
ಬೆಂಗಳೂರು: ಮಿ&ಮಿಸೆಸ್ ರಾಮಾಚಾರಿಯ ಮೂಲಕ ಗೆಲುವಿನ ಸಿಹಿಯುಂಡಿರುವ ನಿರ್ದೇಶಕ ಸಂತೋಶ್ ಆನಂದರಾಮ್ ಅವರಿಗೆ ಡಬಲ್ ಧಮಾಕ. ೧೫ ವರ್ಷಗಳಿಂದ ಹಠಮಾರಿಯ ರೀತಿ ನೊಂದಾಯಿಸಿ ಹಿಡಿದುಕೊಂಡಿದ್ದ 'ರಾಜಕುಮಾರ' ಶೀರ್ಷಿಕೆಯನ್ನು ಬಿಟ್ಟುಕೊಡುವಂತೆ ನಿರ್ದೇಶಕ-ಕೋಟಿ ನಿರ್ಮಾಪಕ ರಾಮು ಅವರನ್ನು ಮನವೊಲಿಸಲಾಗಿದೆ ಎಂದು ತಿಳಿದು ಬಂದಿದೆ.
ಗಾಂಧಿನಗರದಲ್ಲಿ ತೇಲುತ್ತಿರುವ ಗಾಳಿಸುದ್ದಿಯ ಪ್ರಕಾರ 'ರಾಜಕುಮಾರ' ಶೀರ್ಷಿಕೆ ಹೊಂದಿದ್ದ ಕೋಟಿ ನಿರ್ಮಾಪಕ ರಾಮು ಅದನ್ನು ರಾಜಕುಮಾರ್ ಕುಟುಂಬದ ಮೇಲಿನ ಗೌರವಕ್ಕಾಗಿ ಬಿಟ್ಟುಕೊಡಲು ಒಪ್ಪಿದ್ದು 'ಯಾವುದೇ ಅಭ್ಯಂತರವಿಲ್ಲ' ಎಂದು ಪತ್ರವನ್ನು ವಾಣಿಜ್ಯಮಂಡಲಿಗೆ ಬರದಿರುವುದರಿಂದ ಈ ಶೀರ್ಷಿಕೆ ಈಗ ನಿರ್ಮಾಪಕ ವಿಜಯ್ ಕಿರಗಂಡೂರ್ ಅವರ ಪಾಲಾಗಿದೆ. ಈ ಸಿನೆಮಾವನ್ನು ನಿರ್ದೇಶಿಸುತ್ತಿರುವವರು ಸಂತೋಶ್. ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್.
ಈ ಸುದ್ದಿಯನ್ನು ಧೃಢೀಕರಿಸಿರುವ ರಾಮು "ರಾಜಕುಮಾರ ಎಂಬ ಪ್ರತಿಷ್ಟಿತ ಶೀರ್ಷಿಕೆಯನ್ನು ಮುಂದೊಂದು ದಿನ ಸಿನೆಮಾ ಮಾಡಲು ೧೫ ವರ್ಷಗಳಿಂದ ಇಟ್ಟುಕೊಂಡಿದ್ದೆ. ನಿರ್ಮಾಪಕ ವಿಜಯ್ ನನ್ನ ನೆಚ್ಚಿನ ಗೆಳೆಯ ಮತ್ತು ಒಳ್ಳೆಯ ಮನುಷ್ಯ. ಅವರು ಶೀರ್ಷಿಕೆಯನ್ನು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ಅವರು ಒಳ್ಳೆ ನಿರ್ಮಾಪಕರು ಮಾತು ಸಂತೋಶ್ ಅದಕ್ಕೆ ನ್ಯಾಯ ನೀಡುತ್ತಾರೆ. ಪುನೀತ್ ಕೂಡ ಶೀರ್ಷಿಕೆ ಇಷ್ಟ ಪಟ್ಟಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
Advertisement