ಸೆಪ್ಟಂಬರ್ ನಾಲ್ಕರಂದು ಬೆಂಗಳೂರಿನಲ್ಲಿ ಸಂಸ್ಕಾರ ನಾಟಕ

ಅನಾವರಣ ರಂಗ ಸಂಸ್ಥೆ ಅರ್ಪಿಸುತ್ತಿರುವ, ಮೈಸೂರಿನ ರಂಗಾಯಣ ರಂಗಕರ್ಮಿಗಳು ಅಭಿನಯಿಸಿರುವ, ಖ್ಯಾತ ಲೇಖಕ ಯು ಆರ ಅನಂತಮೂರ್ತಿ ಅವರ
ನಾಟಕ ನಡೆಯಲಿರುವ ಸ್ಥಳ- ರವೀಂದ್ರ ಕಲಾಕ್ಷೇತ್ರ
ನಾಟಕ ನಡೆಯಲಿರುವ ಸ್ಥಳ- ರವೀಂದ್ರ ಕಲಾಕ್ಷೇತ್ರ

ಬೆಂಗಳೂರು: ಅನಾವರಣ ರಂಗ ಸಂಸ್ಥೆ ಅರ್ಪಿಸುತ್ತಿರುವ, ಮೈಸೂರಿನ ರಂಗಾಯಣ ರಂಗಕರ್ಮಿಗಳು ಅಭಿನಯಿಸಿರುವ, ಖ್ಯಾತ ಲೇಖಕ ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯ ನಾಟಕ ರೂಪ ಸೆಪ್ಟಂಬರ್ ೪ ರಂದು ಪ್ರದರ್ಶನಗೊಳ್ಳಲಿದೆ.

ಈ ನಾಟಕವನ್ನು ಎಚ್ ಜನಾರ್ಧನ್ (ಜನ್ನಿ) ನಿರ್ದೇಶಿಸಿದ್ದು, ಅವರೇ ಸಂಗೀತವನ್ನು ಕೂಡ ನೀಡಿದ್ದಾರೆ. ಈ ನಾಟಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸೆಪ್ಟಂಬರ್ ನಾಲ್ಕರಂದು ಸಂಜೆ ೬:೪೫ ಕ್ಕೆ ನಡೆಯಲಿರುವ ನಾಟಕದಲ್ಲಿ ಭಾಗವಹಿಸಿ, ಪ್ರದರ್ಶನ ಯಶಸ್ವಿಗೊಳಿಸಬೇಕಾಗಿ ರಂಗತಂಡ ಕೋರಿದೆ.

ಹಿರಿಯ ರಂಗಕರ್ಮಿ ಅ ನಾ ರಮೇಶ ಅವರ ನೆನಪಿನಲ್ಲಿ ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9448130960

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com