
ಮುಂಬೈ: ಮಲ್ಟಿಪ್ಲೆಕ್ಸ್ ಗಳಲ್ಲಿ ಜನನಿಬಿಡ ಸಮಯದಲ್ಲಿ ಮರಾಠಿ ಸಿನೆಮಾಗಳ ಒಂದು ಪ್ರದರ್ಶನ ನೀಡಲೇ ಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಆದೇಶದ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಲೇಖಕಿ ಶೋಭಾ ಡೇ ವಿರುದ್ದ ರಾಜ್ಯ ವಿಧಾನಸಭೆಯಲ್ಲಿ ಶಿವಸೇನೆ ಖಂಡನಾ ನಿರ್ಣಯಕ್ಕೆ ಚಾಲನೆ ನೀಡಿದೆ.
ಮಂಗಳವಾರ ಟ್ವಿಟರ್ನಲ್ಲಿ ಲೇಖಕಿ ಶೋಭಾ ಡೇ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದರು.
"ನಾನು ಮರಾಠಿ ಸಿನೆಮಾಗಳನ್ನು ಇಷ್ಟ ಪಡುತ್ತೇನೆ. ಅವುಗಳನ್ನು ಯಾವಾಗ ನೋಡಬೇಕು ಎಂದು ನನಗೆ ನಿರ್ಧಾರ ಮಾಡಲು ಬಿಡಿ ದೇವೆಂದ್ರ ಫಡ್ನವಿಸ್. ಇದು ದಾದಾಗಿರಿಯಲ್ಲದೆ ಮತ್ತೇನು ಅಲ್ಲ" ಎಮು ಟ್ವೀಟ್ ಮಾಡಿದ್ದರು.
ಮತ್ತೊಂದು ಟ್ವೀಟ್ ನಲ್ಲಿ "ದೇವೆಂದ್ರ ಸರ್ವಾಧಿಕಾರಿ ಫಡ್ನವಿಸ್ ಮತ್ತೆ ಬಂದಿದ್ದಾರೆ!! ದನದ ಮಾಂಸದಿಂದ ಈಗ ಸಿನೆಮಾಗಳಿಗೆ. ಇದು ನಾವು ಪ್ರೀತಿಸುವ ಮಹಾರಾಷ್ಟ್ರವಲ್ಲ. ಬೇಡ! ಬೇಡ! ಇವೆಲ್ಲ ನಿಲ್ಲಿಸಲಿ!" ಎಂದಿದೆ.
ಈ ಟ್ವೀಟ್ಗಳು ಮಹಾರಾಷ್ಟ್ರವನ್ನು ಅವಮಾನಿಸಿವೆ ಎಂಬುದು ಶಿವಸೇನ ಶಾಸಕರ ಅಂಬೋಣ!
Advertisement