ನಾಗಾರ್ಜುನ ಪುತ್ರನ ಸಿನೆಮಾದ ಟೀಸರ್ ಬಿಡುಗಡೆ ಮಾಡಲಿರುವ ಸಲ್ಮಾನ್ ಖಾನ್

ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಅವರ ಚೊಚ್ಚಲ ಚಲನಚಿತ್ರ 'ಅಖಿಲ್'ನ ಟೀಸರ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಂದು
ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ನಟ ಅಖಿಲ್
ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ನಟ ಅಖಿಲ್
Updated on

ಚೆನ್ನೈ: ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಅವರ ಚೊಚ್ಚಲ ಚಲನಚಿತ್ರ 'ಅಖಿಲ್'ನ ಟೀಸರ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಂದು ಬಿಡುಗಡೆ ಮಾಡಲಿದ್ದಾರೆ.

"ಕಳೆದ ವಾರ ಚಿರಂಜೀವಿ ಅವರ ೬೦ನೆ ಹುಟ್ಟುಹಬ್ಬದ ಸಂಭ್ರಮಕ್ಕೆ ಸಲ್ಮಾನ್ ಬಂದಿದ್ದಾಗ, ಅವರಿಗೆ ಟೀಸರ್ ಬಿಡುಗಡೆ ಮಾಡಲು ನಾಗಾರ್ಜುನ ಮನವಿ ಮಾಡಿದರು. ಗೆಳೆತನದ ಸಲುವಾಗಿ ಅವರು ಕೂಡಲೇ ಒಪ್ಪಿಕೊಂಡರು. ಇಂದು ಸಂಜೆ ೬:೩೦ಕ್ಕೆ ಟೀಸರ್ ಅನಾವರಣಗೊಳ್ಳಲಿದೆ" ಎಂದು ಸಿನೆಮಾ ಮೂಲಗಳು ತಿಳಿಸಿವೆ.

ಈ ಕಾರ್ಯಕ್ರಮದಲ್ಲಿ ಇನ್ನಿಬ್ಬರು ಸೂಪರ್ ಸ್ಟಾರ್ ಗಳು ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿಯಲಾಗಿದೆ.

ವಿ ವಿ ವಿನಾಯಕ್ ನಿರ್ದೇಶನದ ಈ ಚಿತ್ರದಲ್ಲಿ ಅಖಿಲ್ ಎದುರು ಸಯ್ಯೆಶಾ ನಟಿಸಿದ್ದಾರೆ. ನಿತಿನ್ ರೆಡ್ಡಿ ನಿರ್ಮಾಣದ ಈ ಇನೆಮಾದ ಸಂಗೀತ ನಿರ್ದೇಶಕರು ಅನೂಪ್ ರೂಬೆನ್ ಮತ್ತು ಎಸ್ ಎಸ್ ತಮನ್.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com