ಡಿಂಪಲ್ ಕುಟುಂಬದ ವಿರುದ್ಧ ಕೌಟುಂಬಿಕ ಕಿರುಕುಳ ಆರೋಪ ವಜಾ ಮಾಡಿದ ಹೈಕೋರ್ಟ್

ದಿವಂಗತ ರಾಜೇಶ್ ಖನ್ನ ಅವರ ಲಿವ್ ಇನ್ ಸಂಗಾತಿ ಅನಿತಾ ಅಡ್ವಾನಿ ಅವರು ರಾಜೇಶ್ ಖನ್ನಾ ಅವರ ಪತ್ನಿ ಡಿಂಪಲ್ ಕಪಾಡಿಯಾ, ಮಗಳು ಟ್ವಿಂಕಲ್ ಖನ್ನಾ
ದಿವಂಗತ ರಾಜೇಶ್ ಖನ್ನಾ, ಡಿಂಪಲ್ ಕಪಾಡಿಯಾ ಮತ್ತು ಅಕ್ಷಯ್ ಕುಮಾರ್ (ಸಂಗ್ರಹ ಚಿತ್ರ)
ದಿವಂಗತ ರಾಜೇಶ್ ಖನ್ನಾ, ಡಿಂಪಲ್ ಕಪಾಡಿಯಾ ಮತ್ತು ಅಕ್ಷಯ್ ಕುಮಾರ್ (ಸಂಗ್ರಹ ಚಿತ್ರ)

ಮುಂಬೈ: ದಿವಂಗತ ರಾಜೇಶ್ ಖನ್ನಾ ಅವರ ಲಿವ್ ಇನ್ ಸಂಗಾತಿ ಅನಿತಾ ಅಡ್ವಾನಿ ಅವರು ರಾಜೇಶ್ ಖನ್ನಾ ಅವರ ಪತ್ನಿ ಡಿಂಪಲ್ ಕಪಾಡಿಯಾ, ಮಗಳು ಟ್ವಿಂಕಲ್ ಖನ್ನಾ ಮತ್ತು ಅಳಿಯ ಅಕ್ಷಯ್ ಕುಮಾರ್ ವಿರುದ್ಧ ಸಲ್ಲಿಸಿದ್ದ ಕೌಟುಂಬಿಕ ಹಿಂಸಾಚಾರ ಆರೋಪದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು ವಜಾ ಮಾಡಿದೆ.

ಡಿಂಪಲ್, ಟ್ವಿಂಕಲ್ ಮತ್ತು ಅಕ್ಷಯ್ ತಮ್ಮ ವಿರುದ್ಧ ಕೆಳಗಿನ ಕೋರ್ಟ್ ನಲ್ಲಿ ಕ್ರಮ ಕೈಗೊಳ್ಳಲು ಅಡ್ವಾಣಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಎಂ ಎಲ್ ತಹಲಿಯಾನಿ ಪುರಸ್ಕರಿಸಿದ್ದಾರೆ.

ರಾಜೇಶ್ ಖನ್ನಾ ಅವರೊಂದಿಗೆ ಅಡ್ವಾನಿಯವರ ಸಂಬಂಧ ಮದುವೆ ರೀತಿಯದ್ದಲ್ಲ ಆದುದರಿಂದ ಕೌಟುಂಬಿಕ ಕಲಹದ ಕಾಯ್ದೆಯಡಿ ಅದಕ್ಕೆ ಪರಿಹಾರ ಕೇಳುವಂತಿಲ್ಲ ಎಂದು ನ್ಯಾಯಾಧೀಶ ಅಭಿಪ್ರಾಯ ಪಟ್ಟಿದ್ದಾರೆ.

ನ್ಯಾಯಧೀಶರು ಈ ತೀರ್ಪು ನೀಡಿದಾಕ್ಷಣ ಈ ತೀರ್ಪಿನ ಮೇಲೆ ತಡೆಯಾಜ್ಞೆಗೆ ಅಡ್ವಾನಿಯವರ ವಕೀಲ ಅರ್ಜಿ ಸಲ್ಲಿಸಿದರು, ಅದನ್ನು ನಿರಾಕರಿಸಿಸಲಾಯಿತು.

೨೦೧೩ ರಲ್ಲಿ ಅಡ್ವಾನಿಯವರು ಡಿಂಪಲ್, ಟ್ವಿಂಕಲ್, ರಿಂಕಿ ಮತ್ತು ಅಕ್ಷಯ್ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಅವರನ್ನು ರಾಜೇಶ್ ಖನ್ನಾ ಅವರ ಬಂಗಲೆ 'ಆಶೀರ್ವಾದ'ದಿಂದ ಹೊರದಬ್ಬಲಾಗಿದೆ ಎಂದಿದ್ದಲ್ಲದೆ, ಮಾಸಿಕ ಪರಿಹಾರ ಹಾಗು ಭಾಂದ್ರದಲ್ಲಿ ಮನೆಯನ್ನು ಬೇಡಿಕೆಯಿಟ್ಟಿದ್ದರು. ಇದಕ್ಕೆ ಮೆಜೆಸ್ಟ್ರೇಟ್ ನ್ಯಾಯಾಲಯ ಡಿಂಪಲ್ ಕುಟುಂಬಕ್ಕೆ ನೋಟಿಸ್ ನೀಡಿತ್ತು. ಇದರ ವಿರುದ್ಧ ಡಿಂಪಲ್ ಕುಟುಂಬ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ಖ್ಯಾತ ಬಾಲಿವುಡ್ ನಟ ರಾಜೇಶ್ ಖನ್ನಾ ಜುಲೈ ೧೮, ೨೦೧೨ ರಲ್ಲಿ ನಿಧನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com