ಬೆಂಗಳೂರು: ಕನ್ನಡ ಚಿತ್ರನಟರು ಹಿನ್ನಲೆ ಗಾಯಕರಾಗುತ್ತಿರುವುದು ಹೊಸದೇನಲ್ಲ. ಈಗ ಈ ಪಂಗಡಕ್ಕೆ ಹೊಸ ಸೇರ್ಪಡೆ ಉಗ್ರಂ ಚಲನಚಿತ್ರದ ನಟ ಶ್ರೀಮುರಳಿ
ತಮ್ಮದೇ ಮುಂದಿನ ಸಿನೆಮಾ 'ರಥಾವರ'ಕ್ಕೆ ಮುರಳಿ ಗಾಯಕರಾಗಿ ಹೊರಹೊಮ್ಮಿದ್ದಾರೆ. ಯೋಗರಾಜ್ ಭಟ್ಟರ ಗೀತರಚನೆಗೆ ದನಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. "ಭಟ್ಟರ ಸಾಹಿತ್ಯ ಇರುವುದರಿಂದ ಹಾಗು ಹಾಡು ಕ್ಯಾಚಿ ಆಗಿರುವುದರಿಂದ ಹಾಡಲು ಉತ್ಸುಕನಾಗಿದ್ದೇನೆ" ಎನ್ನುತ್ತಾರೆ ಮುರಳಿ.
ಈ ಹಿಂದೆ ಹಲವು ಕನ್ನಡದ ಚಿತ್ರನಟರು ಹಾಡಿರುವ ಹಾಡುಗಳು ಜನಪ್ರಿಯವಾಗಿರುವ ಹಿನ್ನಲೆಯಲ್ಲಿ ಈ ಹಾಡು ಕೂಡ ಜನರ ಮಧ್ಯೆ ಸೂಪರ್ ಹಿಟ್ ಆಗುತ್ತದೆ ಎಂಬ ಅಭಿಪ್ರಾಯವಿದೆ ಗಾಂಧಿನಗರದಲ್ಲಿ. "ನಾನು ನನ್ನ ಕೆಲಸವನ್ನು ಮಾಡಿ ಜನರ ನಿರಧಾರಕ್ಕೆ ನಿಡುತ್ತೇನೆ. ಹಲವಾರು ಕಾರ್ಯಕ್ರಮಗಳನ್ನು ನಾನು ಹಾಡಿದ್ದೇನೆ ಹಾಗು ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಅದಕ್ಕೆ ನನ್ನ ಸಿನೆಮಾದಲ್ಲೇ ಏಕೆ ಹಾಡಬಾರದು ಎಂದೆನಿಸಿತು" ಎನ್ನುತ್ತಾರೆ ಮುರಳಿ.
ಹೆಚ್ಚೇನು ಗುಟ್ಟು ಬಿಚ್ಚಿಡದ ಮುರಳಿ ಇನ್ನು ೧೫-೨೦ ದಿನಗಳಲ್ಲಿ ನಾನು ಈ ಹಾಡನ್ನು ಹಾಡಿದ್ದೇಕೆ ಎಂದು ಜನರಿಗೆ ತಿಳಿಯಲಿದೆ ಎನ್ನುತ್ತಾರೆ ಮುರಳಿ.
Advertisement