ಷದ ಯುವಕ ಯುವತಿಯರ ಸುತ್ತ ಒಂದು ಪೊಲೀಸ್ ವಿಚಾರಣೆಯ ಬಗ್ಗೆ ಇರುವ ಕಥೆ ಇದು. ಇಂತಹ ಪ್ರಕರಣಗಳಲ್ಲಿ ಪೊಲೀಸರು ಯುವಕ ಯುವತಿಯರ ನಿಜ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಅಂತಹ ಒಂದು ಪ್ರಕರಣವನ್ನು ಈ ಸಿನೆಮಾದಲ್ಲಿ ತೋರಿಸುತ್ತಿದ್ದೇನೆ. ಇದು ಎಸ್ ಸುರೇಂದ್ರನಾಥ್ ಅವರ ಒಂದು ಕಥೆಯನ್ನು ಅಳವಡಿಸಿಕೊಂಡು ನಿರ್ದೇಶಿಸಿರುವ ಸಿನೆಮಾ" ಎನ್ನುತ್ತಾರೆ.

ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ಚಂದ್ರಿಕಾ ಈ ಮೂವರು ಗೊತ್ತಿರುವ ಮುಖಗಳನ್ನು ಬಿಟ್ಟರೆ, ಇನ್ನುಳಿದ ತಾರಾವರ್ಗವೆಲ್ಲಾ ಹೊಸಬರು. ಅವರುಗಳಲ್ಲಿ ಸಂತೋಷ್ ರೇವಾ, ಶ್ವೇತಾ ಕಾಮತ್ ಕೂಡ ಇದ್ದಾರೆ. "ಸಂತೋಷ್ ರೇವಾ ಯೋಗರಾಜ್ ಭಟ್ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿ ನಂತರ ನನ್ನ ತಂಡ ಸೇರಿಕೊಂಡರು. ನನ್ನ ಎಲ್ಲ ಚಲನಚಿತ್ರಗಳಿಗೂ ಅವರೇ ಸಹ ನಿರ್ದೇಶಕರು. ಅವರಲ್ಲಿ ಹೊಳೆಯುವ ಮಿಂಚೊಂದ ಕಂಡು ಈಗ ನಟನೆಯ ಅವಕಾಶ ನೀಡಿದ್ದೇನೆ. ಹಾಗೆಯೇ ಇನ್ನೂ ೬ ಜನ ಹೊಸಬರನ್ನು ಆಯ್ಕೆ ಮಾಡಿದ್ದೇನೆ" ಎನ್ನುತ್ತಾರೆ ಸೂರಿ.

ಇಲ್ಲಿಯವರೆಗೂ ೬ ಸಿನೆಮಾಗಳನ್ನು ಮಾಡಿರುವ ಸೂರಿ, ದುನಿಯಾ ಚಿತ್ರದ ಮೂಲಕ ದುನಿಯಾ ಸೂರಿ ಎಂದೇ ಖ್ಯಾತಿ. ಈ ಸಿನೆಮಾ ನಂತರ ಸಾಹಿತಿ ಪತ್ರಕರ್ತ ಜೋಗಿ ಅವರ ಇನ್ನೂ ಪ್ರಕಟಗೊಳ್ಳಬೇಕಿರುವ ಕಾದಂಬರಿ ಆಧಾರಿತ "ದೊಡ್ಮನೆ ಹುಡುಗ" ಸಿನೆಮಾವನ್ನು ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿ ನಿರ್ದೇಶಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com