ಪಾಕ್ ನಲ್ಲಿ ಮಸ್ತಾನಿಗೆ ರೆಡ್ ಸಿಗ್ನಲ್ ,ದಿಲ್ ವಾಲೆಗೆ ಗ್ರೀನ್ ಸಿಗ್ನಲ್

ಬಾಲಿವುಡ್ ನ ಎರಡು ಬಹು ನಿರೀಕ್ಷಿತ ಚಿತ್ರಗಳಾದ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಾಜಿರಾವ್ ಮಸ್ತಾನಿ...
ಬಾಜಿರಾವ್ ಮಸ್ತಾನಿ ಮತ್ತು ದಿಲ್ ವಾಲೆ ಚಿತ್ರಗಳ ಸುದ್ದಿಗೋಷ್ಠಿಯಲ್ಲಿ ಆಯಾ ಚಿತ್ರಗಳ ನಾಯಕ-ನಾಯಕಿ
ಬಾಜಿರಾವ್ ಮಸ್ತಾನಿ ಮತ್ತು ದಿಲ್ ವಾಲೆ ಚಿತ್ರಗಳ ಸುದ್ದಿಗೋಷ್ಠಿಯಲ್ಲಿ ಆಯಾ ಚಿತ್ರಗಳ ನಾಯಕ-ನಾಯಕಿ

ನವದೆಹಲಿ: ಬಾಲಿವುಡ್ ನ ಎರಡು ಬಹು ನಿರೀಕ್ಷಿತ ಚಿತ್ರಗಳಾದ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಾಜಿರಾವ್ ಮಸ್ತಾನಿ ಚಿತ್ರಕ್ಕೆ ಪಾಕಿಸ್ತಾನದಲ್ಲಿ ರೆಡ್ ಸಿಗ್ನಲ್ ಸಿಕ್ಕಿದರೆ, ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ ವಾಲೆ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಬಾಜಿರಾವ್ ಸಿನಿಮಾದಲ್ಲಿ ಇಸ್ಲಾಂ ವಿರೋಧಿ ಅಂಶಗಳಿರುವುದರಿಂದ ಪಾಕಿಸ್ತಾನದಲ್ಲಿ ಬಿಡುಗಡೆಗೆ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಚಲನಚಿತ್ರ ಸೆನ್ಸಾರ್ ಮಂಡಳಿ ತಿಳಿಸಿದೆ. ಆದರೆ ಶಾರುಕ್ ಖಾನ್, ಕಾಜೋಲ್ ಅಭಿನಯದ ದಿಲ್ ವಾಲೆ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

17ನೇ ಶತಮಾನದ ಮರಾಠ ಪೇಶ್ವೆಯ ಕಥೆಯನ್ನು ಆಧರಿಸಿರುವ ಚಿತ್ರ ಬಾಜಿರಾವ್ ಮಸ್ತಾನಿ. ಸಿನಿಮಾದ ಮುಖ್ಯ ಪಾತ್ರದಲ್ಲಿ  ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಇದ್ದಾರೆ. ಸಿನಿಮಾವು ಮೊದಲನೆಯದಾಗಿ ಹಿಂದಿ ಭಾಷೆಯಲ್ಲಿದೆ.ನಮ್ಮ ದೇಶದ ಕಾನೂನಿನಲ್ಲಿ ಹಿಂದಿ ಭಾಷೆಯ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವಿಲ್ಲ. ಎರಡನೆಯದಾಗಿ ಬಾಜಿರಾವ್ ಮಸ್ತಾನಿ ಐತಿಹಾಸಿಕ ನಾಟಕವಾಗಿದ್ದು, ಪರೋಕ್ಷವಾಗಿ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಮೊಬಶೆರ್ ಹಸನ್ ತಿಳಿಸಿದ್ದಾರೆ.  ನಾಳೆ ಬಾಜಿರಾವ್ ಸಿನಿಮಾ ಪಾಕ್ ಹೊರತುಪಡಿಸಿ ದೇಶ,ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.

ಶಾರುಕ್ ಖಾನ್, ಕಾಜೋಲ್ ಅಭಿನಯದ ದಿಲ್ ವಾಲೆ ಸಿನಿಮಾ ಕೂಡಾ ನಾಳೆ ದೇಶ, ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಇದಕ್ಕೆ  ಪಾಕಿಸ್ತಾನ ಹಸಿರು ನಿಶಾನೆ ತೋರಿಸಿದೆ. ಇದೊಂದು ಉತ್ತಮ ಚಿತ್ರವಾಗಿರುವುದರಿಂದ ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂದು ಪಾಕ್ ಸೆನ್ಸಾರ್ ಮಂಡಳಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com