ಕಸ್ತೂರಿ ನಿವಾಸ ಕಲರ್: ಬಾಕ್ಸ್ ಆಫೀಸ್ ಹಿಟ್

ಎರಡು ಕೋಟಿ ಬಜೆಟ್ ನಲ್ಲಿ ೧೯೭೧ರ ಕಪ್ಪು ಬಿಳುಪು ಚಿತ್ರವನ್ನು ಕಲರ್ ಚಿತ್ರವನ್ನಾಗಿ ಬದಲಾಯಿಸಿ ನವೆಂಬರ್ ೭ ರಂದು...
ಕಸ್ತೂರಿ ನಿವಾಸ ಕಲರ್ - ತುಂಬಿದ ಚಿತ್ರಮಂದಿರ
ಕಸ್ತೂರಿ ನಿವಾಸ ಕಲರ್ - ತುಂಬಿದ ಚಿತ್ರಮಂದಿರ

ಬೆಂಗಳೂರು: ಎರಡು ಕೋಟಿ ಬಜೆಟ್ ನಲ್ಲಿ ೧೯೭೧ರ ಕಪ್ಪು ಬಿಳುಪು ಚಿತ್ರವನ್ನು ಕಲರ್ ಚಿತ್ರವನ್ನಾಗಿ ಬದಲಾಯಿಸಿ ನವೆಂಬರ್ ೭ ರಂದು ಬಿಡುಗಡೆ ಮಾಡಿದ ಕಸ್ತೂರಿ ನಿವಾಸ ಕಲರ್ ಸಿನೆಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ. ನಿರ್ಮಾಪಕ ಮತ್ತು ವಿತರಕ ಕೆ ಸಿಎನ್ ಮೋಹನ್ ಅತೀವ ಸಂತೋಷದಲ್ಲಿದ್ದಾರೆ.

ತಮ್ಮ ತಂದೆ ಕೆ ಸಿ ಎನ್ ಗೌಡ ಅವರ ಆಸೆಯನ್ನು ಪೂರೈಸಿರುವ ಕೆ ಸಿ ಎನ್ ಮೋಹನ್ ಅವರು ಮೊದಲಿಗೆ ೪೦ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದ ಚಿತ್ರ ಈಗ ಬೇಡಿಕೆಯ ಮೇರೆಗೆ ೮೦ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎನ್ನುತ್ತಾರೆ. ಖ್ಯಾತ ಚಿತ್ರಮಂದಿರಗಳಾದ ಭೂಮಿಕಾ, ಉಮಾ, ನವರಂಗ್ ಮತ್ತು ಇತರ ಒಂದು ಪರದೆಯ ಚಲನಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನಗಳನ್ನು ಕಾಣುತ್ತಿದ್ದು, ಮಲ್ಟಿಫ್ಲೆಕ್ಸ್ ಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎನ್ನುತ್ತಾರೆ.

ದಿವಂಗತ ದೊರೈರಾಜ್ ಅವರೊಂದಿಗೆ ಕಸ್ತೂರಿ ನಿವಾಸ ಚಿತ್ರವನ್ನು ನಿರ್ದೇಶಿಸಿದ್ದ ಎಸ್ ಕೆ ಭಗವಾನ್ ಅವರಿಗೆ, ಇಂದಿನ ಹೊಸ ಪೀಳಿಗೆಯ ಪ್ರೇಕ್ಷಕರೂ ಈ ಕ್ಲಾಸಿಕ್ ನೋಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ.

"ಪಾರ್ವತಮ್ಮ ರಾಜ್ ಕುಮಾರ ಮತ್ತು ಕುಟುಂಬ ವರ್ಗ, ನಟಿ ಜಯಂತಿ ಅವರನ್ನು ಸಿನೆಮಾ ನೋಡಲು ವಿಶೇಷವಾಗಿ ಆಹ್ವಾನಿಸಿದ್ದೆವು. ಈ ಸಿನೆಮಾದ ಹೊಸ ಅವತಾರವನ್ನು ನೋಡಿ ಅವರೆಲ್ಲ ಸಂತಸಪಟ್ಟರು" ಎನ್ನುತ್ತಾರೆ ಮೋಹನ್.

ಈ ಹಿಂದೆ ಮೋಹನ್ ಅವರು ಡಾ. ರಾಜಕುಮಾರ್ ಅಭಿನಯದ ಸತ್ಯ ಹರಿಶ್ಚಂದ್ರ ಕಪ್ಪು ಬಿಳುಪು ಸಿನೆಮಾವನ್ನು ಕಲರ್ ಗೆ ಬದಲಾಯಿಸಿದ್ದರು. ಈಗ ಇವರ ಮುಂದಿನ ಯೋಜನೆ ವೀರ ಕೇಸರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com