ಗಲ್ಲು ಗಲ್ಲೆನುತಾ...

ಸೈನೈಡ್ ಚಿತ್ರ ನಿರ್ಮಿಸಿದ್ದ ಮುರಳೀಧರ ಹಾಲಪ್ಪ ಮತ್ತೊಮ್ಮೆ ಸಾವಿನ ಸಬ್ಜೆಕ್ಟನ್ನೇ...
ರಜನಿ-ಶ್ರೀಕಿ
ರಜನಿ-ಶ್ರೀಕಿ

ಸೈನೈಡ್ ಚಿತ್ರ ನಿರ್ಮಿಸಿದ್ದ ಮುರಳೀಧರ ಹಾಲಪ್ಪ ಮತ್ತೊಮ್ಮೆ ಸಾವಿನ ಸಬ್ಜೆಕ್ಟನ್ನೇ ಹಿಡಿದುಕೊಂಡು ಚಿತ್ರ ನಿರ್ಮಾಣಕ್ಕೆ ಹೊರಟಿದ್ದಾರೆ. ಚಿತ್ರದ ಹೆಸರು ಮರಣದಂಡನೆ. ಬರಗೂರು ರಾಮಚಂದ್ರಪ್ಪರವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರದ ನಿರ್ದೇಶನ ಕೂಡ ಬರಗೂರರದ್ದೇ. ಹಾಗಾಗಿ ಇದು ಕಲಾತ್ಮಕ ಶೈಲಿಯ ಚಿತ್ರವಿರಬಹುದಾ ಎಂಬ ಗುಮಾನಿ ಈಗಾಗಲೇ ಶುರುವಾಗಿದೆ.

ಒಂದು ಹಾಡು ಶೂಟಿಂಗ್ ಮಾತ್ರ ಬಾಕಿ ಇದ್ದು, ಚಿತ್ರ ಪೂರ್ತಿಯಾಗುವ ಗಡಿಬಿಡಿಯಲ್ಲಿರೋದು ನೋಡಿದರೆ, ಈ ವರ್ಷದ ಅವಾರ್ಡಿನ ರೇಸಿಗೆ ಮರಣದಂಡನೆ ಹೊರಟಂತಿದೆ. ಭಯೋತ್ಪಾದನೆಯನ್ನೇ ವಸ್ತುವಾಗಿಸಿಕೊಂಡಿರುವ ಈ ಚಿತ್ರದಲ್ಲಿ ಮರಣದಂಡನೆ ವಿಧಿಸುವ ಅಧಿಕಾರಿಯೇ ಮರಣದಂಟನೆಗೆ ಒಳಗಾದಾಗ ಅವನಲ್ಲಿ ಉಂಟಾಗುವ ಭಾವಗಳನ್ನು ಅನಾವರಣಗೊಳಿಸುವ ಪ್ರಯತ್ನವಿದೆಯಂತೆ. ಗಲ್ಲು ಶಿಕ್ಷೆಯ ಸುತ್ತವೇ ಹೆಚ್ಚಿನ ವಿಷಯಗಳು ಚಿತ್ರದಲ್ಲಿವೆಯಂತೆ.

ಒಲವೇ ಮಂದಾರ ಖ್ಯಾತಿಯ ಶ್ರೀಕಿ ಮೊದಲ ಬಾರಿಗೆ ಈ ರೀತಿಯ ಚಿತ್ರದಲ್ಲಿ ಹೀರೋ ಇಮೇಜುಗಳನ್ನು ಬದಿಗಿಟ್ಟು ನಟಿಸುತ್ತಿದ್ದಾರೆ. ಸುರೇಶ್ ಅರಸ್ ಸಂಕಲವಿರೋ ಚಿತ್ರಕ್ಕೆ ಹಂಸಲೇಖಾ ಸಂಗೀತವಿದೆ.  ಹಾಡುಗಳ ಸಾಹಿತ್ಯ ಬರಗೂರರೇ ಬರೆದಿದ್ದಾರೆ. ಸುಂದರಾಜ್, ಪ್ರಮೀಳಾ ಜೋಷಾಯ್ ಜೊತೆಗೆ ಸಪ್ನರಾಜ್, ರಜನಿಯವರಂಥ ಕಿರುತೆರೆಯ ಪ್ರಸಿದ್ಧರೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಕಥಾವಸ್ತು ತನ್ನ ವಿಭಿನ್ನತೆಯಿಂದಲೇ ವಿಮರ್ಶಕರ ಮತ್ತು ಪ್ರೇಕ್ಷಕರನ್ನು ಸೆಳೆಯುವುದು ಖಂಡಿತ ಎಂಬ ವಿಶ್ವಾಸ ನಿರ್ಮಾಪಕ ಮುರಳೀಧರ ಹಾಲಪ್ಪನವರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com