
ಬೆಂಗಳೂರು: ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಎಚ್ಚರಿಕೆಯ ನಡೆ ಇರಿಸುತ್ತಿರುವ ಶಾನ್ವಿ ಶ್ರೀವಾಸ್ತವ ಅವರು ನಟ ಯಶ್ ಜೊತೆಗೆ ನಟಿಸಿರುವ ಮಾಸ್ಟರ್ ಪೀಸ್ ಬಿಡುಗಡೆಯ ತವಕದಲ್ಲಿದ್ದಾರೆ.
ವಾರಾಣಾಸಿ ಮೂಲದ ಈ ನಟಿ ೨೦೧೪ರ ಚಂದ್ರಲೇಖ ಸಿನೆಮಾದ ಮೂಲಕ ಕನ್ನಡ ಚಿತ್ರೋದ್ಯಮ ಪ್ರವೇಶಿಸಿದ್ದರು. ಈಗ ಈ ಬಹುನಿರೀಕ್ಷಿತ ಚಿತ್ರದಲ್ಲಿ ತಮ್ಮನ್ನು ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ.
ಮೊದಲ ಬಾರಿಗೆ ಯಶ್ ಜೊತೆಗೆ ನಟಿಸಿರುವ ಶಾನ್ವಿ "ಇದು ಕನ್ನಡದ ನನ್ನ ಮೂರನೆ ಸಿನೆಮಾ. 'ಭಲೇ ಜೋಡಿ' ಇನ್ನೂ ಬಿಡುಗಡೆಯಾಗಬೇಕಿದೆ. ಈ ದೊಡ್ಡ ಯೋಜನೆಗೆ ನನ್ನ ಆಯ್ಕೆ ಮಾಡಿದ ಮಂಜು ಮಾಂಡವ್ಯ ಅವರಿಗೆ ಧನ್ಯವಾದಗಳು" ಎನ್ನುತ್ತಾರೆ.
"ರೋಮ್ಯಾನ್ಸ್ ಗಷ್ಟೇ ಸೀಮಿತವಾಗದೆ ಹಾಸ್ಯ ಮತ್ತು ಮನರಂಜನೆಯ ಪಾತ್ರವನ್ನು ಈ ಬಾರಿಗೆ ಮಾಡಿದ್ದೇನೆ. ಚಿತ್ರತಂಡದ ಆತ್ಮವಿಶ್ವಾಸ ಎಷ್ಟಿದೆಯೆಂದರೆ ನನಗೆ ಯಾವುದೇ ಭಯಗಳಿಲ್ಲ" ಎನ್ನುತ್ತಾರೆ ಶಾನ್ವಿ.
ಭಾಷೆಯ ತೊಡಕು ಹೊರತುಪಡಿಸಿದರೆ, ಸಿನೆಮಾದಲ್ಲಿ ಸುಸೂತ್ರವಾಗಿ ಅಭಿನಯಿಸಿದೆ ಎನ್ನುವ ಶಾನ್ವಿ "ಇದಕ್ಕೆ ಸ್ವಲ್ಪ ಹೆಚ್ಚಿಗೆಯೇ ಕೆಲಸ ಮಾಡಬೇಕಿತ್ತು. ಎಕೆಂದರ ಭಾಷೆ ಹೊಸದು ಮತ್ತು ಉದ್ದುದ್ದದ ಸಂಬಾಷಣೆಗಳಿದ್ದವು. ಅಲ್ಲದೆ ಕೆಲವು ಆಕ್ಷನ್ ದೃಶ್ಯಗಳಲ್ಲಿ ಹಗ್ಗ ಬಳಸಿ ಕಟ್ಟಡಗಳಿಂದ ಜಿಗಿಯಬೇಕಿತ್ತು. ನಾನು ಡ್ಯೂಪ್ ಬಳಸದೆ ಮಾಡಿದ್ದು ಒಳ್ಳೆಯ ಅನುಭವ" ಎನ್ನುತ್ತಾರೆ.
Advertisement