ನಟ ನಿರುಪ್ ಭಂಡಾರಿ
ನಟ ನಿರುಪ್ ಭಂಡಾರಿ

ಚೊಚ್ಚಲ ನಟನೆಯ ದಾಖಲೆ ಪ್ರದರ್ಶನ: ರಂಗಿತರಂಗದ ನಿರುಪ್ ಭಂಡಾರಿ ಸಾಧನೆ

ಹಿಂದೆ ೧೯೮೬ರಲ್ಲಿ ಶಿವರಾಜ್ ಕುಮಾರ್ ಅವರು ಪ್ರಥಮ ಬಾರಿಗೆ ನಾಯಕ ನಟನಾಗಿದ್ದ 'ಆನಂದ್' ಬಿಡುಗಡೆಯಾಗಿದ್ದಾಗ ೨೫ ವಾರಗಳ ಕಾಲ ಸಿನೆಮಾ ಪ್ರದರ್ಶನ ಕಂಡು ದಾಖಲೆ ಸೃಷ್ಟಿಸಿತ್ತು
Published on

ಬೆಂಗಳೂರು: ಹಿಂದೆ ೧೯೮೬ರಲ್ಲಿ ಶಿವರಾಜ್ ಕುಮಾರ್ ಅವರು ಪ್ರಥಮ ಬಾರಿಗೆ ನಾಯಕ ನಟನಾಗಿದ್ದ 'ಆನಂದ್' ಬಿಡುಗಡೆಯಾಗಿದ್ದಾಗ ೨೫ ವಾರಗಳ ಕಾಲ ಸಿನೆಮಾ ಪ್ರದರ್ಶನ ಕಂಡು ದಾಖಲೆ ಸೃಷ್ಟಿಸಿತ್ತು. ಈ ದಾಖಲೆಯನ್ನು ಮುರಿಯುವುದು-ಸರಿಗಟ್ಟುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಈಗ ೨೯ ವರ್ಷಗಳ ನಂತರ ಮೊದಲ ಬಾರಿಗೆ ಬೆಳ್ಳಿತೆರೆಗೆ ರಂಗಿತರಂಗ ಸಿನೆಮಾದ ಮೂಲಕ ಪರಿಚಯವಾದ ನಟ ನಿರುಪ್ ಭಂಡಾರಿ ಈ ದಾಖಲೆ ಮುರಿಯುವತ್ತ ದಾಪುಗಾಲು ಹಾಕಿದ್ದಾರೆ.

೨೫ ವಾರಗಳ ಪ್ರದರ್ಶನ ಕಂಡು ಇನ್ನೂ ಸಶಕ್ತವಾಗಿ ಮುಂದುವರೆಯುತ್ತಿರುವ ಸಿನೆಮಾದ ಶಕ್ತಿಯನ್ನು ಸ್ಕ್ರಿಪ್ಟ್ ಗೆ ಸಲ್ಲಬೇಕು ಎನ್ನುತ್ತಾರೆ ನಟ ನಿರುಪ್.

"ನಾನು ಸಹನಿರ್ದೇಶಕನಾಗಿ ಸಿನೆಮಾದಲ್ಲಿ ಭಾಗಿಯಾಗಿದ್ದು. ನಾಯಕ ನಟನಾಗುವೆ ಯೋಜನೆಯೇ ಇರಲಿಲ್ಲ. ಕೊನೆಗೆ ಹೊಸಬನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದಾಗ ನನ್ನನ್ನೂ  ಆಡಿಶನ್ ಗೆ ಕರೆಯಲಾಯಿತು" ಎಂದು ನೆನಪಿಸಿಕೊಳ್ಳುತ್ತಾರೆ ನಿರುಪ್. ಇಲ್ಲಿ ಎಲ್ಲರೂ ಹೊಸಬರೇ ಆಗಿದ್ದರಿಂದ ನನ್ನ ಮೇಲೆ ಒತ್ತಡವೇ ಇರಲಿಲ್ಲ ಎನ್ನುವ ಅವರು ಈಗಲೂ ನಾನು ಮೊದಲಿನಂತೆಯೇ ಇದ್ದೇನೆ ಆದರೆ ಜನ ನನ್ನನ್ನು ಗುರುತಿಸುವ ರೀತಿ ಬದಲಾಗಿದೆ ಎನ್ನುತ್ತಾರೆ. "ನನ್ನ ಮುಂದಿನ ಸಿನೆಮಾ ಬಗ್ಗೆ ಅವರಿಗೆ ಕುತೂಹಲವಿದೆ. ನನ್ನ ಫೋನ್ ನಂಬರ್ ತಿಳಿದುಕೊಳ್ಳಲು ಜನ ಪ್ರಯತ್ನಿಸುತ್ತಿದ್ದಾರೆ" ಎನ್ನುತ್ತಾರೆ.

ಸಹೋದರ ಅನುಪ್ ಭಂಡಾರಿ ನಿರ್ದೇಶಿಸಿರುವ ಈ ಸಿನೆಮಾಗಿ ಟಿವಿ ವಾಹಿನಿಗಳ ಬೇಡಿಕೆ ಹೆಚ್ಚಿದೆಯಂತೆ. "ಕರ್ನಾಟಕದಾದ್ಯಂತ ಹಲವಾರು ಮಲ್ಟಿಪ್ಲೆಕ್ಸ್ ಗಳನ್ನೂ ಒಳಗೊಂಡಂತೆ ೩೦ಕ್ಕೂ ಹೆಚ್ಚು ಕಡೆ ಪ್ರದರ್ಶನ ಕಾಣುತ್ತಿರುವುದರಿಂದ ಟಿ ವಿ ಹಕ್ಕುಗಳ ಮಾರಾಟದ ಅವಶ್ಯಕತೆ ಕಂಡುಬಂದಿಲ್ಲ" ಎನ್ನುತ್ತಾರೆ.

ಹಲವಾರು ನಿರ್ದೇಶಕರು ಅವಕಾಶಗಳ ಮಹಾಪೂರವನ್ನೇ ಹರಿಸಿದ್ದರು ತಮ್ಮ ಮುಂದಿನ ಯೋಜನೆಗೆ ಸಹೋದರನ ಜೊತೆಗೆ ಸೇರಿಕೊಂಡಿರುವ ನಿರುಪ್ "ಸದ್ಯಕ್ಕ್ ಅನುಪ್ ಜೊತೆ ಕೆಲಸ ಮಾಡುವ ಬಾಂಧವ್ಯ ಚೆನ್ನಾಗಿದೆ. ಮುಂದೆ ಬೇರೆ ನಿರ್ದೇಶಕರ ಜೊತೆಗೂ ನಟಿಸಲಿದ್ದೇನೆ" ಎನ್ನುತ್ತಾರೆ.

ಡಿಸೆಂಬರ್ ೨೦ ಕ್ಕೆ ರಂಗಿತರಂಗ ತಂಡ ಬೆಳ್ಳಿ ಹಬ್ಬ ಆಚರಿಸಿಕೊಳ್ಳಲಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com