ಪ್ರೀತಂ ಗುಬ್ಬಿ ಅವರ ಮೋಟಾರ್ ಬೈಕ್ ರೇಸ್

ಚಿತ್ರ ತಯಾರಿಸುವುದು ಒಂದು ಆಟ. ಆದರೆ ಇದರ ಮೊದಲ ನಿಯಮ ಇದನ್ನು ಆಟವಾಗಿ ಪರಿಗಣಿಸಬಾರದು. ಒಂದಕ್ಕೊಂದು ಹೆಣೆಯವ ಕೆಲಸ ಸಿನಿಮಾ...
ನಾನು ಮತ್ತು ವರಲಕ್ಷ್ಮಿ  ಸಿನಿಮಾದಲ್ಲಿ ಭಾಗವಹಿಸುವ ಬೈಕ್ ರೇಸ್ ಸವಾರರು
ನಾನು ಮತ್ತು ವರಲಕ್ಷ್ಮಿ ಸಿನಿಮಾದಲ್ಲಿ ಭಾಗವಹಿಸುವ ಬೈಕ್ ರೇಸ್ ಸವಾರರು

ಚಿತ್ರ ತಯಾರಿಸುವುದು ಒಂದು ಆಟ. ಆದರೆ ಇದರ ಮೊದಲ ನಿಯಮ ಇದನ್ನು ಆಟವಾಗಿ ಪರಿಗಣಿಸಬಾರದು. ಒಂದಕ್ಕೊಂದು ಹೆಣೆಯವ ಕೆಲಸ ಸಿನಿಮಾ ಎಂದು ನಂಬಿದವರು ಚಿತ್ರ ನಿರ್ದೇಶಕ ಪ್ರೀತಂ ಗುಬ್ಬಿ. ಬಾಕ್ಸಿಂಗ್ ಗೇಮನ್ನು ಚಿತ್ರದಲ್ಲಿ ತೋರಿಸಿದ್ದ ಪ್ರೀತಂ ಅವರು ಇದೀಗ ಮೋಟಾರ್ ರೇಸನ್ನು ತಮ್ಮ ಮುಂದಿನ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ.

ಬಾಕ್ಸರ್ ಸಿನಿಮಾ ನಂತರ ಅವರು ನಾನು ಮತ್ತು ವರಲಕ್ಷ್ಮಿ ಎಂಬ ಸಿನಿಮಾವನ್ನು ನಿರ್ದೇಶಿಸಲು ಹೊರಟಿದ್ದಾರೆ. ಇದರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬೈಕ್ ರೇಸ್ ಚಾಂಪಿಯನ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವೃತ್ತಿಪರ ಸವಾರರಾದ, ಆರು ಬಾರಿ ನ್ಯಾಶನಲ್ ಚಾಂಪಿಯನ್ ಗಳಾದ ಸಿ.ವಿಜಯ್ ಕುಮಾರ್ ಅವರು ಕೂಡ ಇದ್ದಾರೆ. ನಾಡಿದ್ದು 15 ರಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಆರಂಭವಾಗುತ್ತಿದೆ. ಚಿತ್ರದಲ್ಲಿ ಹೊಸ ಮುಖಗಳಾದ ಪೃಥ್ವಿ ಮತ್ತು ಮಾಳವಿಕಾ ಮೋಹನ್ ಅವರ ಪರಿಚಯವಾಗುತ್ತಿದೆ. ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಆಗಿದ್ದರೆ ಸಿನಿಮಾಟೋಗ್ರಾಫರ್ ಕೆಯು ಮೋಹನ್ ಅವರ ಮಗಳು ಮಾಳವಿಕ. ಪ್ರಕಾಶ್ ರೈ ಅವರು ಮೋಟೋಕ್ರಾಸ್ ತರಬೇತುದಾರರಾಗಿ ಅಭಿನಯಿಸುತ್ತಿದ್ದಾರೆ.

ಭಾರತೀಯ ಸಿಟಿಯ ಮಾನ್ಯತಾ ಟೆಕ್ ಪಾರ್ಕ್ ಹತ್ತಿರ ಮೋಟಾರ್ ರೇಸ್ ಗೆ ಟ್ರ್ಯಾಕ್ ಸಿದ್ಧಗೊಳ್ಳುತ್ತಿದೆ. ವಿಜಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಟ್ರ್ಯಾಕ್ ಸಿದ್ಧಗೊಳ್ಳುತ್ತಿದೆ. ಉತ್ತಮ ಬೈಕ್ ರೇಸ್ ಸವಾರರನ್ನು ಅವರು ವ್ಯವಸ್ಥೆಗೊಳಿಸುತ್ತಿದ್ದಾರೆ. ಸವಾರರು ಕೂಡ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲು ತುಂಬಾ ಕಾತರರಾಗಿದ್ದಾರೆ. ಭಾರತೀಯ ಸಿನಿರಂಗದಲ್ಲಿ ಮೋಟಾರ್ ರೇಸ್ ನ ಕುರಿತು ಬಂದ ಚಿತ್ರಗಳು ಕಡಿಮೆ ಎನ್ನುತ್ತಾರೆ ಪ್ರೀತಂ ಗುಬ್ಬಿ.

ಚಿತ್ರದ ಕ್ಲೈಮ್ಯಾಕ್ಸ್ ನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರ ನಿರ್ದೇಶಕರದ್ದು. ಶ್ರೀಲಂಕಾದಲ್ಲಿರುವ ಎರಡು ಟ್ರ್ಯಾಕ್ ಗಳು ಬೈಕ್ ರೇಸ್ ಗೆ ಉತ್ತಮವಾಗಿವೆ. ವಿಜಯ್ ಕುಮಾರ್ ಅವರ ಸಂಪರ್ಕದ ನೆರವಿನಿಂದ ಉಪಯೋಗಿಸಿಕೊಳ್ಳುತ್ತೇವೆ ಎನ್ನುತ್ತಾರೆ ಪ್ರೀತಂ ಗುಬ್ಬಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com