ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತವಾಗಿರುವುದಕ್ಕೆ ಸಂತಸ: ಅನೌಷ್ಕ ಶಂಕರ್

'ಹೋಮ್' ಆಲ್ಬಮ್ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿಗೊಂಡಿರುವುದಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಸಿತಾರ್ ವಾದಕಿ ಅನೌಷ್ಕ ಶಂಕರ್ ಥ್ರಿಲ್ ಆಗಿರುವುದಾಗಿ
ಸಿತಾರ್ ವಾದಕಿ ಅನೌಷ್ಕ ಶಂಕರ್
ಸಿತಾರ್ ವಾದಕಿ ಅನೌಷ್ಕ ಶಂಕರ್

ನವದೆಹಲಿ: 'ಹೋಮ್' ಆಲ್ಬಮ್ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿಗೊಂಡಿರುವುದಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಸಿತಾರ್ ವಾದಕಿ ಅನೌಷ್ಕ ಶಂಕರ್ ಥ್ರಿಲ್ ಆಗಿರುವುದಾಗಿ ತಿಳಿಸಿದ್ದಾರೆ.

ಗಿಲ್ಬರ್ಟೋ ಗಿಲ್, ಏಂಜೆಲಿಕ್ ಕಿಡ್ಜೊ, ಲೇಡಿಸ್ಮಿತ್ ಬ್ಲ್ಯಾಕ್ ಮಂಬಾಜೊ ಮತ್ತು ಜೊಂಬಾ ಪ್ರಿಸನ್ ಪ್ರಾಜೆಕ್ಟ್ ಜೊತೆಗೆ ಅನೌಷ್ಕ ಅವರ 'ಹೋಮ್' ಕೂಡ ಅತ್ಯುತ್ತಮ ವಿಶ್ವ ಸಂಗೀತ ಆಲ್ಬಮ್ ವಿಭಾಗಕ್ಕೆ ನಾಮಾಂಕಿತವಾಗಿದೆ. ಈ ಸ್ಪರ್ಧೆಗೆ ಇದು ಅನೌಷ್ಕ ಅವರ ಐದನೇ ನಾಮಾಂಕಿತ.

"ನಾನು ಥ್ರಿಲ್ ಆಗಿದ್ದೇನೆ. ಸ್ಪರ್ಧೆಗೆ ನಾಮಾಂಕಿತವಾಗುವುದು ಸಂತದಸ ವಿಷಯ. ಅದರಲ್ಲೂ ಭಾರತೀಯ ಶಾಸ್ತ್ರಿಯ ಸಂಗೀತ ರಾಗಗಳುಳ್ಳ ಸರಳ ಸಾಂಪ್ರದಾಯಿಕ ಆಲ್ಬಮ್ ನಾಮಾಂಕಿತವಾಗುವುದೆಂದರೆ.. ನನಗಷ್ಟೇ ಅಲ್ಲ ಸಂಗೀತಕ್ಕೆ ಸಂತಸದ ವಿಷಯ" ಎಂದಿದ್ದಾರೆ ಅನೌಷ್ಕ.

ದಿವಂಗತ ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಪುತ್ರಿ ಅನೌಷ್ಕ ಡಿಸೆಂಬರ್ ೧೨ ರಿಂದ ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂಬೈ, ದೆಹಲಿ, ಜೈಪುರ ಮತ್ತು ಬೆಂಗಳೂರಿನಲ್ಲಿ ಸಂಗೀತ ಕಚೇರಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com