
ಬೆಂಗಳೂರು: ಬಾಕ್ಸಾಫೀಸ್ ನಲ್ಲಿ ನಿರೀಕ್ಷೆ ಮೀರಿ ರಣ ವಿಕ್ರಮನ ಗಳಿಕೆ ಹೆಚ್ಚಿರುವುದರಿಂದ ರಣವಿಕ್ರಮ ಚಲನಚಿತ್ರದ ನಿರ್ಮಾಪಕರು ಅತೀವ ಸಂತಸದಿಂದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಗಳಿಕೆ ೮ ಕೋಟಿ ರೂ(ಕರ್ನಾಟಕದಲ್ಲಿ ಮಾತ್ರ) ಮೀರಿದೆ. ಶುಕ್ರವಾರದ ವೇಳೆಗೆ ಅಂದರೆ ಒಂದು ವಾರಕ್ಕೆ ಈ ಗಳಿಕೆ ೧೧ ರಿಂದ ೧೨ ಕೋಟಿ ರೂ ಗೆ ಏರಲಿದೆ ಎಂಬುದು ಲೆಕ್ಕಾಚಾರ.
"ಕ್ರಿಕೆಟ್ ಅಥವಾ ಮಳೆಯಿಂದ ಗಳಿಕೆಗೆ ಯಾವುದೇ ತೊಂದರೆ ಆಗಲಿಲ್ಲ ಎಂಬುದು ಸಂತಸದ ಸಂಗತಿ. ಜನರು ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬಂದು ಸಿನೆಮಾ ನೋಡುತ್ತಿದ್ದಾರೆ. ಪುನೀತ್ ಅವರಿಗೆ ಪಕ್ಕ ಅಭಿಮಾನಿಗಳಿದ್ದಾರೆ, ಆದರೆ ಈ ಬಾರಿ ಇಡೀ ಕುಟುಂಬ ಸಮೇತ ಮಕ್ಕಳೊಂದಿಗೆ ಸಿನೆಮಾ ನೋಡಲು ಬರುತ್ತಿದ್ದಾರೆ" ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ಜಯಣ್ಣ.
"ಸದ್ಯದ ವರದಿಗಳನ್ನು ನೋಡಿದರೆ ಪುನೀತ್ ಅವರ ಹಿಂದಿನ ಸಿನೆಮಾಗಳ ದಾಖಲೆಯನ್ನು ಇದು ಮುರಿಯಲಿದೆ" ಎನ್ನುತ್ತಾರೆ ಜಯಣ್ಣ. ಅಲ್ಲದೆ ಪಾಕಿಸ್ತಾನಿ ದಿನಪತ್ರಿಕೆಯೊಂದರಲ್ಲಿ ರನ್ನ ಚಲನಚಿತ್ರದ ಬಗ್ಗೆ ಬರೆದಿರುವುದು ನಿರ್ಮಾಪಕರಿಗೆ ಇನ್ನು ಹೆಚ್ಚಿನ ಖುಷಿ ನೀಡಿದೆ. "ಅವರು ನಮ್ಮ ಸಿನೆಮಾದ ಬಗ್ಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ" ಎಂದಿದ್ದಾರೆ.
"ನಮ್ಮ ಸಿನೆಮ್ಮ ಎಲ್ಲಿಗೆ ತಲುಪಿದೆ ಎಂಬುದರ ಬಗ್ಗೆ ನಮಗೆ ಆಶ್ಚರ್ಯ ಆಗುತ್ತದೆ. ನನಗೆ ಹಣಕ್ಕಿಂತ ಸಿನೆಮಾ ಚೆನ್ನಾಗಿ ಓಡಬೇಕು ಎಂಬುದೇ ಆಸೆ" ಎನ್ನುತಾರೆ ಜಯಣ್ಣ.
Advertisement