
ಚೆನ್ನೈ: ಭಾರತೀಯ ಚಿತ್ರರಂಗದ ಅಭಿಜಾತ ಕಲಾವಿದ ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ 'ಉತ್ತಮ ವಿಲನ್' ಚಿತ್ರವನ್ನು ನಿಷೇಧಿಸುವಂತೆ ವಿಶ್ವ ಹಿಂದೂ ಪರಿಷತ್ ನಡೆಸುತ್ತಿರುವ ಹೋರಾಟಕ್ಕೆ ಇದೀಗ ಮುಸ್ಲಿಂ ಮೂಲದ ಇಂಡಿಯನ್ ನ್ಯಾಷನಲ್ ಲೀಗ್ ಪಾರ್ಟಿ ಬೆಂಬಲಿಸಿದೆ.
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 'ಉತ್ತಮ ವಿಲನ್' ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಾ ದೃಶ್ಯಗಳಿದ್ದು, ಈ ಚಿತ್ರವನ್ನು ನಿಷೇಧಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಚೆನ್ನೈ ಪೊಲೀಸ್ ಕಮೀಷನರ್ ಅವರಿಗೆ ಈಗಾಗಲೇ ದೂರು ಸಲ್ಲಿಸಿದೆ.
ಕಮಲ್ ಹಾಸನ್ ಅವರು ಪಬ್ಲಿಸಿಟಿಗಾಗಿ ಚೀಪ್ ಟ್ರಿಕ್ಸ್ ಮಾಡುತ್ತಿದ್ದಾರೆ. ಈ ಹಿಂದೆ 'ವಿಶ್ವರೂಪಂ' ಚಿತ್ರದಲ್ಲೂ ಮುಸ್ಲಿಮರ ಧಾರ್ಮಿಕ ಭಾವನೆಗಳ ವಿರುದ್ಧವಾಗಿ ಚಿತ್ರ ಮಾಡಿದ್ದರು. ಹೀಗಾಗಿ 'ಉತ್ತಮ ವಿಲನ್' ಚಿತ್ರವನ್ನು ನಿಷೇಧಿಸಬೇಕೆಂದು ಮುಸ್ಲಿಂ ಸಂಘಟನೆಯೂ ಒತ್ತಾಯಿಸಿದೆ.
Advertisement