ಬೆಂಗಳೂರು: ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ' ಸಿನೆಮಾ ನಾಳೆ ಬಿಡುಗಡೆಗೆ ಸಿದ್ಧವಾಗಿದ್ದು, ಸಾಮಾನ್ಯವಾಗಿ ಅರಸಿ ಬರುವ ಪಾತ್ರಗಳಿಗಿಂತಲೂ ವಿಭಿನ್ನವಾದ ಸಾವಾಲೊಡ್ಡಿದ ಪಾತ್ರ ಇದು ಎನ್ನುತ್ತಾರೆ ಆಟಗಾರ ಸಿನೆಮಾದ ನಟ ಚಿರಂಜೀವಿ ಸರ್ಜಾ.
"ಈ ಬಿಡುಗಡೆ ನನಗೆ ವಿಶೇಷವಾದದ್ದು, ಏಕೆಂದರೆ ಇದು ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿದೆ. ಅಲ್ಲದೆ ನನ್ನ ಪಾತ್ರದ ತೀವ್ರತೆ ಎಷ್ಟಿದೆಯೆಂದರೆ ನಮ್ಮ ವೃತ್ತಿಪರ ಜೀವನಕ್ಕೆ ಇದು ಹೊಸ ಆಯಾಮ ನೀಡುತ್ತದೆ" ಎನ್ನುತ್ತಾರೆ ನಟ.
ಬಹುತಾರಾಗಣದ ಪಾತ್ರವಾಗಿರುವ ಚಿರು "ನಾನು ಸ್ಕ್ರಿಪ್ಟ್ ಓದಿದಾಕ್ಷಣ, ವಿಷಯದಲ್ಲಿ ಮುಳುಗಿಬಿಟ್ಟೆ. ನನ್ನ ಪಾತ್ರವನ್ನು ವೀಕ್ಷಕರು ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿ ಒಬ್ಬ ಹೀರೋ, ಒಬ್ಬ ಹೀರೋಯಿನ್ ಒಬ್ಬ ವಿಲನ್ ಇಲ್ಲ" ಎನ್ನುತ್ತಾರೆ.