ಕಮಲ್ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ರಮೇಶ್ ಅರವಿಂದ್

ಮೇ ೧ ರಂದು ಬಿಡುಗಡೆಗೆ ಸಿದ್ಧವಾಗಿರುವ ಕಮಲ ಹಾಸನ್ ನಟನೆಯ ಉತ್ತಮ ವಿಲನ್ ಸಿನೆಮಾದ ನಿರೀಕ್ಷೆಗಳು ದಿನದಿನಕ್ಕೆ ಏರುತ್ತಿವೆ.
ರಮೇಶ್ ಅರವಿಂದ್
ರಮೇಶ್ ಅರವಿಂದ್

ಬೆಂಗಳೂರು: ಮೇ ೧ ರಂದು ಬಿಡುಗಡೆಗೆ ಸಿದ್ಧವಾಗಿರುವ ಕಮಲ ಹಾಸನ್ ನಟನೆಯ ಉತ್ತಮ ವಿಲನ್ ಸಿನೆಮಾದ ನಿರೀಕ್ಷೆಗಳು ದಿನದಿನಕ್ಕೆ ಏರುತ್ತಿವೆ. ಏಪ್ರಿಲ್ ೩೦ ರ ಸಿನೆಮಾದ ದುಬೈ ಪ್ರಿಮಿಯರ್ ಪ್ರದರ್ಶನಕ್ಕೆ ನಿರ್ದೇಶಕ ರಮೇಶ್ ಅರವಿಂದ್ ಸಜ್ಜಾಗುತ್ತಿದ್ದಾರೆ.

ರಮೇಶ್ ಅವರ ಉತ್ಸುಕತೆ ತಮ್ಮ ಕೆಲಸದ ಬಗ್ಗೆ ಅವರಿಗಿರುವ ನಂಬಿಕೆ ತೋರಿಸುತ್ತದೆ. "ಬಿಡುಗಡೆ ಇದು ಒಳ್ಳೆಯಯ ಸಮಯ" ಎಂದಿರುವ ರಮೇಶ್ "ನಿರ್ಮಾಣದ ಹಲವು ಹಂತಗಳಲ್ಲಿ ಸಿನೆಮಾವನ್ನು ನೋಡಿದ್ದೇನೆ. ಆದರೆ ಅಂತಿಮ ರೂಪವನ್ನು ದರ್ಶನ ಮಾಡಿದ ಮೇಲೆ ಎಲ್ಲವೂ ಸರಿಯಾಗಿದೆ ಎಂದು ಸಂತಸವಾಯಿತು. ನಾವು ಅಂದುಕೊಂಡದ್ದನ್ನು ಸಾಧಿಸಿದ್ದೇವೆ ಎಂದೆನಿಸಿತು" ಎನ್ನುತ್ತಾರೆ ರಮೇಶ್.

ಚಲನಚಿತ್ರದ ಟ್ರೇಲರ್ ಮತ್ತಿ ಟೀಸರ್ ಗಳನ್ನು ನೋಡಿದ ಮೇಲೆ ಸಿನೆಮಾದ ದ್ರಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ ಹಾಗು ನಾಯಕ ನಟನ ಗ್ಲ್ಯಾಮರಸ್ ದೃಶ್ಯಗಳನ್ನು ಜನ ಮೆಚ್ಚಿದ್ದಾರೆ. ಈ ಸಿನೆಮಾ ದೃಶ್ಯದಲ್ಲಿ ವೈಭವಯುತವಾಗಿರುವುದಲ್ಲದೆ ಇನ್ನು ಹೆಚ್ಚಿನದು ಇದೆ ಎನ್ನುತ್ತಾರೆ ರಮೇಶ್. ಹೃದಯ ಕಲಕುವ ಕಥೆಯಿದೆ ಎಂದು ಸೇರಿಸುತ್ತಾರೆ.

ಈ ಹಿಂದ ಕಮಲ ಹಾಸನ್ ನಟನೆಯ 'ರಾಮ ಶಾಮ ಭಾಮ' ಕನ್ನಡ ಚಲನಚಿತ್ರವನ್ನು ನಿರ್ದೇಶಿಸಿದ್ದ ರಮೇಶ್ ಈ ನಟನ ಇರುವಿಕೆಯೇ ಸಿನೆಮಾಗೆ ಒಂದು ತೂಕ ನೀಡುತ್ತದೆ. "ಕಮಲ್ ಅವರೊಂದಿಗಿನ ಪಯಣ ಅದ್ಭುತ. ಮೊದಲು ಸಹ ನಟನಾಗಿ ನಂತರ ಕನ್ನಡ ಸಿನೆಮಾವೊಂದರ ನಿರ್ದೇಶಕನಾಗಿ ಮತ್ತು ಈಗ ಈ ಸಿನೆಮಾ. ಅವರೊಂದಿಗೆ ಕೆಲಸ ಮಾಡಿದ್ದು ಅತ್ಯುತ್ತಮ ಅನುಭವ" ಎಂದಿದ್ದಾರೆ ರಮೇಶ್.

ಈ ಸಿನೆಮಾದಲ್ಲಿ ಪೋಷಕ ಪಾತ್ರ ನಿರ್ವಹಿಸಿರುವ ತಮಿಳಿನ ಮೇರು ನಿರ್ದೇಶಕ ದಿವಂಗತ ಕೆ ಬಾಲಚಂದರ್ ಚಿತ್ರೀಕರಣದ ವೇಳೆ ಕಮಲ್ ಮತ್ತು ರಮೇಶ್ ಒಂದೆ ರೀತಿ ಯೋಚಿಸುತ್ತಾರೆ ಎಂದು ಹೇಳಿದ ಮಾತುಗಳನ್ನು ರಮೇಶ್ ಸ್ಮರಿಸಿಕೊಳ್ಳುತ್ತಾರೆ. ನಾವಿಬ್ಬರು ಒಂದೇ ರೀತಿ ಯೋಚಿಸುತ್ತಿದ್ದನ್ನು, ಅರ್ಥೈಸುತ್ತಿದ್ದನು ನೋಡಿ ಅವರಿಗೆ ಆಶ್ಚರ್ಯವಾಗಿತ್ತು ಎನ್ನುತ್ತಾರೆ.

ಮೊದಲು ಪೋಸ್ಟರ್ ಅನ್ನು ನಕಲು ಮಾಡಿದ್ದಾರೆ ಎಂದು ನಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಸಿನೆಮಾ ಎಂದು ವಿಎಚ್ ಪಿ ದೂರಿದ್ದು ಹೀಗೆ ವಿವಾದಗಳನ್ನು ಹೊತ್ತಿಕೊಂಡೇ ಸಿದ್ಧವಾಗಿರುವ ಉತ್ತಮ ವಿಲನ್ "ಕಮಲ್ ನಟಿಸಿರುವ ಈ ಸಿನೆಮಾಗೆ 'ಯು' ಪ್ರಮಾಣಪತ್ರ ದೊರೆತಿರುವುದು ಹಲವು ಪ್ರೇಕ್ಷಕರಿಗೆ ಆಶ್ಚರ್ಯವಾಗಬಹುದು. ಇದು ಕೌಟುಂಬಿಕ ಚಿತ್ರ" ಎನ್ನುತ್ತಾರೆ ರಮೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com