'ಮಾರ್ಗರೀಟ ವಿತ್ ಅ ಸ್ಟ್ರಾ' ಚಲನಚಿತ್ರದಲ್ಲಿ ಕಲ್ಕಿ ಕೇಕ್ಲಾ
'ಮಾರ್ಗರೀಟ ವಿತ್ ಅ ಸ್ಟ್ರಾ' ಚಲನಚಿತ್ರದಲ್ಲಿ ಕಲ್ಕಿ ಕೇಕ್ಲಾ

ವಾಶಿಂಗ್ಟನ್ ಚಲನಚಿತ್ರೋತ್ಸವದಲ್ಲಿ 'ಮಾರ್ಗರೀಟಾ.." ಹಿಂದಿ ಸಿನೆಮಾಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ

ಕಲ್ಕಿ ಕೇಕ್ಲಾ ನಟನೆಯ 'ಮಾರ್ಗರೀಟ ವಿತ್ ಸ್ಟ್ರಾ' ಚಲನಚಿತ್ರಕ್ಕೆ ವಾಶಿಂಗ್ಟನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ
Published on

ಮುಂಬೈ: ಕಲ್ಕಿ ಕೇಕ್ಲಾ ನಟನೆಯ 'ಮಾರ್ಗರೀಟ ವಿತ್ ಅ ಸ್ಟ್ರಾ' ಚಲನಚಿತ್ರಕ್ಕೆ ವಾಶಿಂಗ್ಟನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರಕಿದೆ. 'ಸೆರೆಬ್ರಲ್ ಪಾಲಸಿ' ರೋಗಕ್ಕೆ ತುತ್ತಾದ ಹುಡುಗಿಯ ಕಥೆ ಹೇಳುವ ಈ ಹಿಂದಿ ಚಲನಚಿತ್ರಕ್ಕೆ ಪ್ರಶಸ್ತಿ ದೊರಕಿದೆ.

"ಫಿಲ್ಮ್ ಫೆಸ್ಟ್ ಡಿಸಿ ಯಲ್ಲಿ ಯಾವ ಚಲನಚಿತ್ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿದೆ ನೋಡಿ" ಎಂದು ಕಲ್ಕಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.


ಸಂಬಂಧಗಳ ಸಂಕೀರ್ಣತೆಯನ್ನು ಕಥೆಯಾಗಿ ಹೆಣೆದಿರುವುದಕ್ಕೆ ಹಾಗೂ ವಿಭಿನ್ನವಾಗಿ ಕಥೆ ಹೇಳಿರುವುದಕ್ಕೆ ೨೯ನೆ ವಾರ್ಷಿಕ ವಾಶಿಂಗ್ಟನ್ ಡಿಸಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಯುವ ನಿರ್ದೇಶಕನನ್ನು ಗುರುತಿಸಿದೆ. ಏಪ್ರಿಲ್ ೧೬ ರಿಂದ ಏಪ್ರಿಲ್ ೨೬ರವರೆಗೆ ಈ ಚಲನಚಿತ್ರೋತ್ಸವ ನಡೆದಿತ್ತು.

ಶೊನಾಲಿ ಬೋಸ್ ನಿರ್ದೇಶನದ ಈ ಚಿತ್ರ ಹಲವಾರು ಕೋನಗಳಿಂದ ಪಂಡಿತರ, ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ದ್ವಿಲೈಂಗಿಕ ಸಂಬಂಧ ಮತ್ತು ತನ್ನ ಲೈಂಕಿನ ಕೋನದ ಅನ್ವೇಷಣೆಯ ಕಥೆಯನ್ನು ಕೂಡ ಹೇಳುವ ಈ ಚಲನಚಿತ್ರ ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾಗಿತ್ತು.

"ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಸವಾಲುಗಳನ್ನು ಅನ್ವೇಷಿಸುವ ಇಂತಹ ಸಿನೆಮಾಗಳನ್ನು ವಿರಳವಾಗಿ ತೆರೆಯ ಮೇಲೆ ಕಾಣುತ್ತೇವೆ" ಎನ್ನುತ್ತದೆ ಸಿನೆಮೋತ್ಸವದ ಅಧಿಕೃತ ಪುಟ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com