ಬಹುಪಾತ್ರ ವೈವಿಧ್ಯದ 'ಆಟಗಾರ'

ನಿರ್ದೇಶಕ ಚೈತನ್ಯ, 10 ಮುಖ್ಯಪಾತ್ರಗಳನ್ನಿಟ್ಟುಕೊಂಡು 'ಆಟಗಾರ'ನನ್ನು ನಿರ್ದೇಶಿಸಿದ್ದಾರೆ.
ಆಟಗಾರ ಚಿತ್ರದ ದೃಶ್ಯ
ಆಟಗಾರ ಚಿತ್ರದ ದೃಶ್ಯ

2007 ರಲ್ಲಿ ಆ ದಿನಗಳು ಚಿತ್ರ ತೆರೆ ಕಂಡಾಗ ಕನ್ನಡ ಚಿತ್ರರಂಗಕ್ಕೆ ಹೊಸ ಮಾದರಿಯ ನಿರ್ದೇಶಕನ ಪರಿಚಯವಾಗಿತ್ತು . ಸೂರ್ಯಕಾಂತಿ, ಪರಾರಿ ಚಿತ್ರಗಳಲ್ಲಿ ಹೊಸ ಪ್ರಯೋಗಗಳಿಂದಲೇ ಚಿತ್ರವನ್ನು ನಿರ್ದೇಶಿಸಿ ಜನಮೆಚ್ಚುಗೆ ಪಡೆದಿರುವ ನಿರ್ದೇಶಕ ಕೆ.ಎಂ ಚೈತನ್ಯ, ಈಗ ಆಟಗಾರ ಚಿತ್ರದಲ್ಲೂ ಹೊಸತನ್ನು ಕೊಡುವ ಸಾಹಸ ಮಾಡಿದ್ದಾರೆ.

ರಿಸ್ಕ್ ತೆಗೆದುಕೊಳ್ಳದಿದ್ದರೆ ನೀವ್ ಮತ್ತಷ್ಟು ರಿಸ್ಕ್ ನಲ್ಲಿರುತ್ತೀರಿ ಎಂಬುದನ್ನು ನಂಬಿರುವ ನಿರ್ದೇಶಕ ಚೈತನ್ಯ, 10 ಮುಖ್ಯಪಾತ್ರ, 5 ಸಹ ನಟರು 10 ಕಲಾವಿದರನ್ನಿಟ್ಟುಕೊಂಡು 'ಆಟಗಾರ'ನನ್ನು ನಿರ್ದೇಶಿಸಿದ್ದಾರೆ. ನವಗ್ರಹ ಸೇರಿದ್ದಂತೆ ಕನ್ನಡದಲ್ಲಿ ಬಹುಪಾತ್ರ ವೈವಿಧ್ಯ ಹೊಂದಿರುವ ಅನೇಕ ಸಿನಿಮಾಗಳಿವೆ. ಆದರೆ ಆ ಎಲ್ಲಾ ಸಿನಿಮಾಗಳಿಗಿಂತ ಆಟಗಾರ ವಿಭಿನ್ನವಾಗಿರಲಿದೆ. ಮುಖ್ಯ ಪಾತ್ರಗಳನ್ನು ನಿರ್ವಹಿಸಿರುವ 10 ಖ್ಯಾತನಾಮರೊಂದಿಗೆ ಚಿತ್ರೀಕರಣ ಮಾಡಿರುವುದು ಅದ್ಭುತ ಅನುಭವ ಎಂದಿದ್ದಾರೆ ಚೈತನ್ಯ.

ಉಪದೇಶ ಅಥವಾ ಉತ್ಪ್ರೇಕ್ಷೆಗಳ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರು ಖಂಡಿತವಾಗಿ ತಿರಸ್ಕರಿಸುತ್ತಾರೆ. ಥ್ರಿಲ್ಲರ್ ಚಿತ್ರಗಳನ್ನು ಕನ್ನಡದ ಜನತೆ ಒಪ್ಪುತ್ತಾರೆ. ಆಟಗಾರ ಅಂಥಹ ಸಾಲಿಗೆ ಸೇರಿದ ಚಿತ್ರ ಎಂದು ಚೈತನ್ಯ ಹೇಳಿದ್ದಾರೆ. ಪ್ರೌಢ ನಿರೂಪಣೆಯನ್ನು ಕನ್ನಡದ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬುದಕ್ಕೆ ರಂಗಿತರಂಗ, ಒಳಿದವರು ಕಂಡಂತೆ ಚಿತ್ರಗಳೇ ಉತ್ತಮ ಉದಾಹರಣೆ. ತೆಲುಗು, ತಮಿಳು ಸಿನಿಮಾಗಳಿಗೆ ಕನ್ನಡದ ಚಿತ್ರಗಳನ್ನು ಹೋಲಿಸುವುದು ಸರಿಯಲ್ಲ. ಅಲ್ಲಿನ ಪ್ರೇಕ್ಷಕರ ಆಲೋಚನೆಗಿಂತಲೂ ಇಲ್ಲಿನ ಪ್ರೇಕ್ಷಕರದ್ದು ವಿಭಿನ್ನ ಎಂಬುದು ಆಟಗಾರ ಚಿತ್ರದ ನಿರ್ದೇಶಕ ಚೈತನ್ಯ ಅಭಿಪ್ರಾಯ.
ಆರಂಭದಲ್ಲಿ ಹೊಸ ಕಲಾವಿದರಿಂದ ಈ ಚಿತ್ರವನ್ನು ತಯಾರಿಸಬೇಕೆಂದಿದ್ದೆ. ಆದರೆ ನಿರ್ಮಾಪಕ ಯೋಗಿ, ಹಿರಿಯ ಕಲಾವಿದರಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ ಆದ್ದರಿಂದ ಅನು ಪ್ರಭಾಕರ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲಾ, ಅತ್ಯುತ್ ಕುಮಾರ್ ಅವರಂತಹ ಹಿರಿಯರೊಂದಿಗೆ ಚಿತ್ರವನ್ನು ಮಾಡಲಾಯಿತು ಎಂದು ನಿರ್ದೇಶಕ ಚೈತನ್ಯ ತಿಳಿಸಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಆ ಬ್ಯಾನರ್ ನಲ್ಲಿ ಬಂದ ಉಳಿದ ಚಿತ್ರಗಳಿಗಿಂತಲೂ ಆಟಗಾರ ಸಂಪೂರ್ಣ ವಿಭಿನ್ನವಾಗಿರಲಿದೆ ಎಂದು ಚೈತನ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com