ಬೀಜಿಂಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಏಕೈಕ ಕನ್ನಡ ಚಲನಚಿತ್ರ 'ಅತ್ತಿ ಹಣ್ಣು ಮತ್ತು ಕಣಜ' ಆಯ್ಕೆ

‘ಅತ್ತಿಹಣ್ಣು ಮತ್ತು ಕಣಜ’ ಎಂ.ಎಸ್.ಪ್ರಕಾಶ್ ಬಾಬು ನಿರ್ದೇಶನದಲ್ಲಿ ‘ಬಯಲು ಚಿತ್ರ ಪ್ರೊಡಕ್ಷನ್ಸ್’ ನಿರ್ಮಿಸಿರುವ ಕನ್ನಡ ಚಿತ್ರ. ‘ಅತ್ತಿಹಣ್ಣು ಮತ್ತು ಕಣಜ’ ದ
ನಿರ್ದೇಶಕ ಎಂ.ಎಸ್.ಪ್ರಕಾಶ್ ಬಾಬು
ನಿರ್ದೇಶಕ ಎಂ.ಎಸ್.ಪ್ರಕಾಶ್ ಬಾಬು
Updated on

ಬೆಂಗಳೂರು: ‘ಅತ್ತಿಹಣ್ಣು ಮತ್ತು ಕಣಜ’ ಎಂ.ಎಸ್.ಪ್ರಕಾಶ್ ಬಾಬು ನಿರ್ದೇಶನದಲ್ಲಿ ‘ಬಯಲು ಚಿತ್ರ ಪ್ರೊಡಕ್ಷನ್ಸ್’ ನಿರ್ಮಿಸಿರುವ ಕನ್ನಡ ಚಿತ್ರ. ‘ಅತ್ತಿಹಣ್ಣು ಮತ್ತು ಕಣಜ’ ದ ಚಿತ್ರಕತೆಯನ್ನು ನಿರ್ದೇಶಕ ಎಂ.ಎಸ್.ಪ್ರಕಾಶ್ ಬಾಬು ನಾಲ್ಕೈದು ವರ್ಷಗಳ ಹಿಂದೆಯೇ ಸಿದ್ದಪಡಿಸಿಟ್ಟುಕೊಂಡಿದ್ದರು. ಆದರೆ ಚಿತ್ರ ತಯಾರಿಕೆಗೆ ಯಾವೊಬ್ಬ ನಿರ್ಮಾಪಕರೂ ಮುಂದೆ ಬರಲಿಲ್ಲವಾದ್ದರಿಂದ ಅವರೇ ಕೂಡಿಟ್ಟ ಮತ್ತು ಗೆಳೆಯರಿಂದ ಸಂಗ್ರಹಿಸಿದ ಹಣವನ್ನೆಲ್ಲಾ ಒಟ್ಟುಗೂಡಿಸಿ ಅವರದ್ದೇ  ಚಿತ್ರ ನಿರ್ಮಾಣ ಸಂಸ್ಥೆ ‘ಬಯಲು ಚಿತ್ರ ಪ್ರೊಡಕ್ಷನ್ಸ್’ ನಿಂದ "ಅತ್ತಿಹಣ್ಣು ಮತ್ತು ಕಣಜ" ಎಂಬ ಫೀಚರ್ ಫಿಲ್ಮ್ ಅನ್ನು ತಯಾರಿಸಲು ಮುಂದಾದರು. ಆದರೆ ಚಿತ್ರವನ್ನು ಪೂರ್ಣಗೊಳಿಸಲು ಹಣವಿಲ್ಲದೆ ಹಾಗೇ ಅಲ್ಲಿಗೇ ನಿಲ್ಲಿಸಿದ್ದರು.

