ಪಾಂಡಿಯಲ್ಲಿ 'ಮಾಸ್ಟರ್ ಪೀಸ್' ಕ್ಲೈಮ್ಯಾಕ್ಸ್ ಚಿತ್ರೀಕರಣ

ಶೀರ್ಷಿಕೆಯ ಮತಹ್ವವನ್ನು ಯಶ್ ಹುಸಿಗೊಳಿಸುವುದಿಲ್ಲ ಎನ್ನುವ ನಿರ್ದೇಶಕ ಮಂಜು ಮಾಂಡವ್ಯ, 'ಮಾಸ್ಟರ್ ಪೀಸ್' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಮಾಸ್ಟರ್ ಪೀಸ್ ಸಿನೆಮಾದ ಭಿತ್ತಿಚಿತ್ರ
ಮಾಸ್ಟರ್ ಪೀಸ್ ಸಿನೆಮಾದ ಭಿತ್ತಿಚಿತ್ರ
Updated on

ಬೆಂಗಳೂರು: ಶೀರ್ಷಿಕೆಯ ಮತಹ್ವವನ್ನು ಯಶ್ ಹುಸಿಗೊಳಿಸುವುದಿಲ್ಲ ಎನ್ನುವ ನಿರ್ದೇಶಕ ಮಂಜು ಮಾಂಡವ್ಯ, 'ಮಾಸ್ಟರ್ ಪೀಸ್' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಬೇರೆ ಬೇರೆ ಆಕ್ಷನ್ ಸನ್ನಿವೇಶಗಳಿಗಾಗಿ ನಾಲ್ಕು ಜನ ಸ್ಟಂಟ್ ಮಾಸ್ತರ್ ಗಳು ಸಿನೆಮಾಗಾಗಿ ದುಡಿಯುತ್ತಿದ್ದು, ಚಿತ್ರ ಪರಿಣಾಮಕಾರಿಯಾಗಿ ಮೂಡಿ ಬರಲು ಎಲ್ಲರು ತೊಡಗಿಸಿಕೊಂಡಿದ್ದಾರಂತೆ. ಗಣೇಶ್ ತಮ್ಮ ಪಾಲಿನ ಆಕ್ಷನ್ ದೃಶ್ಯದ ಚಿತ್ರೀಕರಣ ಮುಗಿಸಿದ್ದು, ಈಗ ರವಿವರ್ಮ ಅವರ ಸರದಿ. ಕ್ಲೈಮ್ಯಾಕ್ ಸ್ಟಂಟ್ ಗಾಗಿ ತಮಿಳಿನ ವಿಜಯನ್ ಬರಲಿದ್ದಾರಂತೆ. "ನಾವು ವಿಭಿನ್ನ ಹಾಡುಗಳಿಗೆ ವಿಭಿನ್ನ ನೃತ್ಯ ನಿರ್ದೇಶಕರನ್ನು ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಹಾಗೆಯೇ ವಿಭಿನ್ನ ಆಕ್ಷನ್ ಸನ್ನಿವೇಶಗಳಿಗೂ ವಿಭಿನ್ನ ಸ್ಟಂಟ್ ಮಾಸ್ಟರ್ ಗಳನ್ನು ಉಪಯೋಗಿಸಿಕೊಂಡಿದ್ದೇವೆ" ಎನ್ನುತ್ತಾರೆ ಮಂಜು.

ಈಗ ತಂಡ ಪುದುಚೆರಿಗೆ ಪ್ರಯಾಣ ಬೆಳೆಸಿದ್ದು ೧೦ ದಿನಗಳವರೆಗೆ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಲಿದೆಯಂತೆ. "ಹಿಂದೆಂದು ಕಂಡರಿಯದ ಆಕ್ಷನ್ ದೃಶ್ಯಗಳು ಕ್ಲೈಮ್ಯಾಕ್ಸ್ ನಲ್ಲಿರುತ್ತವೆ. ಕ್ಲೈಮ್ಯಾಕ್ ಸಿನೆಮಾಗ ಅಗತ್ಯ ಅಂಗ. ಅದರಲ್ಲೂ ದೊಡ್ಡ ನಟರು ಇರುವಾಗ ಇದು ಇಂದಿನ ಅಗತ್ಯ. ಆದುದರಿಂದ ಪ್ರೇಕ್ಷಕರನ್ನು ಹಿಡಿದಿಡುವ ಕ್ಲೈಮ್ಯಾಕ್ಸ್ ಅನ್ನು ನಾವು ಯೋಜಿಸಿದ್ದೇವೆ. ಇದನ್ನು ಕಡಲ ತೀರದಲ್ಲಿ ಯೋಜಿಸಿದ್ದರಿಂದ ನಾವು ಪುದುಚೆರಿಯನ್ನು ನಿಶ್ಚಯಿಸಿದ್ದೇವೆ" ಎನ್ನುತ್ತಾರೆ ನಿರ್ದೇಶಕ.

ಇದರ ನಂತರ ಚಿತ್ರೀಕರಣ ಬಹುತೇಕ ಸಂಪೂರ್ಣವಾದಂತೆ ಎಂದು ನಿರ್ದೇಶಕ ತಿಳಿಸಿದ್ದಾರೆ. ಯಶ್ ಅವರು ಋಣಾತ್ಮಕ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಕೆರಳಿಸಿದೆ. ಸುಹಾಸಿನಿ, ಶಾನ್ವಿ ಶ್ರೀವಾಸ್ತವ ಮತ್ತು ಚಿಕ್ಕಣ್ಣ ಸಿನೆಮಾದ ಇತರ ನಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com