
ಬೆಂಗಳೂರು: ಶಿವರಾಜ್ ಕುಮಾರ್ ಅವರ ಹೊಸ ಚಿತ್ರವನ್ನು ಬಾಲಿವುಡ್-ಟಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಲಿದ್ದಾರೆ ಹಾಗು ಈ ಚಿತ್ರದ ಮುಹೂರ್ತ ಖ್ಯಾತ ನಟ ದಿವಂಗತ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಏಪ್ರಿಲ್ ೨೪ರಂದು ನೆರವೇರಲಿದೆ ಎಮ ಸುದ್ದಿಗಳ ಹಿನ್ನಲೆಯಲ್ಲೇ ಈ ಚಿತ್ರದ ವಸ್ತು ವೀರಪ್ಪನ್ ಎಂಬುದು ತಿಳಿದುಬಂದಿದೆ.
"ನನಗೆ ಹಲವು ವರ್ಷಗಳಿಂದ ವೀರಪ್ಪನ್ ಕಥೆಯನ್ನು ಸಿನೆಮಾ ಮಾಡಬೇಕೆಂಬ ಒಲವಿತ್ತು, ಈಗ ಸೂಕ್ತ ಸ್ಕ್ರಿಪ್ಟ್ ದೊರಕಿದ್ದು ವೀರಪ್ಪನ್ ನ ಹಲವು ಮುಖಗಳ ಅನಾವರಣ ಆಗಲಿದೆ. ಇಂತಹ ನಾಟಕೀಯ ಪೂರ್ವಜೀವನವಿದ್ದ ಇನ್ನೊಬ್ಬ ಅಪರಾಧಿ ಇಲ್ಲ. ನಾನು ಹೆಸರಿಸಲಾಗದ ಗುಪ್ತ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದೇನೆ. ಅತಿ ದೊಡ ಖಳನಾಯಕನ್ನು ಕೊಂದವನೇ ನನಗೆ ದೊಡ್ಡ ಹೀರೊ. ವೀರಪ್ಪನ್ ಉಗ್ರ ಯುಗವನ್ನು ಕೊನೆಗಾಣಿಸಿ ಆ ವ್ಯಕ್ತಿಯ ಕಥೆ ಇನ್ನು ಯಾರಿಗೂ ಹೆಚ್ಚು ತಿಳಿದಿಲ್ಲ. ಅದಕ್ಕೇ ಈ ಯೋಜನೆಯನ್ನು ವೀರಪ್ಪನ್ ಹತ್ಯೆ ಎಂದು ಕರೆದಿರುವುದು.
ಈ ಶ್ರೀಗಂಧದ ಕಳ್ಳ ಯಾಕೆ ಇಷ್ಟು ಕೆಟ್ಟ ಹೆಸರು ಪಡೆದಿದ್ದ ಎಂದರೆ ಅವನು ಮೋಸಗಾರ, ಅವನಿಗೆ ಯಾವುದೆ ಕರುಣೆ ಇರಲಿಲ್ಲ ಹಾಗೂ ಉಗ್ರನಾಗಿದ್ದ. ೮೦೦ ಕ್ಕೂ ಹೆಚ್ಚು ಆನೆ ಕೊಂದಿದ್ದಾನೆ, ೭೨ ಪೊಲೀಸರನ್ನು ಒಳಗೊಂಡಂತೆ ೨೨೭ ಜನರನ್ನು ಕೊಂದಿದ್ದಾನೆ. (ಬೇರೇ ಬೇರೆ ಮೂಲಗಳ ಪ್ರಕಾರ ಈ ಸಂಖ್ಯೆ ಬದಲಾಗುತ್ತದೆ). ೧೫ ವರ್ಷಗಳ ಕಾಲ ಭಾರತ ಸರ್ಕಾರ ಅವನ ಸಾಮ್ರಾಜ್ಯ ಕೊನೆಗಾಣಿಸಲು ೬೦೦ ಕೋಟಿ ವ್ಯಯಿಸಿದೆ. ವೀರಪ್ಪನ್ ಹತ್ಯೆ ವೀರಪ್ಪನ್ ಬಗೆಗಿನ ಕಥೆ ಇಲ್ಲ. ಇದು ವೀರಪ್ಪನ್ ನನ್ನು ಹತ್ಯೆಗೈದ ಮನುಷ್ಯನ ಬಗೆಗಿನ ಕಥೆ. ಈ ಚಿತ್ರಕ್ಕೆ ಶಿವರಾಜಕುಮಾರ ಅತ್ಯುತ್ತಮ ಆಯ್ಕೆ. ಅವರ ತಂದೆ ಡಾ. ರಾಜಕುಮಾರ್ ಅವರನ್ನು ಕೂಡ ವೀರಪ್ಪನ್ ಅಪಹರಿಸಿದ್ದ. ನಿಜ ಜೀವನದ ಮಗ, ರೀಲ್ ನಲ್ಲಿ ರಿವೆಂಜ್ ತೆಗೆದುಕೊಳ್ಳಲಿದ್ದಾರೆ" ಎಂದಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.
Advertisement