ಗೋವಾದ 2013 ನೇ ಸಾಲಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎನ್.ಎಫ್.ಡಿ.ಸಿ ನಡೆಸುವ ಫಿಲ್ಮ್ ಬಜಾರ್ ನಲ್ಲಿ "ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್" ಗೆ ಈ ಚಿತ್ರ ಆಯ್ಕೆಯಾಯಿತು. ದಕ್ಷಿಣ ಏಷ್ಯಾದಿಂದ ಕೇವಲ 5 ಚಿತ್ರಗಳನ್ನು ಮಾತ್ರ ಈ ಲ್ಯಾಬ್ ಗೆ ಆಯ್ಕೆ ಮಾಡುತ್ತಾರೆ. ಈ 5ರಲ್ಲಿ ಪ್ರಥಮ ಬಾರಿಗೆ ಕನ್ನಡದ ಈ ಚಿತ್ರ ಆಯ್ಕೆಯಾಗಿತ್ತು. ಅಲ್ಲಿ ನಾಲ್ಕು ಜನ ವಿದೇಶದಿಂದ ಬಂದ, ತಮ್ಮನ್ನು ತಾವು ಚಲನಚಿತ್ರ ಕ್ಷೇತ್ರದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ತೊಡಗಿಸಿಕೊಂಡ ವೆನಿಸ್ ಫಿಲ್ಮ್ ಫೆಸ್ಟಿವಲ್ ಡೈರೆಕ್ಟರ್: ಮಾರ್ಕೋ ಮುಲ್ಲರ್, ಬ್ರಿಟೀಷ್ ಚಲನಚಿತ್ರ ವಿಮರ್ಶಕ: ಡೆರೆಕ್ ಮಾಲ್ಕಮ್, ನ್ಯೂಜಿಲ್ಯಾಂಡ್ ನ ಫಿಲಿಪ್ಪ  ಕ್ಯಾಂಪ್ಬೆಲ್, ಫ್ರಾನ್ಸ್ ನ ಲವ್ರೆಂಟ್ ಈ 5 ಚಿತ್ರಗಳನ್ನು ವೀಕ್ಷಿಸಿ ಚರ್ಚೆಗೊಳಪಡಿಸಿದರು. ಈ ಚಿತ್ರದ ಬಗ್ಗೆ ಸಾಕಷ್ಟು ಪ್ರೋತ್ಸಾಹದ ಮಾತುಗಳನ್ನು ಆಡಿ, ಈ ಚಿತ್ರವನ್ನು ಮುಗಿಸಲು ನಿರ್ಮಾಪಕರನ್ನು ಹುಡುಕಿಕೊಡಲು ಪ್ರಯತ್ನಿಸಿದರು, ಅದು ಸಾಧ್ಯವಾಗದ್ದಿದಾಗ ಎನ್.ಎಫ್.ಡಿ.ಸಿ ಸಹಾಯವನ್ನು ಕೇಳಿ, ಅವರನ್ನು ಸಹ-ನಿರ್ಮಾಪಕರಾಗುವಂತೆ ಒಪ್ಪಿಸಿದರು. ಹೀಗಾಗಿ ಚಿತ್ರ ಪೂರ್ಣವಾಗಲು ಸಾಧ್ಯವಾಯಿತು.
 
ಮೊದಲ ಬಾರಿಗೆ ಅಕ್ಟೋಬರ್2014 ರ ಮುಂಬಯಿ ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ, "ಇಂಡಿಯಾ ಗೋಲ್ಡ್" ಸ್ಪರ್ಧಾ ವಿಭಾಗದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡಿತು. ನಂತರ ಡಿಸೆಂಬರ್ 2014 ರ ಬೆಂಗಳೂರು ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ "ಏಷ್ಯ" ವಿಭಾಗದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ನೆಟ್ ಪ್ಯಾಕ್ ಜ್ಯೂರಿ ಸ್ಪೆಷಲ್ ಮೆನ್ಷನ್ ಮನ್ನಣೆಯನ್ನು ಗಳಿಸಿತು.

2015 ಏಪ್ರಿಲ್ 16 ರಿಂದ 23ರವರೆಗೆ ಚೀನದ ಬೀಜಿಂಗ್ ನಲ್ಲಿ ನಡೆಯುವ "ಬೀಜಿಂಗ್ ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಮುಖ್ಯ ಸ್ಪರ್ಧಾ ವಿಭಾಗದಲ್ಲಿ ‘ಅತ್ತಿಹಣ್ಣು ಮತ್ತು ಕಣಜ’ ಪ್ರವೇಶ ಪಡೆದಿದೆ. ಈ ವಿದೇಶೀ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾದ ಏಕೈಕ ಭಾರತೀಯ ಚಿತ್ರ ಎಂಬುದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com