ಬೆಂಗಳೂರು: ತಮ್ಮ ಚಿತ್ರ ಬದುಕಿನ 25ನೇ ಚಿತ್ರ ಬುಗುರಿ ಯಶಸ್ಸಿನ ಸಂಭ್ರದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಅವರಿಗೆ ಗುರುವಾರ ಗಂಡು ಮಗು ಜನಿಸಿದೆ.
ಬೆಂಗಳೂರಿನ ಜಯನಗರದಲ್ಲಿರುವ ಕ್ಲೌಡ್ 9 ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆಮುದ್ದಾದ ಗಂಡು ಮಗುವಿಗೆ ಶಿಲ್ಪಾ ಗಣೇಶ್ ಜನ್ಮ ನೀಡಿದ್ದಾರೆ.
ಗಣೇಶ್ ಶಿಲ್ಪಾ ದಂಪತಿಗೆ ಈ ಹಿಂದೆ ಯುಗಾದಿ ಹಬ್ಬದ ದಿನದಂದು ಹೆಣ್ಣು ಮಗು ಜನಿಸಿತ್ತು. ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೂ ಒಂದು ದಿನ ಮೊದಲೇ ಶಿಲ್ಪಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಮನೆಗೆ ಹೊಸ ಸದಸ್ಯನ ಆಗಮನ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.