
ಚೆನ್ನೈ: ನಟ ನಿರ್ದೇಶಕ ಕಮಲ ಹಾಸನ್ ನಟನೆಯ 'ಉತ್ತಮ ವಿಲನ್' ಚಲನಚಿತ್ರ ಹಿಂದುಗಳ ಭಾವನೆಯನ್ನು ಘಾಸಿಗೊಳಿಸುತ್ತದೆ ಎಂದು ದೂರಿ ಚಲನಚಿತ್ರವನ್ನು ನಿಷೇಧಿಸುವಂತೆ ಹಿಂದು ಸಂಘಟನೆ ವಿಶ್ವ ಹಿಂದು ಪರಿಷತ್ ನ ಸದಸ್ಯರು ಕರೆ ಕೊಟ್ಟಿದ್ದಾರೆ.
ಸೋಮವಾರ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿರುವ ಹೇಳಿಕೆಯಲ್ಲಿ ಚಲನಚಿತ್ರದ ಹಾಡೊಂದಾದ "ಇರಾನಿಯನ್ ನಾಡಗಮ್" ನಲ್ಲಿ ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ನಡುವಿನ ಸಂಭಾಷಣೆಯನ್ನು ಬಹಳ ಲಘುವಾಗಿ ಪ್ರತಿನಿಧಿಸಿರುವುದು ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ದೂರಿದ್ದಾರೆ.
"ಈ ಹಾಡಿನ ಸಾಹಿತ್ಯ ವಿಷ್ಣು ಭಕ್ತರಿಗೆ ನೋವುಂಟು ಮಾಡುತ್ತದೆ. ಪ್ರಹ್ಲಾದ ಮತ್ತು ಹಿರಣ್ಯಕಶಿಪುವಿನ ನಡುವಿನ ಸಂಭಾಷಣೆಯನ್ನು ಬಹಳ ಲಘುವಾಗಿ ಪರಿಗಣಿಸುತ್ತದೆ. ಆದುದರಿಂದ ಚಲನಚಿತ್ರವನ್ನಿ ನಿಷೇಧಿಸಬೇಕೆಂದು" ವಿ ಎಚ್ ಪಿ ಸದಸ್ಯ ಕೆ ಎಲ್ ಸತ್ಯಮೂರ್ತಿ ಆಗ್ರಹಿಸಿದ್ದಾರೆ.
ಕನ್ನಡಿಗ ರಮೇಶ್ ಅರವಿಂದ ನಿರ್ದೇಶನದ ಈ ಚಲನಚಿತ್ರ ೮ನೆ ಶತಮಾನದ ರಂಗಭೂಮಿ ನಟ ಮತ್ತು ಆಧುನಿಕ ಯುಗದ ಸೂಪರ್ಸ್ಟಾರ್ ಬಗೆಗಿನ ಕಥೆ ಉಳ್ಳದ್ದಾಗಿದೆ.
Advertisement