
ನಿರ್ದೇಶಕ ವಿಜಯ್ ಪ್ರಸಾದ್ ಅವರ ನೀರ್ದೋಸೆ ಆರಿ ತಣ್ಣಗಾಗಿದೆ ಎಂದುಕೊಂಡವರಿಗೆ ಇಲ್ಲೊಂದು ಬಿಸಿ ಸುದ್ದಿ ಇದೆ. ಅದು ಒನ್ಸ್ ಅಗೇನ್ ಚಿತ್ರದ ನಾಯಕಿಗೆ ಸಂಬಂಧಪಟ್ಟಿದ್ದು. ಮತ್ತು ಚಿತ್ರದ ನಿರ್ಮಾಪಕರಿಗೆ ಸಂಬಂಧಪಟ್ಟಿದ್ದು ಕೂಡ.
ಲೇಟೆಸ್ಟ್ ಸುದ್ದಿ ಅಂದ್ರೆ ನೀರ್ದೋಸೆ ಮತ್ತೆ ಕಾವಲಿ ಏರಲು ತಯಾರಾಗಿದೆ. ಆದರೆ ಈ ಬಾರಿ ರಮ್ಯಾ ಅವರ ಜಾಗದಲ್ಲಿ ನಾಯಕಿಯಾಗಿ ಬಂದಿರೋದು ಬಿಸಿ ಬಿಸಿ ತುಪ್ಪದ ನಾಯಕಿ ರಾಗಿಣಿ. ಅಂದ್ರೆ ರಮ್ಯಾ ಕಥೆ ಅಷ್ಟೇನಾ? ಅಂದ್ರೆ ನಿರ್ದೇಶಕ ವಿಜಯ್ಪ್ರಸಾದ್ ನೀರ್ದೋಸೆ ವಿಯಜ್ ಪ್ರಸಾದ್ ನೀರ್ದೋಸೆ ವಿಷಯದಲ್ಲಿ ರಮ್ಯಾ ಕಥೆ ಮುಗಿದಂಗೆ ಎನ್ನುತ್ತಾರೆ.
ಸದ್ಯಕ್ಕೆ ರಾಗಿಣಿ ಜೊತೆ ಮಾತುಕತೆ ನಡೆದಿದೆ. ಅವರೇ ಫೈನಲ್ ಆಗುವುದು ತಡವೇನಿಲ್ಲ. ಹಾಗಾಗಿ ತುಪ್ಪದ ಹುಡುಗಿ ರಾಗಿಣಿ ನೀರ್ದೋಸೆಗೆ ಮಿಕ್ಸ್ ಆಗಲು ರೆಡಿಯಾಗಿದ್ದಾರೆ ಎನ್ನಬಹುದು. ಎಲ್ಲವನ್ನೂ ಪಕ್ಕಾ ಮಾಡಿಕೊಂಡು ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಮತ್ತೆ ಶೂಟಿಂಗ್ಗೆ ರೆಡಿಯಾಗಲಿದೆ ನೀರ್ದೋಸೆ ಚಿತ್ರತಂಡ.
ಚಿತ್ರಕ್ಕೆ ಸಂಬಂಧಪಟ್ಟ ಇನ್ನೊಂದು ಸುದ್ದಿ ಎಂದರೆ ಚಿತ್ರದ ನಿರ್ಮಾಪಕರು ಬದಲಾಗಿದ್ದಾರೆ. ಇಡೀ ಚಿತ್ರವನ್ನು ಹೊಸ ನಿರ್ಮಾಪಕರಿಗೆ ಟೇಕ್ ಓವರ್ ಮಾಡಿಸಿರುವ ವಿಜಯ್ಪ್ರಸಾದ್ ಕೊನೆಗೂ ನಿಟ್ಟುಸಿರು ಬಿಡುವ ಹಂತದಲ್ಲಿದ್ದಾರೆ.
ಇಷ್ಟು ದಿನ ರಮ್ಯಾ ಮತ್ತೆ ನೀರ್ದೋಸೆಯಲ್ಲಿ ಆ್ಯಕ್ಟ್ ಮಾಡ್ತಾರಾ? ಅವರು ಮಾಡಲ್ಲ ಅಂದ್ರೆ ಇನ್ಯಾರು ಮಾಡ್ತಾರೆ? ಅನ್ನೋದು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಒಂದು ಕೋಟಿ ಬೆಲೆಬಾಳುವ ಪ್ರಶ್ನೆಯಂತಾಗಿತ್ತು. ಈಗ ಈ ಪ್ರಶ್ನೆಗೆ ಆಲ್ಮೋಸ್ಟ್ ಪಕ್ಕಾ ಉತ್ತರ ಸಿಕ್ಕಿದೆ.
ರಾಗಿಣಿ ನೀರ್ದೋಸೆಯಲ್ಲಿ ಅಭಿನಯಿಸುವ ಸುದ್ದಿ ಬಂದಿದೆ. ಹಾಗಾಗಿ, ತುಪ್ಪದ ಹುಡುಗಿ ಎನಿಸಿಕೊಂಡಿದ್ದ ರಾಗಿಣಿ ಇನ್ನು ಮುಂದೆ ತುಪ್ಪದ ದೋಸೆ ಹುಡುಗಿ ಎನಿಸಿಕೊಳ್ಳಬಹುದು. ಅದರ ಜೊತೆಗೆ, ಏನೇ ಆದ್ರೂ ನೀರ್ದೋಸೆ ಸಿನಿಮಾ ಕೈಬಿಡಲ್ಲ ಎನ್ನುತ್ತಿದ್ದ ವಿಜಯ್ಪ್ರಸಾದ್ ಅವರನ್ನು ಮಾತು ತಪ್ಪದ ಮಗ ಎನ್ನಬಹುದು.
-ಹರಿ
Advertisement