

ಲಕನೌ: ಸಂಜಯ್ ಲೀಲಾ ಭನ್ಸಾಲಿ ಅವರ 'ರಾಮ್ ಲೀಲಾ' ಚಲನಚಿತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಈ ಸಿನೆಮಾಗೆ ನೀಡಿರುವ ಸಾರ್ವಜನಿಕ ಪ್ರದರ್ಶನದ ಸೆನ್ಸಾರ್ ಸರ್ಟಿಫಿಕೆಟ್ ರದ್ದುಪಡಿಸಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ನ ಲಕನೌ ಪೀಠ ವಜಾ ಮಾಡಿದೆ.
"ಈಗಾಗಲೇ ಸಿನೆಮಾ ಸಾರ್ವಜನಿಕ ಪ್ರದರ್ಶನಕ್ಕೆ ಬಿಡುಗಡೆ ಆಗಿರುವುದರಿಂದ ಈ ಅರ್ಜಿ ನಿರರ್ಥಕ. ಆದುದರಿಂದ ಈ ಅರ್ಜಿಯನ್ನು ವಜಾ ಮಾಡಲಾಗಿದೆ" ಎಂದು ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಶ್ರೇ ನರೈನ್ ಶುಕ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಐ ಪಿ ಎಸ್ ಅಧಿಕಾರಿ ಅಮಿತಾಬ್ ಥಾಕೂರ್ ಮತ್ತು ಇನ್ನೊಬ್ಬ ವ್ಯಕ್ತಿ ೨೦೧೩ ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಸೋಮವಾರ ತೀರ್ಪು ನೀಡಿದೆ.
ಸೆನ್ಸಾರ್ ಮಂಡಲಿ ನೀಡಿದ ಸಾರ್ವಜನಿಕ ಪ್ರದರ್ಶನ ಸರ್ಟಿಫಿಕೆಟ್ ಅನ್ನು ರದ್ಧು ಮಾಡುವಂತೆ ಕೋರಿ ಅರ್ಜಿದಾರರು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
Advertisement