ಸ್ಟಂಟ್ ಮಾಸ್ಟರ್ ರವಿವರ್ಮ ಅವರಿಗೆ ಡಾಕ್ಟರೆಟ್

ನ್ನಡ ಚಿತ್ರೋದ್ಯಮದ ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮ ಅವರಿಗೆ ಚೆನ್ನೈನ 'ಅಕಾಡೆಮಿ ಆಫ್ ಯೂನಿವರ್ಸಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ' ಗೌರವ ಡಾಕ್ಟರೆಟ್ ನೀಡಿ
ಡಾಕ್ಟರೇಟ್ ಪ್ರಧಾನ ಸಮಾರಂಭದಲ್ಲಿ ಸಾಂಗ್ಲಿಯಾನ ಜೊತೆಗೆ ರವಿವರ್ಮ
ಡಾಕ್ಟರೇಟ್ ಪ್ರಧಾನ ಸಮಾರಂಭದಲ್ಲಿ ಸಾಂಗ್ಲಿಯಾನ ಜೊತೆಗೆ ರವಿವರ್ಮ

ಬೆಂಗಳೂರು: ಕನ್ನಡ ಚಿತ್ರೋದ್ಯಮದ ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮ ಅವರಿಗೆ ಚೆನ್ನೈನ 'ಅಕಾಡೆಮಿ ಆಫ್ ಯೂನಿವರ್ಸಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ' ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ. ಕೆ ಜಿ ಎಫ್ ನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೆಟ್ ಸ್ವೀಕರಿಸಿ ಸಂತಸಗೊಂಡ ರವಿವರ್ಮ "ಈ ಗೌರವ ಸ್ವೀಕರಿಸಿ ವಿನೀತನಾಗಿದ್ದೇನೆ. ನನ್ನ ವೃತ್ತಿಯಲ್ಲಿ ಡಾಕ್ಟರೆಟ್ ದೂರದ ಮಾತು ಎಂದುಕೊಂಡಿದ್ದೆ. ಇದು 'ನನಸಾದ ಕನಸು' ಎನ್ನಲಾರೆ, ನನ್ನ ವೃತ್ತಿಯ ಜವಾಬ್ದಾರಿ ಹೆಚ್ಚಿಸಿರುವ ಗೌರವ" ಎಂದಿದ್ದಾರೆ.

ಕನ್ನಡ ಚಿತ್ರೋದ್ಯಮ ಹಾಗೂ ದಕ್ಷಿಣ ಭಾರತ ಮತ್ತು ಹಿಂದಿ ಚಿತ್ರರಂಗಗಳಲ್ಲಿ ಫೈಟ್ ಮಾಸ್ಟರ್ ಆಗಿ ತಮ್ಮದೇ ಛಾಪು ಮೂಡಿಸಿರುವುದಕ್ಕೆ ಡಾಕ್ಟರೆಟ್ ನೀಡಿ ಗೌರವಿಸಲಾಗಿದೆ. "ನನ್ನ ಕಷ್ಟದ ದುಡಿಮೆಗೆ ಹಾಗೂ ಹಲವಾರು ಪ್ರದೇಶಗಳಲ್ಲಿ ನಾನು ಹೆಸರು ಮಾಡಿರುವುದಕ್ಕೆ ಡಾಕ್ಟರೆಟ್ ನೀಡಲಾಗಿದೆ ಎಂದು ತಿಳಿಸಲಾಗಿದೆ" ಎನ್ನುತ್ತಾರೆ ರವಿವರ್ಮ.

ಬಾಲಕೃಷ್ಣ, ಸಲ್ಮಾನ್ ಖಾನ್, ಶಾರುಕ್ ಖಾನ್ ಇತ್ಯಾದಿ ದೊಡ್ಡ ದೊಡ್ಡ ನಟರೊಂದಿಗೆ ಕೆಲಸ ಮಾಡಿರುವ ರವಿವರ್ಮ ಚಿತ್ರೋದ್ಯಮದಲ್ಲಿರುವ ತೀವ್ರ ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. "ನಾನು ಬಹಳ ಸ್ಪರ್ಧಾತ್ಮಕವಾಗಿ ಕೆಲಸ ಮಾಡಿದ್ದೇನೆ. ಮೊದಲು ಸಂಖ್ಯೆ ೦ ಬರುತ್ತದೆ ಮತ್ತು ನನಗೆ ಅಲ್ಲಿರಲು ಇಷ್ಟ" ಎನ್ನುತ್ತಾರೆ ರವಿವರ್ಮ.

ಸಹೋದರರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರುಗಳನ್ನು ಒಂದುಗೂಡಿಸಿ ಚಿತ್ರವೊಂದನ್ನು ನಿರ್ದೇಶಿಸಬೇಕೆಂದು ತೊಡಗಿಸಿಕೊಂಡಿರುವ ರವಿವರ್ಮ "ಇದರ ಬಗ್ಗೆ ಕೆಲವು ದಿನಗಳಿಂದ ಮಾತನಾಡುತ್ತಿದ್ದೇನೆ. ಈಗ ಇದಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು" ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com