
ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ ಅವರನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
'ಮಲ್ಟಿಪಲ್ ಮ್ಯೆಲೋಮ' ಎಂಬ ಬಗೆಯ ಕ್ಯಾನ್ಸರ್ ನಿಂದ ಆದೇಶ್ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಡೆಕ್ಕನ್ ಕ್ರಾನಿಕಲ್ ವರದಿ ಮಾಡಿರುವ ಪ್ರಕಾರ ಇದೇ ಕ್ಯಾನ್ಸರ್ ಗಾಗಿ ಆದೇಶ್ ಅವರಿಗೆ ೨೦೧೦ರಲ್ಲಿ ಚಿಕಿತ್ಸೆ ನೀಡಲಾಗಿತ್ತು ಮತ್ತು ಆಗ ವೈದ್ಯರು ಕ್ಯಾನ್ಸರ್ ಸಂಪೂರ್ಣ ಗುಣಮುಖರಾಗಿರುವುದಾಗಿ ಕೂಡ ತಿಳಿಸಿದ್ದರು ಆದರೆ ಈಗ ಕ್ಯಾನ್ಸರ್ ಮರುಕಳಿಸಿದೆ.
ಆದೇಶ್ ಅವರ ಸಂಬಂಧಿ ಸಂಗೀತ ನಿರ್ದೇಶಕ ಲಲಿತ್ ಪಂಡಿತ್ ಅವರು ತಿಳಿಸಿರುವಂತೆ, ಆದೇಶ ಅವರ ಸ್ಥಿತಿ ಗಂಭೀರವಾಗಿದ್ದು ಇಂತಹ ೯೦% ಕೇಸುಗಳಲ್ಲಿ ಕ್ಯಾನ್ಸರ್ ಮರುಕಳಿಸುತ್ತದೆ ಎಂದು ತಿಳಿಸಿದ್ದಾರೆ.
ಆದೇಶ್ ಅವರ ಮೆದುಳು ಸರಿಯಾಗಿ ಕೆಲಸ ಮಾಡುತ್ತಿದ್ದು ದೇಹದಲ್ಲಿರುವ ನೋವಿನಿಂದ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಕೂಡ ತಿಳಿಸಿರುವ ಅವರು ಶೀಘ್ರ ಗುಣಮುಖರಾಗಲು ಪ್ರಾರ್ಥನೆ ಮಾಡುವಂತೆ ಅಭಿಮಾನಿಗಳಲ್ಲಿ ಕೋರಿದ್ದಾರೆ.
ಆದರ್ಶ್ ಅವರ ಜೊತೆಗಾಗರರಾದ ಶಾನ್, ಸೋನು ನಿಗಮ್, ಅಲ್ಕಾ ಯಾಗ್ನಿಕ್ ಮುಂತಾದವರು ಭೇಟಿ ನೀಡಿ ಶೀಘ್ರ ಗುಣಮುಖವಾಗುವಂತೆ ಹಸರಸಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.
Advertisement