ವೀರಪ್ಪನ್ ನಂತಹ ಕಥೆ ಮತ್ತೊಂದಿಲ್ಲ: ಆರ್ ಜಿ ವಿ

ಮಾನವ ಇತಿಹಾಸದಲ್ಲೇ ದಂತಚೋರ ವೀರಪ್ಪನ್ ನಂತಹ ಕಥೆ ಇನ್ನೊಂದಿಲ್ಲ ಎನ್ನುತ್ತಾರೆ ವೀರಪ್ಪನ್ ಹತ್ಯೆಯ ಮೇಲೆ ಬಹುಭಾಷಾ
ನಟ ಶಿವರಾಜ್ ಕುಮಾರ್ ಅವರೊಂದಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ನಟ ಶಿವರಾಜ್ ಕುಮಾರ್ ಅವರೊಂದಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Updated on

ಬೆಂಗಳೂರು: ಮಾನವ ಇತಿಹಾಸದಲ್ಲೇ ದಂತಚೋರ ವೀರಪ್ಪನ್ ನಂತಹ ಕಥೆ ಇನ್ನೊಂದಿಲ್ಲ ಎನ್ನುತ್ತಾರೆ ವೀರಪ್ಪನ್ ಹತ್ಯೆಯ ಮೇಲೆ ಬಹುಭಾಷಾ ಸಿನೆಮಾವನ್ನು ನಿರ್ದೇಶಿಸುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ವಿಶೇಷ ಕಾರ್ಯಪಡೆಯ ಕಾರ್ಯಾಚರಣೆಗಳನ್ನು ಒಳಗೊಂಡರೆ ಇದು ಹೊಸ ವಿಶ್ವವನ್ನೇ ಸೃಷ್ಟಿಸುತ್ತದೆ. "ವೀರಪ್ಪನ್ ಆಸಕ್ತಿದಾಯಕ ಮನುಷ್ಯ. ಯಾವುದೇ ಅಪರಾಧಿ ಹಿನ್ನಲೆಯ ವ್ಯಕ್ತಿಯನ್ನು ನೀವು ನೋಡಿದರೆ ಅವರ ಹಿಂದೆ ಒಂದು ದೊಡ್ಡ ಪಡೆಯೇ ಇರುತ್ತದೆ. ಆದರೆ ವೀರಪ್ಪನ್ ಪ್ರಕರಣದಲ್ಲಿ ಒಂದು ದಶಕದವರೆಗೂ ಅವನನ್ನು ಯಾರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವನು ಮೂರು ಸರ್ಕಾರಗಳಿಗೆ ಚಳ್ಳೆಹಣ್ಣು ತಿನ್ನಿಸಿದೆ. ಹಾಗೆಯೆ ದೇಶದ ಅತ್ಯುನ್ನತ ಕಾರ್ಯಪಡೆಗಳಿಗೆ ಮಣ್ಣುಮುಕ್ಕಿಸಿದ. ಅವನನ್ನು ಹಿಡಿಯಲು ಹಲವಾರು ಅಧಿಕಾರಿಗಳು ಪ್ರಾಣ ತೆತ್ತರು. ನಂತರ ಬಂದ ಆಪರೇಶನ್ ಕಕೂನ್ ಒಂದೇ ವೀರಪ್ಪನ್ನನ್ನು ಬಲಿ ತೆಗೆದುಕೊಳ್ಳಲು ಯಶಸ್ವಿಯಾಗಿದ್ದು. ಇದಕ್ಕೆ ಅತಿ ವಿಸ್ತಾರವಾದ ಸಂಪರ್ಕಗಳು, ರಹಸ್ಯ ಕಾರ್ಯಾಚರಣೆ ಮತ್ತು ಒಳ್ಳೆಯ ಯೋಜನೆಯ ಅಗತ್ಯ ಇತ್ತು. ಈ ಕಾರ್ಯಾಚರಣೆಯ ಹಿಂದೆ ಇದ್ದ ಯೋಜನೆಯ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ಮಾಡುತ್ತಿದ್ದೇನೆ" ಎನ್ನುತ್ತಾರೆ ವರ್ಮಾ.

"ವೀರಪ್ಪನ್ ಬಗ್ಗೆ ಇತರ ಸಿನೆಮಾಗಳಿವೆ. ಅವುಗಳನ್ನು ನಾನು ನೋಡಿದ್ದೇನೆ ಕೂಡ. ಆದರೆ ಈ ದರೋಡನೆಕಾರನ ಕಥೆಯನ್ನು 'ಎ ಫಾರ್ ಆಪಲ್' ಎನ್ನುವ ಹಾಗೆ ಹೇಳಲು ನನಗಿಷ್ಟವಿಲ್ಲ. ನನ್ನ ಸಿನೆಮಾ ಇನ್ನು ಆಳಕ್ಕೆ ಇಳಿಯುತ್ತದೆ. ಸಂಬಂಧ, ಅಹಂಭಾವಗಳ ಕುರಿತ ಭಾವನಾತ್ಮ ಕೋನವನ್ನು ಸಿನೆಮಾ ಮುಟ್ಟುತ್ತದೆ" ಎನ್ನುತ್ತಾರೆ ರಾಮ್ ಗೋಪಾಲ್ ವರ್ಮಾ.

"೧೦ ವರ್ಷದ ಹಿಂದೆ ವೀರಪ್ಪನ್ ಬದುಕಿದ್ದಾಗಲೇ "ವೀರಪ್ಪನ್ ಹಿಡಿಯೋಣ" ಎಂಬ ಒಂದು ಸಣ್ಣ ಬಜೆಟ್ ಸಿನೆಮಾದ ಯೋಜನೆ ಮಾಡಿಕೊಂಡಿದ್ದೆ. ವೀರಪ್ಪನ್ ಬಗ್ಗೆ ಸುಳಿವು ನೀಡುವವರಿಗೆ ನೀಡುವ ಬಹುಮಾನ ಮತ್ತು ಅವನ ಸುಳಿವು ನೀಡುವವರ ಮೂವರ ಸುತ್ತ ಸುತ್ತುವ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದೆ. ನಾನು ಚಿತ್ರೀಕರಣ ಪ್ರಾರಂಭಿಸುವ ದಿನವೇ ವೀರಪ್ಪನ್ ಹತನಾದ. ನಾವು ಚಿತ್ರೀಕರಣ ಕೈಬಿಟ್ಟೆವು" ಎನ್ನುತ್ತಾರೆ ವರ್ಮಾ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com