ಪಾತ್ರಕ್ಕಾಗಿ ತುಟಿ ಸೀಳಿಸಿಕೊಳ್ಳಲು ಮುಂದಾದ ನಾಗಶೇಖರ್

ನಟ-ನಿರ್ದೇಶಕ-ನಿರ್ಮಾಪಕ ನಾಗಶೇಖರ್ ತಮ್ಮ ಮುಂದಿನ ಸಿನೆಮಾ 'ಸಂಜು ಮತ್ತು ಗೀತಾ'ದ ತಮ್ಮ ಪಾತ್ರದ ವಿಶ್ವಾಸಾರ್ಹತೆಯ ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿಗೆ...
ನಟ-ನಿರ್ದೇಶಕ-ನಿರ್ಮಾಪಕ ನಾಗಶೇಖರ್
ನಟ-ನಿರ್ದೇಶಕ-ನಿರ್ಮಾಪಕ ನಾಗಶೇಖರ್

ಬೆಂಗಳೂರು: ನಟ-ನಿರ್ದೇಶಕ-ನಿರ್ಮಾಪಕ ನಾಗಶೇಖರ್ ತಮ್ಮ ಮುಂದಿನ ಸಿನೆಮಾ 'ಸಂಜು ಮತ್ತು ಗೀತಾ'ದ ತಮ್ಮ ಪಾತ್ರದ ವಿಶ್ವಾಸಾರ್ಹತೆಯ ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದಾರೆ.

"ಪ್ಲಾಸ್ಟಿಕ್ ಸರ್ಜರಿಯ ನನ್ನ ಗೆಳೆಯ ವೈದ್ಯನೊಂದಿಗೆ ಮಾತುಕತೆ ನಡೆಸಿದ್ದೇನೆ. ಆದರೆ ಒಮ್ಮೆ ಶಸ್ತ್ರಚಿಕಿತ್ಸೆ ನಡೆದ ಮೇಲೆ ಮತ್ತೆ ಮೊದಲಿನ ಸ್ಥಿತಿಗೆ ತರುವುದು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ನಾನು ವಿದೇಶದಲ್ಲಿರುವ ನನ್ನ ಮೇಕಪ್ ಗೆಳೆಯನೊಂದಿಗೂ ಸಂಪರ್ಕದಲ್ಲಿದ್ದೇನೆ. ಪಾತ್ರಕ್ಕೆ ಬೇಕಾದ ಗೆಟಪ್ ಅನ್ನು ಮೇಕಪ್ ನಿಂದ ತರಲು ಸಾಧ್ಯ ಎಂದಿದ್ದಾನೆ. ನನ್ನ ನಿರೀಕ್ಷೆಗೆ ತಕ್ಕಂತೆ ಮೇಕಪ್ ಸಾಧ್ಯವಾಗದೆ ಹೋದರೆ, ಈ ನನ್ನ ಕನಸಿನ ಸಿನೆಮಾಗೆ ತುಟಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯ ಮೊರೆಹೋಗದೆ ಬೇರೆ ದಾರಿಯಿಲ್ಲ" ಎನ್ನುತ್ತಾರೆ ನಾಗಶೇಖರ್.

ಅವರ ಸಹೋದರ ರಾಮ್ ಚಿರು ನಿರ್ದೇಶಿಸುತ್ತಿರ್ವ ಈ ಸಿನೆಮಾದ ಚಿತ್ರೀಕರಣ ಸ್ವಲ್ಪ ತಡವಾಗಿದೆ. ಇದಕ್ಕೆ ಕಾರಣ ನೀಡುವ ನಾಗಶೇಖರ್ "ದೂರದರ್ಶನ ಹಕ್ಕುಗಳ ಮಾತುಕತೆಗೆ ಸಂಬಂಧಿಸಿದಂತೆ ಸ್ವಲ್ಪ ತಡವಾಯಿತು. ಇಂದು ಎಲ್ಲವನ್ನು ಮೊದಲಿನಿಂದ ಪ್ರಾರಂಭಿಸಬೇಕು. ಸಿನೆಮಾಗೆ ಹೂಡಿಕೆ ತರುವುದು ಕಷ್ಟದ ಕೆಲಸ. ಈಗ ಹೂಡಿಗೆದಾರರು ಸಿಕ್ಕಿದ್ದಾರೆ. ಈ ಕಾರಣದಿಂದಲೇ ಸ್ವಲ್ಪ ತಡವಾಯಿತು" ಎನ್ನುತ್ತಾರೆ.

ನವೆಂಬರ್ ೧ ರಂದು ಸಿನೆಮಾ ಮಹೂರ್ತವನ್ನು ಅಂತಿಮಗೊಳಿಸಿರುವ ಅವರು "ಕನ್ನಡ ರಾಜ್ಯೋತ್ಸವದ ದಿನದಂದು ಮಹೂರ್ತವನ್ನು ಇಟ್ಟುಕೊಳ್ಳಲು ನಿಶ್ಚಯಿಸಿದ್ದು, ಸಂಜು ಮತ್ತು ಗೀತ ಸಿನೆಮಾವನ್ನು ಎಲ್ಲ ಕನ್ನಡಿಗರಿಗೂ ಅರ್ಪಿಸಲಿದ್ದೇನೆ" ಎಂದಿದ್ದಾರೆ.

ಈ ಮಧ್ಯೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ನಾಗಶೇಖರ್ ನಿರ್ದೇಶನದ ಸಿನೆಮಾಗೆ ಮುಂದಿನ ವರ್ಷ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ತಾಪ್ಸೀ ನಟನೆಯ ಈ ಸಿನೆಮಾದ ಕನ್ನಡ ಶೀರ್ಷಿಕೆ 'ಗಡಿಯಾರ'. ಚೇತನ್ ಕನ್ನಡ ಮತ್ತು ಮಲಯಾಳಮ್ ಭಾಷೆಗಳಲ್ಲಿ ನಾಯಕನಾಗಿದ್ದರೆ, ತೆಲುಗು ಮತ್ತು ತಮಿಳು ಭಾಷೆಗಳಿಗೆ ನಾಯಕ ನಟನ ಶೋಧನೆಯಲ್ಲಿದ್ದಾರೆ ನಾಗಶೇಖರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com