ರಂಗಿತರಂಗ ಸೇರಿದಂತೆ ಆಸ್ಕರ್ ಸ್ಪರ್ಧೆಗೆ ಎರಡು ದಕ್ಷಿಣ ಭಾರತೀಯ ಸಿನೆಮಾಗಳು ಅರ್ಹ

ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ನಾಮಕರಣ ಮಾಡಲಾಗಿರುವ ಮಾರಾಠಿ ಸಿನೆಮಾ 'ಕೋರ್ಟ್' ಜೊತೆಗೆ ಮಲೆಯಾಳಿ ಸಿನೆಮಾ 'ಜಲಂ', ಕನ್ನಡ ಸಿನೆಮಾ 'ರಂಗಿತರಂಗ'
ರಂಗಿತರಂಗ ಸಿನೆಮಾ ಭಿತ್ತಿಚಿತ್ರ
ರಂಗಿತರಂಗ ಸಿನೆಮಾ ಭಿತ್ತಿಚಿತ್ರ

ನವದೆಹಲಿ: ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ನಾಮಕರಣ ಮಾಡಲಾಗಿರುವ ಮಾರಾಠಿ ಸಿನೆಮಾ 'ಕೋರ್ಟ್' ಜೊತೆಗೆ ಮಲೆಯಾಳಂ ಸಿನೆಮಾ 'ಜಲಂ', ಕನ್ನಡ ಸಿನೆಮಾ 'ರಂಗಿತರಂಗ' ಮತ್ತು ಕೊಂಕಣಿ ಸಿನೆಮಾ 'ನಾಚೋಮ್ ಇಅ ಕುಂಪ್ಸಾಪುರ್' ಕೂಡ ಅರ್ಹತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮತ್ತೊಂದು ಕನ್ನಡ ಸಿನೆಮಾ 'ಕೇರ್ ಆಫ್ ಫುಟ್ಪಾತ್' ಕೂಡ ಲ್ಯಾಟರಲ್ ಪ್ರವೇಶ ಪಡೆದಿದೆ.

ಭಾರತೀಯ-ಆಸ್ಟ್ರೇಲಿಯನ್ ಸಿನೆಮಾ 'ಸಾಲ್ಟ್ ಬ್ರಿಜ್' ಜೊತೆಗೆ ಹಿಂದಿ ಸಿನೆಮಾ 'ಹೇಮಲ್ಕಸ' ಕೂಡ ೩೦೫ ಸಿನೆಮಾಗಳ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

'ಜಲಂ' ಮತ್ತು 'ಸಾಲ್ಟ್ ಬ್ರಿಜ್' ಸಿನೆಮಾಗಳ ಹಾಡುಗಳು ಕೂಡ ಅತ್ಯುತ್ತಮ ಅಸಲಿ ಹಾಡು ವಿಭಾಗದಲ್ಲಿ ೮೮ ಅಕಾಡೆಮಿ ಪ್ರಶಸ್ತಿ ಸ್ಪರ್ಧೆಗೆ ಒಡ್ಡಿಕೊಂಡಿವೆ.

ಚೈತನ್ಯ ತಮ್ಹಾನೆ ಅವರ ಚೊಚ್ಚಲ ಮರಾಠಿ ಚಲನಚಿತ್ರ 'ಕೋರ್ಟ್' ಅತ್ಯುತ್ತಮ ವಿದೇಶಿ ಸಿನೆಮಾ ವಿಭಾಗದಲ್ಲಿ ಭಾರತದ ಅಧಿಕೃತ ನಾಮಕರಣವಾಗಿದೆ. ಜನವರಿ ೧೪ ೨೦೧೬ ರಂದು ವಿಜೇತರ ಪಟ್ಟಿಯನ್ನು ಘೋಷಣೆ ಮಾಡಲಾಗುವುದು ಹಾಗು ಲಾಸೇಂಜಲೀಸ್ ನಲ್ಲಿ ಫೆಬ್ರವರಿ ೨೮ರಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com